ಐಪಿಎಲ್ 2023ರ ಟೂರ್ನಿಯ ಲಖನೌ ಹಾಗೂ ಆರ್‌ಸಿಬಿ ಪಂದ್ಯ ಸೇಡಿಗೆ ಸೇಡು, ಏಟಿಗೆ ಏದಿರೇಟು ನೀಡಿದ ಪಂದ್ಯ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಗಂಭೀರ್ ಹಳೇ ವೈಷಮ್ಯ ಸ್ಫೋಟಗೊಂಡಿದೆ. ಮೈದಾನದಲ್ಲಿ ಇಬ್ಬರು ಆಟಗಾರರು ಕಿತ್ತಾಡಿದ್ದಾರೆ. ಇದರ ಪರಿಣಾಮ ಕೊಹ್ಲಿ ಹಾಗೂ ಗಂಭೀರ್‌ಗೆ ಪಂದ್ಯದ ಸಂಭಾವನೆಯ ಶೇ.100 ರಷ್ಟು ದಂಡ ವಿಧಿಸಲಾಗಿದೆ.
ಲಖನೌ(ಮೇ.02): ಲಖನೌ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಸ್ಲೆಡ್ಜಿಂಗ್, ಅತಿಯಾದ ಸಂಭ್ರಮಾಚರಣೆ, ಹಳೇ ಸೇಡಿಗೆ ತಿರುಗೇಟುಗಳಿಂದ ಕೂಡಿದ್ದ ಪಂದ್ಯವಾಗಿತ್ತು.ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಲಖನೌ ಮೆಂಟರ್ ಗೌತಮ್ ಗಂಭೀರ್ ಅಭಿಮಾನಿಗಳಿಗೆ ಬಾಯಿ ಮುಚ್ಚಲು ಸೂಚಿಸಿದ್ದ ನಡೆಗೆ, ಲಖನೌ ಮೈದಾನದಲ್ಲಿ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದರು. ಲಖನೌ ತಂಡದ ಪ್ರತಿ ವಿಕೆಟ್ ಪತನಗೊಂಡಾದ ಕೊಹ್ಲಿ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಪಂದ್ಯವನ್ನು ರೋಚಕ ರೀತಿಯಲ್ಲಿ ಗೆದ್ದ ಆರ್‌ಸಿಬಿ ಸಂಭ್ರಮ ಡಬಲ್ ಆಗಿತ್ತು. ಲಖನೌ ಆಟಾಗರರು, ಅಭಿಮಾನಿಗಳನ್ನು ಉರಿಸಿದ ಆರ್‌ಸಿಬಿ ಸಂಭ್ರಮದಲ್ಲಿ ಮುಳುಗಿತ್ತು. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ಹಳೇ ದ್ವೇಷ ಸ್ಫೋಟಗೊಂಡಿತ್ತು. ಇದರ ಪರಿಣಾಮ ಮೈದಾನದಲ್ಲೇ ಕಿತ್ತಾಡಿಕೊಂಡರು. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಉಲ್ಲಂಘಿಸಿದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್‌ಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸಲಾಗಿದೆ.
ಐಪಿಎಲ್ ಕೋಡ್ ಆಫ್ ಕಂಡಕ್ಟ್ ಪ್ರಕಾರ ಗೌತಮ್ ಗಂಭೀರ್ ಆರ್ಟಿಕಲ್ 2.21 ನಿಯಮ ಉಲ್ಲಂಘಿಸಿದ್ದಾರೆ. ಲೆವಲ್ 2 ನಿಯಮ ಉಲ್ಲಂಘಿಸಿದ ಕಾರಣ ಶೇ.100 ರಷ್ಟು ದಂಡ ವಿಧಿಸಲಾಗಿದೆ. ಇತ್ತ ಕೊಹ್ಲಿ ಕೂಡ ಆರ್ಟಿಕಲ್ 2.21 ನಿಯಮದಡಿ ಲೆವಲ್ 2 ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಪಂದ್ಯದ ಸಂಭಾವನೆಯ ಶೇಕಡಾ 100 ರಷ್ಟು ದಂಡ ವಿಧಿಸಲಾಗಿದೆ.
IPL 2023 ಆರ್‌ಸಿಬಿ ದಾಳಿಗೆ ಲಖನೌ ಉಡೀಸ್, ಗೆಲುವಿನ ಜೊತೆಗೆ ಗಂಭೀರ್‌ಗೆ ಠಕ್ಕರ್ ನೀಡಿದ ವಿರಾಟ್!
ಇನ್ನು ವಿರಾಟ್ ಕೊಹ್ಲಿ ಜೊತೆ ಹ್ಯಾಂಡ್‌ಶೇಕ್ ವೇಳೆ ನಿಯಮ ಉಲ್ಲಂಘಿಸಿದ ಲಖನೌ ತಂಡದ ನವೀನ್ ಉಲ್ ಹಕ್‌ಗೆ ಪಂದ್ಯದ ಸಂಭಾವನೆಯ ಶೇಕಡಾ 50 ರಷ್ಟು ದಂಡ ವಿಧಿಸಲಾಗಿದೆ. ನವೀನ್ ಐಪಿಎಲ್ ಕೋಡ್ ಆಫ್ ಕಂಡಕ್ಟ್‌ನ ಆರ್ಟಿಕಲ್ 2.21 ನಿಯಮದಡಿ ಲೆವಲ್ 1 ನಿಯಮ ಉಲ್ಲಂಘಿಸಿದ್ದಾರೆ. ಗೆಲುವಿನ ಬಳಿಕ ಕೊಹ್ಲಿ ಎಲ್ಲರಿಗೆ ಹಸ್ತಲಾಘವ ಮಾಡಿದ್ದಾರೆ. ಆದರೆ ನವೀನ್ ಉಲ್ ಹಕ್ ಹ್ಯಾಂಡ್‌ಶೇಕ್ ವೇಳೆ ಕೊಹ್ಲಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು.
ವಿರಾಟ್ ಕೊಹ್ಲಿ ಹಾಗೂ ಗಂಭೀರ್ ವಾಗ್ವಾದ ನಡೆಸಿದ್ದಾರೆ. ಇವರಿಬ್ಬರ ಜಗಳ ಭಾರಿ ಟ್ರೆಂಡ್ ಆಗಿದೆ. ಕೊಹ್ಲಿ ಹಾಗೂ ಗೌತಮ್ ಗಂಭೀರ್ ಸಮಾಧಾನ ಪಡಿಸಲು ಆಟಗಾರರು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ . ನಾಯಕರ ಕೆಎಲ್ ರಾಹುಲ್ ಮಧ್ಯಪ್ರವೇಶಿಸಿ ಗಂಭೀರ್ ತಡೆದಿದ್ದಾರೆ. ಬಳಿಕ ಆಕ್ಸರ್ ಪಟೇಲ್ ಕೂಡ ಗಂಭೀರ್‌ನನ್ನು ಸಮಾಧಾನಿಸಿ ದೂರ ಎಳೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಆದರೆ ಸಮಾಧಾನಗೊಂಡಿಲ್ಲ. ಗಂಭೀರ್ ಮತ್ತೆ ಕೊಹ್ಲಿ ಮೇಲೆ ಆಕ್ರೋಶ ಹೊರಹಾಕಿ ಜಗಳಕ್ಕೆ ನಿಂತು ಬಟ್ಟಿದ್ದಾರೆ. ಇತ್ತ ಕೊಹ್ಲಿ ಕೂಡ ಆಕ್ರೋಶ ಹೊರಾಹಾಕಿದ್ದಾರೆ. ಲಖನೌ ಆಟಗಾರರನ್ನು ತಳ್ಳಿ ಕೊಹ್ಲಿ ಬಳಿ ಆಗಮಿಸಿದ ಗಂಭೀರ್, ವಾಗ್ವಾದ ನಡೆಸಿದ್ದಾರೆ.
WTC Final: ವಿರಾಟ್ ಕೊಹ್ಲಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ, ಸುಳಿವು ಕೊಟ್ಟ ರವಿಶಾಸ್ತ್ರಿ!
ಈ ವಿಡಿಯೋ ಭಾರಿ ವೈರಲ್ ಆಗಿದೆ. ಐಪಿಎಲ್ 2023 ಟೂರ್ನಿಯಲ್ಲಿ ಇದುವರಿಗಿನ ಪಂದ್ಯಗಳಲ್ಲಿ ಈ ಪ್ರಮಾಣದ ಆಕ್ರೋಶ, ಸ್ಲೆಡ್ಜಿಂಗ್, ವಾಗ್ವಾದ ನಡೆದಿರಲಿಲ್ಲ. ಇದೀಗ ಲಖನೌ ಹಾಗೂ ಆರ್‌ಸಿಬಿ ನಡುವಿನ ಪಂದ್ಯ ಜಟಾಪಟಿಗೆ ಕಾರಣಾಗಿದೆ. 2013ರ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಔಟಾಗಿ ಪೆವಿಲಿಯನ್‌ನತ್ತ ಸಾಗುತ್ತಿದ್ದ ವೇಳೆ ಅಸಭ್ಯ ಕಮೆಂಟ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಕೊಹ್ಲಿ, ಗಂಭೀರ್ ವಿರುದ್ಧ ಜಗಳಕ್ಕೆ ನಿಂತಿದ್ದರು. ಅಂದು ತಳ್ಳಾಟವೇ ನಡೆದಿತ್ತು.
