ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವಿನ ಮೂಲಕ ದಾಖಲೆ ಬರೆದಿದೆ. ಆದರೆ ದಿನೇಶ್ ಕಾರ್ತಿಕ್ ಮತ್ತೆ ಟ್ರೋಲ್ ಆಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೊನ್ನೆ ಸುತ್ತಿದ ಆಟಗಾರನಾಗಿರುವ ದಿನೇಶ್ ಕಾರ್ತಿಕ್, ಕಳಪೆ ಫಾರ್ಮ್‌ಗೂ ಟ್ರೋಲ್ ಆಗಿದ್ದಾರೆ. 

ಜೈಪುರ(ಮೇ.14): ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 112 ರನ್ ಗೆಲುವು ದಾಖಲಿಸಿ ದಾಖಲೆ ಬರೆದಿದೆ. ಈ ಮೂಲಕ ಪ್ಲೇ ಆಫ್ ರೇಸ್‌ನಲ್ಲಿ ಆರ್‌ಸಿಬಿ ಪ್ರಮುಖ ತಂಡವಾಗಿ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ತಂಡವನ್ನು ಕೇವಲ 59 ರನ್‌ಗೆ ಕಟ್ಟಿಹಾಕಿದ ಆರ್‌ಸಿಬಿ ಹೊಸ ಇತಿಹಾಸ ಬರೆದಿದೆ. ಆದರೆ ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಪ್ರದರ್ಶನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆರ್‌ಸಿಬಿ ಗೆದ್ದರೂ ದಿನೇಶ್ ಕಾರ್ತಿಕ್ ಕಳಪೆ ಪ್ರದರ್ಶನಕ್ಕೆ ಟ್ರೋಲ್ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ದ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೊನ್ನೆ ಸುತ್ತಿದ ಆಟಾಗರ ಅನ್ನೋ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಡಕ್ ಔಟ್ ಆದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದರು. ಇದೀಗ ಮೊದಲ ಸ್ಥಾವನ್ನು ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ಹಂಚಿಕೊಂಡಿದ್ದಾರೆ. ಇಬ್ಬರು ಐಪಿಎಲ್ ಟೂರ್ನಿಯಲ್ಲಿ 16 ಬಾರಿ ಡಕೌಟ್ ಆಗಿದ್ದಾರೆ.

ಪಂದ್ಯ ನಡೆಯುತ್ತಿದ್ದ ಸ್ಟೇಡಿಯಂನಲ್ಲೇ ಕುಳಿತು, ಮೊಬೈಲ್‌ನಲ್ಲಿ ಮ್ಯಾಚ್‌ ವೀಕ್ಷಿಸಿದ ವ್ಯಕ್ತಿ!

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಡಕೌಟ್
ದಿನೇಶ್ ಕಾರ್ತಿಕ್: 16 ಬಾರಿ ಡಕೌಟ್
ರೋಹಿತ್ ಶರ್ಮಾ: 16 ಬಾರಿ ಡಕೌಟ್
ಮನ್ದೀಪ್ ಸಿಂಗ್: 15 ಬಾರಿ ಡಕೌಟ್
ಸುನಿಲ್ ನರೈನ್: 15 ಬಾರಿ ಡಕೌಟ್
ಅಂಬಾಟಿ ರಾಯುಡು: 14 ಬಾರಿ ಡಕೌಟ್

ದಿನೇಶ್ ಕಾರ್ತಿಕ್ ಪ್ರತಿ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಕಾರ್ತಿಕ್ ಕೈಬಿಟ್ಟು ಹೊಸ ಹಾಗೂ ಯುವ ಆಟಗಾರರಿಗೆ ಅವಕಾಶ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ವ್ಯಕ್ತವಾಗಿದೆ. 

Scroll to load tweet…

ದಿನೇಶ್ ಕಾರ್ತಿಕ್ ಫುಲ್ ಟ್ರೋಲ್ ಆಗಿದ್ದರೆ, ಆರ್‌ಸಿಬಿ ಆಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 171 ರನ್ ಸಿಡಿಸಿದ್ದ ಆರ್‌ಸಿಬಿ, ರಾಜಸ್ಥಾನ ತಂಡವನ್ನು ಕೇವಲ 59 ರನ್‌ಗೆ ಅಲೌಟ್ ಮಾಡಿತ್ತು. ಆರ್‌ಸಿಬಿ ಮಾರಕ ದಾಳಿಗೆ ರಾಜಸ್ಥಾನ ಐಪಿಎಲ್ ಇತಿಹಾಸದಲ್ಲಿ 3ನೇ ಅತೀ ಕಡಿಮೆ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಗಿದೆ.

ರಾಜಸ್ಥಾನ ಬಗ್ಗುಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು; ಪ್ಲೇ ಆಫ್‌ ಕನಸು ಜೀವಂತ

ಐಪಿಎಲ್ ಟೂರ್ನಿಯಲ್ಲಿ ಅತೀ ಕಡಿಮೆ ಸ್ಕೋರ್
49 ರನ್: ಆರ್‌ಸಿಬಿ vs ಕೆಕೆಆರ್, 2017
58 ರನ್ : ರಾಜಸ್ಥಾನ vs ಆರ್‌ಸಿಬಿ, 2009
59 ರನ್: ರಾಜಸ್ಥಾನ vs ಆರ್‌ಸಿಬಿ, 2023
66 ರನ್ : ಡೆಲ್ಲಿ vs ಮುಂಬೈ,2017

ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಸಿಡಿಸಿದ 2ನೇ ಅತೀ ಕಡಿಮೆ ಮೊತ್ತ ಇದಾಗಿದೆ.
58 ರನ್ vs ಆರ್‌ಸಿಬಿ, 2009
59 ರನ್ vs ಆರ್‌ಸಿಬಿ,2023
81 ರನ್ vs ಕೆಕಆರ್, 2011
85 ರನ್ vs ಕೆಕೆಆರ್, 2021

Scroll to load tweet…
Scroll to load tweet…
Scroll to load tweet…