ಇಂದಿಗೂ ಬಹಳಷ್ಟು ಕ್ರಿಕೆಟ್‌ ಪ್ರೇಮಿಗಳಿಗೆ ಐಪಿಎಲ್‌ ಪಂದ್ಯಗಳನ್ನು ಸ್ಡೇಡಿಯಂನ್ಲಲಿ ಹೋಗಿ ನೋಡಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಇತ್ತೀಚೆಗೆ ಇಂಥ ಅವಕಾಶ ಪಡೆದುಕೊಂಡಿದ್ದ ಒಬ್ಬ ವ್ಯಕ್ತಿ, ಪಂದ್ಯ ನಡೆಯುತ್ತಿದ್ದ ಸ್ಟೇಡಿಯಂನಲ್ಲಿ ಕುಳಿತು ಅದೇ ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಣೆ ಮಾಡಿದ ವಿಡಿಯೋ ವೈರಲ್‌ ಆಗಿದೆ. 

ಬೆಂಗಳೂರು (ಮೇ.14): ಹಾಲಿ ವರ್ಷದ ಐಪಿಎಎಲ್‌ ಟೂರ್ನಿ ಈವರೆಗೂ ಸಾಕಷ್ಟು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಹೆಚ್ಚಿನ ಕ್ರಿಕೆಟ್‌ ಅಭಿಮಾನಿಗಳು ಇಂಥ ಪಂದ್ಯಗಳನ್ನು ಸ್ಟೇಡಿಯಂನಲ್ಲಿ ವೀಕ್ಷಿಸುವ ಮೂಲಕ ರೋಚಕ ಪಂದ್ಯದ ಅನುಭವನ್ನು ಪಡೆಯಲು ಬಯಸುತ್ತಾರೆ. ಆ ಮೂಲಕ ತಮ್ಮ ಫೇವರಿಟ್‌ ಕ್ರಿಕೆಟಿಗರನ್ನು ನೇರವಾಗಿ ನೋಡಬೇಕು ಎನ್ನುವ ಹಂಬಲದಲ್ಲಿರುತ್ತಾರೆ. ಆದರೆ, ಇತ್ತೀಚೆಗೆ ಒಬ್ಬ ವ್ಯಕ್ತಿಗೆ ಐಪಿಎಲ್‌ ಪಂದ್ಯವನ್ನು ಸ್ಟೇಡಿಯಂನಲ್ಲಿಯೇ ಖುದ್ದಾಗಿ ವೀಕ್ಷಿಸಿಸುವ ಅವಕಾಶ ಸಿಕ್ಕಿತ್ತು. ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯವನ್ನು ಸ್ಟೇಡಿಯಂನಲ್ಲಿ ನೋಡುವ ಅವಕಾಶ ಈತನಿಗೆ ಸಿಕ್ಕಿತ್ತು. ಹೀಗಿದ್ದಾಗ ಸಾಮಾನ್ಯವಾಗಿ ಯಾರೊಬ್ಬರೂ ಒಂದೇ ಒಂದು ಎಸೆತ ಮಿಸ್‌ ಆಗದಂತೆ ಅಲ್ಲಿನ ಎಲ್ಲಾ ರೋಚಕತೆಯನ್ನು ಪಡೆದುಕೊಳ್ಳಲು ಬಯಸುತ್ತಾರೆ. ಆದರೆ, ಇಂಥ ಪಂದ್ಯವನ್ನು ಸ್ಟೇಡಿಯಂನಲ್ಲಿ ವೀಕ್ಷಣೆ ಮಾಡುವ ಬದಲು ಇಏ ಪಂದ್ಯವನ್ನು ಈ ವ್ಯಕ್ತಿ ಸ್ಟೇಡಿಯಂನಲ್ಲಿ ಕುಳಿತು ಮೊಬೈಲ್‌ನಲ್ಲಿ ವೀಕ್ಷಣೆ ಮಾಡಿದ್ದಾನೆ!

ಟ್ವಿಟರ್‌ ಹ್ಯಾಂಡಲ್‌ (@bijjuu11) ಒಂದರಲ್ಲಿ ಈ ವಿಡಿಯೋ ಶೇರ್‌ ಆಗಿದ್ದು, ಸಾಕಷ್ಟು ಕುತೂಹಲದ ಕಾಮೆಂಟ್‌ಗಳಿಗೂ ಸಾಕ್ಷಿಯಾಗಿದೆ. ಸ್ಟೇಡಿಯಂನಲ್ಲಿ ದೊಡ್ಡ ಪ್ರಮಾಣದ ವೀಕ್ಷಕರಿದ್ದು ಎಲ್ಲರೂ ಪಂದ್ಯವನ್ನು ವೀಕ್ಷಿಸುತ್ತಾ ಚೀರಾಡುತ್ತಾದ್ದಾರೆ. ಹಾಗೇ ಮೊಬೈಲ್‌ ಅಕ್ಕಪಕ್ಕದ ವೀವ್‌ಗಳನ್ನು ನೀಡುವಾಗ ಹಿಂದಿನ ಸೀಟ್‌ನಲ್ಲಿ ಆರಾಮವಾಗಿ ಮಲಗಿಕೊಂಡಿದ್ದಂಥ ವ್ಯಕ್ತಿ ತನ್ನ ಮೊಬೈಲ್‌ ಫೋನ್‌ನಲ್ಲಿ ಅದೇ ಮ್ಯಾಚ್‌ಅನ್ನು ವೀಕ್ಷಣೆ ಮಾಡುತ್ತಿದ್ದ.

ಕೇವಲ ಎರಡು ದಿನಗಳ ಹಿಂದೆ ಈ ವಿಡಿಯೋ ಕ್ಲಿಪ್‌ಅನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಲಾಗಿದ್ದು, ಅಂದಾಜು 11 ಸಾವಿರಕ್ಕೂ ಅಧಿಕ ಮಂದಿ ಇದರ ವೀಕ್ಷಣೆ ಮಾಡಿದ್ದಾರೆ. ಇಂದಿಗೂ ಈ ವಿಡಿಯೋ ವೀಕ್ಷಣೆ ಪ್ರಮಾಣದಲ್ಲಿ ದೊಡ್ಡ ಮಟ್ಟದ ಏರಿಕೆ ಆಗುತ್ತಿದೆ. ದೊಡ್ಡ ಪ್ರಮಾಣದ ಲೈಕ್‌ ಹಾಗೂ ಕಾಮೆಂಟ್‌ಗಳು ಕೂಡ ಬಂದಿವೆ. ಹೆಚ್ಚಿನವರಿಗೆ ಈ ವಿಡಿಯೋ ಬಹಳ ತಮಾಷೆಯಾಗಿ ಕಂಡಿದೆ

Scroll to load tweet…

ರಾಜಸ್ಥಾನ ಬಗ್ಗುಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು; ಪ್ಲೇ ಆಫ್‌ ಕನಸು ಜೀವಂತ

ಇನ್ನು ಈ ವಿಡಿಯೋ ಬಂದಿರುವ ಕಾಮೆಂಟ್‌ಗಳು ಕೂಡ ನಗು ತರಿಸುವಂತಿದೆ. 'ರಾತ್ರಿ 12 ಗಂಟೆಯ ಒಳಗಾಗಿ ಇಂಟರ್ನೆಟ್‌ ಅನ್ನು ಖಾಲಿ ಮಾಡಬೇಕಾದ ಒತ್ತಡವಿದ್ದಾಗ ಮಾತ್ರವೇ ಹೀಗಾಗುತ್ತದೆ' ಎಂದು ಒಬ್ಬರು ಬರೆದುಕೊಂಡಿದ್ದರೆ, ಇನ್ನೊಬ್ಬ ವ್ಯಕ್ತಿ, 'ಆಫೀಸ್‌ನಲ್ಲಿದ್ದುಕೊಂಡು ಝೂಮ್‌ ಮೀಟಿಂಗ್‌ನಲ್ಲಿ ಪಾಲ್ಗೊಂಡಿರುವಂತಿದೆ' ಎಂದು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ ಬಹುಶಃ ಈ ವ್ಯಕ್ತಿಗೆ ದೃಷ್ಟಿದೋಷವಿದ್ದಿರಬಹುದು ಎಂದಿದ್ದರೆ. ಮತ್ತೊಬ್ಬರು ಈತ ನಿಜಕ್ಕೂ ದಿಗ್ಗಜ ಎಂದು ಬರೆದಿದ್ದಾರೆ. ಹೆಚ್ಚಿನವರು ನಗುವಿನ ಇಮೋಜಿ ಬಳಸಿಕೊಂಡು ಪೋಸ್ಟ್‌ ಮಾಡಿದ್ದಾರೆ.

IPL 2023 ಸೆಂಚುರಿ ಸ್ಟಾರ್ಸ್‌ಗಳಿವರು..!