IPL Retention: ಸನ್‌ ರೈಸರ್ಸ್‌ನಿಂದ ವಿಲಿಯಮ್ಸನ್‌, ಪಂಜಾಬ್‌ನಿಂದ ಮಯಾಂಕ್‌ ಔಟ್‌!

2023ರ ಐಪಿಎಲ್ ಹರಾಜಿಗೆ ಎಲ್ಲಾ 10 ಆಟಗಾರರು ತನ್ನ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಂಜಾಬ್‌ ಕಿಂಗ್ಸ್‌ ತಂಡ ಮಯಾಂಕ್‌ ಅಗರ್ವಾಲ್‌ರನ್ನು ಬಿಡುಗಡೆ ಮಾಡಿದ್ದರೆ, ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ನಾಯಕ ಕೇನ್‌ ವಿಲಿಯಮ್ಸ್‌ರನ್ನು ಕೈಬಿಟ್ಟಿದೆ.

IPL 2023 Retentions and Releases of RCB CSK MI KKR and Other franchise san

ಬೆಂಗಳೂರು (ನ. 15): ಟಿ20 ವಿಶ್ವಕಪ್‌ ಕ್ರೇಜ್‌ ಮುಕ್ತಾಯವಾಗುತ್ತಿದ್ದಂತೆ ಐಪಿಎಲ್‌ ಕ್ರೇಜ್‌ ಆರಂಭವಾಗಿದೆ. ಎಲ್ಲಾ 10 ಫ್ರಾಂಚೈಸಿಗಳಿಗೆ ತನ್ನ ರಿಟೇನ್‌ ಆಟಗಾರರನ್ನು ಹಾಗೂ ರಿಲೀಸ್‌ ಮಾಡುವ ಆಟಗಾರರನ್ನು ತಿಳಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ಅದರಂತೆ, ಎಲ್ಲಾ ಫ್ರಾಂಚೈಸಿಗಳು ಯಾವೆಲ್ಲಾ ಆಟಗಾರರನ್ನು ರಿಲೀಸ್‌ ಮಾಡಲಾಗಿದೆ ಎನ್ನುವ ಮಾಹಿತಿ ನೀಡಿದೆ. ಈಗಾಗಲೇ ಇಬ್ಬರು ನಾಯಕರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ನಾಯಕ ಕೇನ್‌ ವಿಲಿಯಮ್ಸನ್‌ಗೆ ಗೇಟ್‌ ಪಾಸ್‌ ನೀಡಿದ್ದರೆ, ಪಂಜಾಬ್‌ ಕಿಂಗ್ಸ್‌ ತಂಡ ಕರ್ನಾಟಕ ಮೂಲದ ನಾಯಕ ಮಯಾಂಕ್‌ ಅಗರ್ವಾಲ್‌ಗೆ ಗೇಟ್‌ಪಾಸ್‌ ನೀಡಿದೆ. ಇನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಶರ್ಫಾನೆ ರುದರ್‌ಫೋರ್ಡ್‌ಅನ್ನು ಬಿಡುಗಡೆ ಮಾಡಿದ್ದರೆ, ಜೇಸನ್‌ ಬೆಹ್ರಾನ್‌ಡಾರ್ಫ್‌ರನ್ನು ಮುಂಬೈಗೆ ಟ್ರೇಡ್‌ ಮಾಡಿದೆ. ಫಾಫ್‌ ಡು ಪ್ಲೆಸಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ವಾನಿಂದು ಹಸರಂಗ ತಂಡದಲ್ಲಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಕೆಆರ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಗರಿಷ್ಠ ಆಟಗಾರರನ್ನು ರಿಲೀಸ್‌ ಮಾಡಿದ್ದರೆ, ಆರ್‌ಸಿಬಿ ತಂಡ ತನ್ನ ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ನಿಗಾ ವಹಿಸಿದೆ.

ಐಪಿಎಲ್‌ ಫ್ರಾಂಚೈಸಿಗಳ ರಿಲೀಸ್‌ ಲಿಸ್ಟ್‌

ಸನ್‌ರೈಸರ್ಸ್‌ ಹೈದರಾಬಾದ್‌: ಕೇನ್‌ ವಿಲಿಯಮ್ಸನ್‌, ನಿಕೋಲಸ್‌ ಪೂರನ್‌, ಜೆ.ಸುಚಿತ್‌, ಪ್ರಿಯಂ ಗಾರ್ಗ್‌, ಆರ್.ಸಮರ್ಥ್‌, ರೊಮಾರಿಯೋ ಶೆಫರ್ಡ್‌, ಸೌರಭ್‌ ದುಬೇ, ಸೀನ್‌ ಅಬ್ಬೋಟ್‌, ಶಶಾಂಕ್‌ ಸಿಂಗ್‌, ಶ್ರೇಯಸ್‌ ಗೋಪಾಲ್‌, ಸುಶಾಂತ್‌ ಮಿಶ್ರಾ, ವಿಷ್ಣು ವಿನೋದ್‌

IPL Retention: ಪ್ಯಾಟ್‌ ಕಮ್ಮಿನ್ಸ್‌, ಫಿಂಚ್‌, ರಹಾನೆ ಸೇರಿದಂತೆ 16 ಆಟಗಾರರ ರಿಲೀಸ್‌ ಮಾಡಿದ ಕೆಕೆಆರ್‌!

ಮುಂಬೈ ಇಂಡಿಯನ್ಸ್‌: ಕೈರಾನ್‌ ಪೊಲ್ಲಾರ್ಡಡ್‌, ಅನ್ಮೋಲ್‌ ಪ್ರೀತ್‌ ಸಿಂಗ್‌, ಆರ್ಯನ್‌ ಜುಯಾಲ್‌, ಬಸಿಲ್‌ ಥಂಪಿ, ಡೇನಿಯಲ್‌ ಸ್ಯಾಮ್ಸ್‌, ಫ್ಯಾಬಿಯನ್‌ ಅಲೆನ್‌, ಜೈದೇವ್‌ ಉನಾದ್ಕತ್‌, ಮಯಾಂಕ್‌ ಮರ್ಕಾಂಂಡೆ, ಎಂ.ಅಶ್ವಿನ್‌, ರಾಹುಲ್‌ ಬುದ್ಧಿ, ರಿಲ್ಲಿ ಮರಿಡೆತ್‌, ಸಂಜಯ್‌ ಯಾದವ್‌, ಟೈಮಲ್‌ ಮಿಲ್ಸ್‌

IPL Retention ಫ್ಯಾಬಿಯನ್ ಅಲೆನ್, ಉನದ್ಕಟ್ ಸೇರಿ 13 ಆಟಗಾರರ ಕೈಬಿಟ್ಟ ಮುಂಬೈ ಇಂಡಿಯನ್ಸ್!

ಚೆನ್ನೈ ಸೂಪರ್‌ ಕಿಂಗ್ಸ್: ಡ್ವೇನ್‌ ಬ್ರಾವೋ, ರಾಬಿನ್‌ ಉತ್ತಪ್ಪ, ಆಡಂ ಮಿಲ್ನೆ, ಹರಿ ನಿಶಾಂತ್‌, ಕ್ರಿಸ್‌ ಜೋರ್ಡನ್‌, ಭಗತ್‌ ವರ್ಮ, ಕೆಎಂ ಆಸಿಫ್‌, ಎನ್‌.ಜಗದೀಶನ್‌

ಪಂಜಾಬ್‌ ಕಿಂಗ್ಸ್‌: ಮಯಾಂಕ್‌ ಅಗರ್ವಾಲ್‌, ಒಡಿಯನ್‌ ಸ್ಮಿತ್‌, ವೈಭವ್‌ ಅರೋರಾ, ಬೆನ್ನೆ ಹೋವೆಲ್‌, ಇಶಾನ್‌ ಪೊರೆಲ್‌, ಆಂಶ್‌ ಪಟೇಲ್‌, ಪ್ರೇರಕ್‌ ಮಂಕಡ್‌, ಸಂದೀಪ್‌ ಶರ್ಮ, ವೃತ್ತಿಕ್‌ ಚಟರ್ಜಿ

ಕೆಕೆಆರ್‌: ಪ್ಯಾಟ್‌ ಕಮ್ಮಿನ್ಸ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಅಮಾನ್‌ ಖಾನ್‌, ಶಿವಂ ಮಾವಿ, ಮೊಹಮದ್‌ ನಬಿ, ಚಾಮಿಕಾ ಕರುಣರತ್ನೆ, ಆರನ್‌ ಫಿಂಚ್‌, ಆಲೆಕ್ಸ್‌ ಹ್ಯಾಲ್ಸ್, ಅಭಿಜಿತ್‌ ತೋಮರ್‌, ಅಜಿಂಕ್ಯ ರಹಾನೆ, ಅಶೋಕ್‌ ಶರ್ಮ, ಬಾಬಾ ಇಂದ್ರಜಿತ್‌, ಪ್ರಥಮ್‌ ಸಿಂಗ್‌, ರಮೇಶ್‌ ಕುಮಾರ್‌, ರಸಿಕ್‌ ಸಲಾಮ್‌, ಶೆಲ್ಡನ್‌ ಜಾಕ್ಸನ್‌.

ಗುಜರಾತ್‌ ಟೈಟಾನ್ಸ್‌: ರೆಹಮಾನುಲ್ಲಾ ಗುರ್ಜಾಬ್‌, ಲಾಕಿ ಫರ್ಗ್ಯುಸನ್‌, ಡೊಮಿನಿಕ್‌ ಡ್ರಾಕೆಸ್‌, ಗುರುಕೀರತ್‌ ಸಿಂಗ್‌ ಮಾನ್‌, ಜೇಸನ್‌ ರಾಯ್‌, ವರುಣ್‌ ಆರನ್‌.

ಲಕ್ನೋ ಸೂಪರ್‌ ಜೈಂಟ್ಸ್‌: ಆಂಡ್ರ್ಯೂ ಟೈ, ಅಂಕಿತ್‌ ರಜಪೂತ್‌, ದುಷ್ಮಂತ ಚಾಮೀರ, ಎವಿನ್‌ ಲೆವಿಸ್‌, ಜೇಸನ್‌ ಹೋಲ್ಡರ್‌, ಮನೀಷ್‌ ಪಾಂಡೆ, ಶಾಬಾಜ್‌ ನದೀಂ.

ಆರ್‌ಸಿಬಿ: ಜೇಸನ್ ಬೆಹ್ರೆಂಡಾರ್ಫ್, ಅನೀಶ್ವರ್ ಗೌತಮ್, ಚಾಮಾ ಮಿಲಿಂದ್, ಲುವ್ನಿತ್ ಸಿಸೋಡಿಯಾ, ಶರ್ಫಾನೆ ರುದರ್‌ಫೋರ್ಡ್

ರಾಜಸ್ಥಾನ ರಾಯಲ್ಸ್‌: ಅನುನಯ್‌ ಸಿಂಗ್‌, ಕೊರ್ಬಿನ್‌ ಬಾಷ್‌, ಡೇರಿಲ್‌ ಮಿಚೆಲ್‌, ಜಿಮ್ಮಿ ನೀಶಾನ್‌, ಕರುಣ್‌ ನಾಯರ್‌, ನಥಾನ್‌ ಕೌಲ್ಟರ್‌ ನಿಲ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಶುಭಮ್‌ ಗರ್ವಾಲ್‌, ತೇಜಸ್‌ ಬರೋಕಾ.

ಡೆಲ್ಲಿ ಕ್ಯಾಪಿಟಲ್ಸ್‌: ಶಾರ್ದೂಲ್‌ ಠಾಕೂರ್‌, ಟಿಮ್‌ ಸೀಫರ್ಟ್‌, ಅಶ್ವಿನ್‌ ಹೆಬ್ಬಾರ್‌, ಶ್ರೀಕರ್ ಭರತ್‌, ಮಂದೀಪ್‌ ಸಿಂಗ್‌.

 

Latest Videos
Follow Us:
Download App:
  • android
  • ios