Asianet Suvarna News Asianet Suvarna News

IPL Retention ಫ್ಯಾಬಿಯನ್ ಅಲೆನ್, ಉನದ್ಕಟ್ ಸೇರಿ 13 ಆಟಗಾರರ ಕೈಬಿಟ್ಟ ಮುಂಬೈ ಇಂಡಿಯನ್ಸ್!

ಐಪಿಎಲ್ 2023ರ ಟೂರ್ನಿಗೆ ಮುಂಬೈ ಇಂಡಿಯನ್ಸ್ ಭರ್ಜರಿ ತಯಾರಿ ಆರಂಭಿಸಿದೆ.  ಮಿನಿ ಹರಾಜಿಗೆ ಸಜ್ಜಾಗುತ್ತಿರುವ ಮುಂಬೈ ಇಂಡಿಯನ್ಸ್ ತಂಡದಿಂದ 13 ಆಟಗಾರರನ್ನು ಕೈಬಿಟ್ಟಿದೆ. ಮುಂಬೈ ಇಂಡಿಯನ್ಸ್ ತಂಡ ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಸಂಪೂರ್ಣ ಲಿಸ್ಟ್ ಇಲ್ಲಿದೆ.

IPL Retention Kieron Pollard to jaydev Unadkat Mumbai drop 13 players and retained 16 full list ckm
Author
First Published Nov 15, 2022, 6:25 PM IST

ಮುಂಬೈ(ನ.15): ಐಪಿಎಲ್ 2023ರ ಟೂರ್ನಿಯ ತಯಾರಿಗಳು ಭರ್ಜರಿಯಾಗಿ ಆರಂಭಗೊಂಡಿದೆ. ಇಂದು ಎಲ್ಲಾ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಪಟ್ಟಿ ಬಿಡುಗಡೆ ಮಾಡಲು ಕೊನೆಯ ದಿನವಾಗಿದೆ. ಹೀಗಾಗಿ ಎಲ್ಲಾ ತಂಡಗಳು ತಮ್ಮ ತಮ್ಮ ಪಟ್ಟಿ ಬಿಡುಗಡೆ ಮಾಡುತ್ತಿದೆ. ಮುಂಬೈ ಇಂಡಿಯನ್ಸ್ ಬರೋಬ್ಬರಿ 13 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ಐಪಿಎಲ್ ಟೂರ್ನಿಯಿಂದ ನಿವೃತ್ತಿ ಘೋಷಿಸಿದ ಕೀರನ್ ಪೋಲಾರ್ಡ್ ಸೇರಿದಂತೆ ಹಲವು ಆಟಗಾರರನ್ನು ಮುಂಬೈ ಇಂಡಿಯನ್ಸ್ ಕೈಬಿಟ್ಟಿದೆ. ಇದರಿಂದ ಮುಂಬೈ ಇಂಡಿಯನ್ಸ್ ಬಳಿ ಸದ್ಯ 20.55 ಕೋಟಿ ರೂಪಾಯಿ ಬಾಕಿ ಉಳಿದಿದೆ.

ಮುಂಬೈ ಇಂಡಿಯನ್ಸ್ ರಿಲೀಸ್ ಮಾಡಿದ ಆಟಗಾರರ ಪಟ್ಟಿ
ಕೀರನ್ ಪೋಲಾರ್ಡ್, ಅನ್ಮೋಲ್‌ಪ್ರೀತ್ ಸಿಂಗ್, ಆರ್ಯನ್ ಜುಯಲ್, ಬಸಿಲ್ ಥಂಪಿ, ಡೇನಿಯಲ್ ಸ್ಯಾಮ್ಸ್ ಫ್ಯಾಬಿಯನ್ ಅಲನ್, ಜಯದೇವ್ ಉನದ್ಕಟ್, ಮಯಾಂಕ್ ಮಾರ್ಕಂಡೆ, ಮರುಗುನ್ ಅಶ್ವಿನ್, ರಾಹುಲ್ ಬುದ್ದಿ, ರಿಲೇ ಮೆರಿಡಿತ್. ಸಂಜಯ್ ಯಾದವ್, ಟೈಮುಲಲ್ ಮಿಲ್ಸ್

IPL Retention: ಪ್ಯಾಟ್‌ ಕಮ್ಮಿನ್ಸ್‌, ಫಿಂಚ್‌ ಸೇರಿದಂತೆ 6 ಆಟಗಾರರ ರಿಲೀಸ್‌ ಮಾಡಿದ ಕೆಕೆಆರ್‌!

ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿದೊಂಡ ಆಟಗಾರರ ಪಟ್ಟಿ
ರೋಹಿತ್ ಶರ್ಮಾ(ನಾಯಕ), ಟಿಮ್ ಡೇವಿಡ್, ರಮನ್‌ದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟನ್ ಸ್ಟಬ್ಸ್, ಡೇವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡುಲ್ಕರ್, ಅರ್ಶದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆನ್‌ಡ್ರಾಫ್,  ಆಕಾಶ್ ಮಧ್ವಾಲ್

ಟ್ರೇಡಿಂಗ್ ಮೂಲಕ ಖರೀದಿಸಿದ ಆಟಗಾರರ
ಜೇಸನ್ ಬೆಹ್ರೆನ್‌ಡ್ರಾಫ್

ಮುಂಬೈ ಇಂಡಿಯನ್ಸ್‌ನಲ್ಲಿ ಬಾಕಿ ಉಳಿದ ಹಣ
20.55 ಕೋಟಿ ರೂಪಾಯಿ

ತಂಡದಲ್ಲಿ ವಿದೇಶಿ ಆಟಾಗರರ ಕೋಟಾ
3

 

ಡಿ.23ಕ್ಕೆ ಕೊಚ್ಚಿಯಲ್ಲಿ ಐಪಿಎಲ್‌ ಮಿನಿ ಹರಾಜು

2023ರ ಐಪಿಎಲ್‌ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿ.23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎಂದು ಬುಧವಾರ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ. ಹರಾಜು ಪ್ರಕ್ರಿಯೆಯು ಬೆಂಗಳೂರು ಇಲ್ಲವೇ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆಯಬಹುದು ಎನ್ನಲಾಗಿತ್ತು. ಆದರೆ ಬಿಸಿಸಿಐ ಕೊಚ್ಚಿಯಲ್ಲಿ ನಡೆಸಲು ನಿರ್ಧರಿಸಿದೆ. ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ನ.15ರೊಳಗೆ ಪ್ರಕಟಿಸಬೇಕಿದೆ. ಕಳೆದ ಹರಾಜಿನ ಬಳಿಕ ಉಳಿದ ಹಣ, ಆಟಗಾರರನ್ನು ಕೈಬಿಟ್ಟಬಳಿಕ ಉಳಿಯುವ ಹಣದ ಜೊತೆಗೆ ಹೆಚ್ಚುವರಿ 5 ಕೋಟಿ ರು. ಬಳಸಲು ಅವಕಾಶ ನೀಡಲಾಗಿದೆ.

ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡ, ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಲೀಗ್‌ ಮಾಲೀಕತ್ವ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಕೇಶ್‌ ಅಂಬಾನಿ, ಇದೀಗ ವಿಶ್ವದ ಅತ್ಯಂತ ಹಳೆಯ ಮತ್ತು ಖ್ಯಾತನಾಮ ಫುಟ್ಬಾಲ್‌ ತಂಡವಾದ ಲಿವರ್‌ಪೂಲ್‌ ಎಫ್‌ಸಿ ಖರೀದಿಗೆ ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

Follow Us:
Download App:
  • android
  • ios