IPL Retention: ಪ್ಯಾಟ್ ಕಮ್ಮಿನ್ಸ್, ಫಿಂಚ್, ರಹಾನೆ ಸೇರಿದಂತೆ 16 ಆಟಗಾರರ ರಿಲೀಸ್ ಮಾಡಿದ ಕೆಕೆಆರ್!
2023ರ ಐಪಿಎಲ್ ಹರಾಜಿಗೂ ಮುನ್ನ ಮಾಜಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡ ಹದಿನಾರು ಆಟಗಾರರನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್‌ರನ್ನು ಕೆಕೆಆರ್ ತಂಡ ರಿಲೀಸ್ ಮಾಡಿದೆ. ಅದರೊಂದಿಗೆ 2022ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡದ ಸೋಲಿಗೆ ಕಾರಣರಾಗಿದ್ದ ಅಲೆಕ್ಸ್ ಹ್ಯಾಲ್ಸ್‌ರನ್ನು ಕೆಕೆಆರ್ ಬಿಡುಗಡೆ ಮಾಡಿದೆ.
ಕೋಲ್ಕತ (ನ.15): ಈ ವರ್ಷದ ಐಪಿಎಲ್‌ನಲ್ಲಿ ಹೀನಾಯ ನಿರ್ವಹಣೆ ತೋರಿದ್ದ ಶಿವಂ ಮಾವಿಯನ್ನು ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡ 2023ರ ಐಪಿಎಲ್ ಹರಾಜಿಗೆ ಬಿಡುಗಡೆ ಮಾಡಿದೆ. ಅದರೊಂದಿಗೆ ಕೆಕೆಆರ್ ತಂಡದಲ್ಲಿ 2018ರ 19 ವಯೋಮಿತಿ ಏಕದಿನ ವಿಶ್ವಕಪ್ ಜಯಿಸಿದ ಎಲ್ಲಾ ಪ್ರತಿಭೆಗಳು ಖಾಲಿ ಆದಂತಾಗಿವೆ. ಈ ವಿಶ್ವಕಪ್‌ನಲ್ಲಿ ಗಮನಸೆಳೆದಿದ್ದ ಮೂವರು ಆಟಗಾರರಾದ ಶುಭ್‌ಮಾನ್ ಗಿಲ್, ಕಮಲೇಶ್ ನಾಗರಕೋಟಿ ಹಾಗೂ ಶಿವಂ ಮಾವಿಯನ್ನು ಕೆಕೆಆರ್ ತಂಡ ಹೊಂದಿತ್ತು. ಗಿಲ್ ಹಾಗೂ ನಾಗರಕೋಟಿಯನ್ನು ತಂಡ ಈ ಹಿಂದೆಯೇ ಕೈಬಿಟ್ಟಿದ್ದರೆ, ಗಾಯದ ಸಮಸ್ಯೆಗಳ ನಡುವೆಯೂ ಶಿವಂ ಮಾವಿ ಈವರೆಗೂ ತಂಡದಲ್ಲಿ ಉಳಿದುಕೊಳ್ಳಲು ಯಶಸ್ವಿಯಾಗಿದ್ದರು. ಆದರೆ, 2022ರ ಐಪಿಎಲ್‌ನಲ್ಲಿ ಹೀನಾಯ ನಿವರ್ಹಣೆಯೊಂದಿಗೆ ಕೆಕೆಆರ್ ತಂಡದಲ್ಲಿ ಅವಧಿ ಅವಧಿ ಕೊನೆಯಾಗಿದೆ. ಬಲಗೈ ವೇಗಿಯಾಗಿದ್ದ ಶಿವಂ ಮಾವಿ ಅಲ್ಪ ಬ್ಯಾಟಿಂಗ್ ಕೂಡ ಬಲ್ಲವರಾಗಿದ್ದರು. ಅವರೊಂದಿಗೆ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್, ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹ್ಯಾಲ್ಸ್, ಆಸ್ಟ್ರೇಲಿಯಾದ ಆರನ್ ಫಿಂಚ್, ಅಫ್ಘಾನಿಸ್ತಾನದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಮೊಹಮದ್ ನಬಿ ಹಾಗೂ ಶ್ರೀಲಂಕಾ ಆಲ್ರೌಂಡರ್ ಚಾಮಿಕಾ ಕರುಣರತ್ನೆ ತಂಡದಿಂದ ಹೊರಬಿದ್ದಿದ್ದಾರೆ.
ಕೆಕೆಆರ್ ಪರವಾಗಿ ಆಡಿದ 32 ಪಂದ್ಯಗಳಿಂದ ಮಾವಿ 8.71ರ ಎಕಾನಮಿಯಲ್ಲಿ 30 ವಿಕೆಟ್ ಉರುಳಿಸಿದ್ದಾರೆ. 2021ರ ಐಪಿಎಲ್ ಅವರ ಅತ್ಯುತ್ತಮ ವರ್ಷವಾಗಿದ್ದರೂ ಆ ವರ್ಷ 7.24ರ ಎಕಾನಮಿಯಲ್ಲಿ 11 ವಿಕೆಟ್ ಉರುಳಿಸಲು ಯಶ ಕಂಡಿದ್ದರು. ಆದರೆ, 2022ರ ಐಪಿಎಲ್‌ನಲ್ಲಿ 6 ಪಂದ್ಯಗಳಿಂದ 10.32ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು.
ಕೆಕೆಆರ್‌ಗೆ 19.5 ಕೋಟಿ ರೂಪಾಯಿ ಉಳಿತಾಯ: ಆರು ಆಟಗಾರರನ್ನು ರಿಲೀಸ್ ಮಾಡಿರುವ ಕಾರಣ ಕೆಕೆಆರ್ ತಂಡ ಹರಾಜಿನಲ್ಲಿ 19.5 ಕೋಟಿ ರೂಪಾಯಿ ಉಳಿಸಿಕೊಳ್ಳಲಿದೆ. ಶಿವಂ ಮಾವಿ ಹಾಗೂ ಪ್ಯಾಟ್ ಕಮ್ಮಿನ್ಸ್ ಇಬ್ಬರನ್ನೂ ಕೆಕೆಆರ್ ತಂಡ ತಲಾ 7.25 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಸ್ಯಾಮ್ಮ ಬಿಲ್ಲಿಂಗ್ಸ್‌ರನ್ನು2 ಕೋಟಿ ಕೊಟ್ಟು ಮೂಲಬೆಲೆಗೆ ಖರೀದಿ ಮಾಡಿದ್ದರೆ, ಮೊಹಮದ್ ನಬಿಯನ್ನು 1 ಕೋಟಿ ರೂಪಾಯಿಗೆ ಖರೀದಿಸಿದ್ದರು. ಚಾಮಿಕ ಕರುಣರತ್ನೆಯನ್ನು 50 ಲಕ್ಷ ರೂಪಾಯಿ ಖರೀದಿಸಿತ್ತು. ಇನ್ನು ಫಿಂಚ್ ಅವರನ್ನು ಅಲೆಕ್ಸ್ ಹ್ಯಾಲ್ಸ್ ಬದಲಿ ಆಟಗಾರನಾಗಿ 1.5 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
ಇನ್ನು ಟ್ರೇಡಿಂಗ್ ವಿಂಡೋ ಮೂಲಕ ಕೆಕೆಆರ್ ತಂಡ ಶಾರ್ದೂಲ್ ಠಾಕೂರ್, ಲಾಕಿ ಫರ್ಗ್ಯುಸನ್ ಹಾಗೂ ರಹಮಾನುಲ್ಲಾ ಗುರ್ಬಾಜ್‌ರನ್ನು ತಂಡಕ್ಕೆ ಖರೀದಿ ಮಾಡಿರುವ ಕಾರಣ, 18 ಕೋಟಿಗಿಂತಲೂ ಕಡಿಮೆ ಮೊತ್ತವನ್ನು ತಂಡ ಹರಾಜಿನ ವೇಳೆ ಹೊಂದಿರಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಶಾರ್ದೂಲ್ ಠಾಕೂರ್‌ಅನ್ನು ಕೆಕೆಆರ್ ತಂಡಕ್ಕೆ ಸೇರಿಸಿಕೊಂಡಿದೆ. ಅದಕ್ಕಾಗಿ ಆಲ್ರೌಂಡರ್ ಅಮಾನ್ ಖಾನ್‌ರನ್ನು ಕೆಕೆಆರ್ ನೀಡಿದೆ. ಶಾರ್ದೂಲ್ ಠಾಕೂರ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 10.75 ಕೋಟಿ ರೂಪಾಯಿ ಖರೀದಿ ಮಾಡಿತ್ತು. ಇನ್ನು ಅಮಾನ್ ಖಾನ್‌ರನ್ನು ಕೆಕೆಆರ್ 20 ಲಕ್ಷಕ್ಕೆ ಖರೀದಿ ಮಾಡಿತ್ತು.
IPL Retention: ಸನ್ ರೈಸರ್ಸ್‌ನಿಂದ ವಿಲಿಯಮ್ಸನ್, ಪಂಜಾಬ್‌ನಿಂದ ಮಯಾಂಕ್ ಔಟ್!
ಇನ್ನು ಗುಜರಾತ್ ಟೈಟಾನ್ಸ್ ತಂಡ ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಹಾಗೂ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಜ್‌ರನ್ನು ಕೆಕೆಆರ್‌ಗೆ ನೀಡಿದೆ. ಕಳೆದ ಆವೃತ್ತಿಯಲ್ಲಿ ಗುಜರಾತ್ ಪರವಾಗಿ ಫರ್ಗ್ಯುಸನ್ 13 ಪಂದ್ಯ ಆಡಿದ್ದರು. ಇನ್ನು ಜೇಸನ್ ರಾಯ್ ಬದಲಿಯಾಗಿ ಗುರ್ಬಾಜ್ ತಂಡದಲ್ಲಿ ಸ್ಥಾನ ಪಡೆದಿದ್ದರು. 2019 ರಿಂಧ 2021ರ ಅವಧಿಯಲ್ಲಿ ಫರ್ಗ್ಯುಸನ್ ಕೆಕೆಆರ್ ಪರವಾಗಿ ಆಡಿದ್ದರು. ಆದರೆ, ಮೆಗಾ ಆಕ್ಷನ್‌ನಲ್ಲಿ ಗುಜರಾತ್ ಇವರನ್ನು ಖರೀದಿ ಮಾಡಿತ್ತು.
ಕೆಕೆಆರ್ ತಂಡ: ಬಿಡುಗಡೆಯಾದವರು: ಪ್ಯಾಟ್ ಕಮ್ಮಿನ್ಸ್, ಸ್ಯಾಮ್ ಬಿಲ್ಲಿಂಗ್ಸ್, ಅಮಾನ್ ಖಾನ್, ಶಿವಂ ಮಾವಿ, ಮೊಹಮದ್ ನಬಿ, ಚಾಮಿಕಾ ಕರುಣರತ್ನೆ, ಆರನ್ ಫಿಂಚ್, ಆಲೆಕ್ಸ್ ಹ್ಯಾಲ್ಸ್, ಅಭಿಜಿತ್ ತೋಮರ್, ಅಜಿಂಕ್ಯ ರಹಾನೆ, ಅಶೋಕ್ ಶರ್ಮ, ಬಾಬಾ ಇಂದ್ರಜಿತ್, ಪ್ರಥಮ್ ಸಿಂಗ್, ರಮೇಶ್ ಕುಮಾರ್, ರಸಿಕ್ ಸಲಾಮ್, ಶೆಲ್ಡನ್ ಜಾಕ್ಸನ್.
ಟ್ರೇಡ್ ಮೂಲಕ ಖರೀದಿ: ಶಾರ್ದೂಲ್ ಠಾಕೂರ್, ರಹಮಾನುಲ್ಲಾ ಹುರ್ಜಾಬ್, ಲಾಕಿ ಫರ್ಗ್ಯುಸನ್
ತಂಡದಲ್ಲಿರುವ ಹಣ: 7.5 ಕೋಟಿ I ವಿದೇಶಿ ಆಟಗಾರರ ಖಾಲಿ ಕೋಟಾ: 3
ಹಾಲಿ ತಂಡ: ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನೀಲ್ ನಾರಾಯನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗ್ಯುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ಸಿಂಗ್ ರಾಯ್, ರಿಂಕು