ರುತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೇ ಹೋರಾಟ ನೀಡಿದರೂ ಚೆನ್ನೈ ಸೂಪರ್ ಕಿಂಗ್ಸ್ ಬೃಹತ್ ಮೊತ್ತ ಸಿಡಿಸಲು ಸಾಧ್ಯವಾಗಲಿಲ್ಲ.ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ 172 ರನ್ ಸಿಡಿಸಿದೆ. ಇದೀಗ ಗುಜರಾತ್ ಟೈಟಾನ್ಸ್ ಚೇಸಿಂಗ್ ಮಾಡುವ ವಿಶ್ವಾಸದಲ್ಲಿದೆ.
ಚೆನ್ನೈ(ಮೇ.23): ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಿಟ್ಟ ಹೋರಾಟ ನೀಡಿದೆ . ಗುಜರಾತ್ ಟೈಟಾನ್ಸ್ ಬೌಲಿಂಗ್ ದಾಳಿಗೆ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಹಾಗೂ ಡೇವೋನ್ ಕಾನ್ವೇ ದಿಟ್ಟ ಹೋರಾಟ ನೀಡಿದರೆ, ಇತರರಿಂದ ರನ್ ಹರಿದು ಬರಲಿಲ್ಲ. ಆದರೆ ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್‌ನಿಂದ ಚೆನ್ನೈ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಸಿಎಸ್‌ಕೆ 7 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿತು.
ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಿತು. ಆದರೆ ರನ್‌ರೇಟ್ ಟಿ20 ಶೈಲಿಯಲ್ಲಿ ಇರಲಿಲ್ಲ. ರುತುರಾಜ್ ಗಾಯಕ್ವಾಡ್ ಹಾಗೂ ಡೇವೋನ್ ಕಾನ್ವೇ ಜೊತೆಯಾಟದಿಂದ ಚೆನ್ನೈ ಬೃಹತ್ ಮೊತ್ತದ ಸೂಚನೆ ನೀಡಿತು. ರುತುರಾಜ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಅರ್ಧಶತಕ ಬಳಿಕ ರುತುರಾಜ್ ಗಾಯಕ್ವಾಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. 44 ಎಸೆತದಲ್ಲಿ 60 ರನ್ ಸಿಡಿಸಿ ರುತುರಾಜ್ ನಿರ್ಗಮಿಸಿದರು. ಮೊದಲ ವಿಕೆಟ್‌ಗೆ ರುತುರಾಜ್ ಹಾಗೂ ಡೇವೊನ್ 87 ರನ್ ಜೊತೆಯಾಟ ನೀಡಿದರು.
RCB ಸೋಲಿನ ಬೆನ್ನಲ್ಲೇ ಫ್ಯಾನ್ಸ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!
ಗಾಯಕ್ವಾಡ್ ಬೆನ್ನಲ್ಲೇ ಶಿವಂ ದುಬೆ ವಿಕೆಟ್ ಪತನಗೊಂಡಿತು. ದುಬೆ 1 ರನ್ ಸಿಡಿಸಿದರು. ಅಜಿಂಕ್ಯ ರಹಾನೆ ಆಟ 17 ರನ್‌ಗೆ ಅಂತ್ಯವಾಯಿತು. ಇತ್ತ ಡೇವೇನ್ ಕಾನ್ವೇ 34 ಎಸೆತದಲ್ಲಿ 40 ರನ್ ಸಿಡಿಸಿ ಔಟಾದರು. ಅಂಬಾಟಿ ರಾಯುಡು 9 ಎಸೆತದಲ್ಲಿ 17 ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ ಹೋರಾಟ ನೀಡುವ ಸೂಚನೆ ನೀಡಿದರು. ಇತ್ತ ನಾಯಕ ಎಂ.ಎಸ್ ಧೋನಿ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು.
ರವೀಂದ್ರ ಜಡೇದಾ 16 ಎಸೆತದಲ್ಲಿ 22 ರನ್ ಸಿಡಿಸಿದರು. ಇತ್ತ ಮೊಯಿನ್ ಆಲಿ ಅಜೇಯ 9 ರನ್ ಸಿಡಿಸಿದರು. ಈ ಮೂಲಕ ಸಿಎಸ್‌ಕೆ 7 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿತು.
ನನ್ನ ಟಿ20 ಆಟ ಕುಸಿದಿಲ್ಲ: ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ..!
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಸಲಿದೆ. ಹೀಗಾಗಿ ಗೆಲುವಿಗಾಗಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಜಿದ್ದಾಜಿದ್ದಿನ ಹೋರಾಟ ನಡೆಸಲಿದೆ. ಇಲ್ಲಿ ಸೋತ ತಂಡಕ್ಕೆ ಫೈನಲ್‌ಗೆ ಎಂಟ್ರಿ ಕೊಡಲು ಮತ್ತೊಂದು ಅವಕಾಶವಿದೆ. ಎರಡೇ ಕ್ವಾಲಿಫೈಯರ್ ಪಂದ್ಯ ಆಡಿ ಫೈನಲ್ ಪ್ರವೇಶಿಸಲು ಅವಕಾಶವಿದೆ. ಮೇಯ.24 ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹೋರಾಟ ನಡೆಸಲಿದೆ. ಮೇ.26 ರಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆದರೆ, ಮೇ.28 ರಂದು ಪ್ರಶಸ್ತಿಗಾಗಿ ಹೋರಾಟ ನಡೆಯಲಿದೆ.
