ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿತಮ್ಮ ಪ್ರದರ್ಶನದ ಮೂಲಕ ಮಿಂಚಿದ ಆರ್‌ಸಿಬಿ ರನ್ ಮಷೀನ್ನನ್ನ ಟಿ20 ಆಟ ಕುಸಿಯುತ್ತಿದೆ ಎಂದು ನನಗನ್ನಿಸುತ್ತಿಲ್ಲ ಎಂದ ಕೊಹ್ಲಿ
ಬೆಂಗಳೂರು(ಮೇ.23): ಜನ ನನ್ನ ಟಿ20 ಆಟ ಕುಸಿಯುತ್ತಿದೆ ಎಂದುಕೊಳ್ಳುತ್ತಿದ್ದಾರೆ. ಆದರೆ ನಾನು ಮತ್ತೆ ನನ್ನ ಶ್ರೇಷ್ಠ ಆಟವಾಡುತ್ತಿದ್ದೇನೆ ಎಂದು ಟೀಕಾಕಾರಿಗೆ ವಿರಾಟ್ ಕೊಹ್ಲಿ ತೀಕ್ಷ್ಣ ಉತ್ತರ ನೀಡಿದ್ದಾರೆ. ಭಾನುವಾರ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ನ ತಮ್ಮ 7ನೇ ಶತಕ ಸಿಡಿಸಿದ ಅವರು ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದರು.
‘ನನ್ನ ಟಿ20 ಆಟ ಕುಸಿಯುತ್ತಿದೆ ಎಂದು ನನಗನ್ನಿಸುತ್ತಿಲ್ಲ. ನನ್ನ ಆಟವನ್ನು ಆನಂದಿಸುತ್ತಿದ್ದೇನೆ. ಇದೇ ರೀತಿಯಲ್ಲೇ ನಾನು ಟಿ20 ಆಟವಾಡುತ್ತೇನೆ. ಸಂದರ್ಭವನ್ನು ಅರ್ಥೈಸಿ ಅದಕ್ಕೆ ತಕ್ಕಂತೆ ಆಟವಾಡಬೇಕು. ನನ್ನ ಆಟದ ಬಗ್ಗೆ ಹೆಮ್ಮೆಯಿದೆ’ ಎಂದಿದ್ದಾರೆ. ಕೊಹ್ಲಿ, ರೋಹಿತ್ ಸೇರಿದಂತೆ ಹಿರಿಯರನ್ನು ಭಾರತ ಟಿ20 ತಂಡದಿಂದ ಕೈ ಬಿಡಬೇಕು ಎಂದು ಈಗಾಗಲೇ ಹಲವರು ಹೇಳಿಕೆ ನೀಡಿದ್ದರು.
ಪರಿಸ್ಥಿತಿಗನುಗುಣವಾಗಿ ಆಡುತ್ತೇನೆ:
ಸ್ಟ್ರೈಕ್‌ರೇಟ್ ಕುರಿತಂತೆ ಹಲವು ಮಾತನಾಡುತ್ತಾರೆ. ನಾನು ಈಗಾಗಲೇ ಆ ಬಗ್ಗೆ ಹೇಳಿದ್ದೇನೆ. ನಾನು ಯಾವಾಗಲೂ ಪರಿಸ್ಥಿತಿಗನುಗುಣವಾಗಿ ಆಡುತ್ತೇನೆ. ತಂಡವು ನನ್ನಿಂದ ಏನು ಬಯಸುತ್ತದೋ ಆ ರೀತಿ ನಾನು ಆಡುತ್ತೇನೆ. ಈ ರೀತಿ ಆಡುವ ಬಗ್ಗೆ ನನಗೆ ಹೆಮ್ಮೆಯಿದೆ. ಈ ರೀತಿ ನಾನು ಹಲವು ವರ್ಷಗಳಿಂದ ಆಡುತ್ತಾ ಬಂದಿದ್ದೇನೆ. ನನಗೆ ನನ್ನ ಪ್ರದರ್ಶನದ ಬಗ್ಗೆ ಖುಷಿಯಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಕೊಹ್ಲಿ 7ನೇ ಶತಕ; ಹೊಸ ದಾಖಲೆ ನಿರ್ಮಾಣ
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 7ನೇ ಶತಕ ಪೂರ್ತಿಗೊಳಿಸಿದ್ದು, ಟೂರ್ನಿಯ ಇತಿಹಾಸದಲ್ಲೇ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಭಾನುವಾರ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 61 ಎಸೆತಗಳನ್ನು ಎದುರಿಸಿ ಅಜೇಯ 101 ರನ್ ಸಿಡಿಸಿದರು. 34 ವರ್ಷದ ವಿರಾಟ್ ಕೊಹ್ಲಿ ಇದುವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 237 ಪಂದ್ಯಗಳನ್ನಾಡಿ 37.2ರ ಬ್ಯಾಟಿಂಗ್ ಸರಾಸರಿಯಲ್ಲಿ 7 ಶತಕ ಹಾಗೂ 50 ಅರ್ಧಶತಕ ಸಹಿತ 7263 ರನ್ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಈ ಐಪಿಎಲ್‌ನಲ್ಲಿ 11 ಶತಕ: ಹೊಸ ದಾಖಲೆ!
2023ರ ಐಪಿಎಲ್‌ನಲ್ಲೂ ಕೊಹ್ಲಿ ಶೈನಿಂಗ್: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ವಿರಾಟ್ ಕೊಹ್ಲಿ, ಆರ್‌ಸಿಬಿ ಪರ 14 ಪಂದ್ಯಗಳನ್ನಾಡಿ 53.25ರ ಬ್ಯಾಟಿಂಗ್ ಸರಾಸರಿಯಲ್ಲಿ 6 ಅರ್ಧಶತಕ ಹಾಗೂ 2 ಶತಕ ಸಹಿತ 639 ರನ್ ಬಾರಿಸಿ, ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
