Asianet Suvarna News Asianet Suvarna News

IPL 2023: ಪಂಜಾಬ್‌ ಬೌಲಿಂಗ್‌ಅನ್ನು ಚೆಂಡಾಡಿದ ಲಕ್ನೋ, RCB ದಾಖಲೆ ಸೇಫ್‌!

ಕೈಲ್‌ ಮೇಯರ್ಸ್‌, ಮಾರ್ಕಸ್‌ ಸ್ಟೋಯಿನಸ್‌ ಅವರ ಅದ್ಭತ ಬ್ಯಾಟಿಂಗ್‌ ನಿರ್ವಹಣೆಯ ಮೂಲಕ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಐಪಿಎಲ್‌ ಇತಿಹಾಸದ 2ನೇ ಗರಿಷ್ಠ ಮೊತ್ತ ದಾಖಲಿಸಿದೆ. ಮೊಹಾಲಿ ಮೈದಾನದಲ್ಲಿ ಪಂಜಾಬ್‌ ಬೌಲರ್‌ಗಳನ್ನು ಲಕ್ನೋ ಅಕ್ಷರಶಃ ಚೆಂಡಾಡಿತು.

IPL 2023 Lucknow Super Giants Marcus Stoinis Kyle Mayers Nicholas Pooran Shines vs Punjab Kings san
Author
First Published Apr 28, 2023, 9:24 PM IST

ಮೊಹಾಲಿ (ಏ.28): ಕೆಎಲ್‌ ರಾಹುಲ್‌ ಅವರ ಅಬ್ಬರದ ಆಟವಿರಲಿಲ್ಲ, ಯಾರೊಬ್ಬರೂ ಶತಕ ಬಾರಿಸಲಿಲ್ಲ.. ಹಾಗಿದ್ದರೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಬ್ಯಾಟ್ಸ್‌ಮನ್‌ಗಳು ಐಪಿಎಲ್‌ 2023 ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಬೌಲರ್‌ಗಳನ್ನು ಅಕ್ಷರಶಃ ಚೆಂಡಾಡಿದರು. ಕೈಲ್‌ ಮೇಯರ್ಸ್‌ 24 ಎಸೆತಗಳ ಇನ್ನಿಂಗ್ಸ್‌, ಮಾರ್ಕ್‌ ಸ್ಟೋಯಿನಸ್‌ 40 ಎಸೆತಗಳ ಇನ್ನಿಂಗ್ಸ್‌ ಹಾಗೂ ನಿಕೋಲಸ್‌ ಪೂರನ್‌ 19 ಎಸೆತಗಳ ಇನ್ನಿಂಗ್ಸ್‌ ಪಂಜಾಬ್‌ ಬೌಲರ್‌ಗಳ ಬೆವರಿಳಿಸಿದ್ದು ಮಾತ್ರವಲ್ಲ ಐಪಿಎಲ್‌ನ ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆಗಳ ನಿರ್ಮಾಣಕ್ಕೆ ಕಾರಣವಾಯಿತು. ಇದೆಲ್ಲದರ ನಡುವೆ ಆರ್‌ಸಿಬಿ ತಂಡದ ಅಭಿಮಾನಿಗಳ ಸಮಾಧಾನಕ್ಕೆ ಕಾರಣವೂ ಇದೆ. 2013ರಿಂದ ಐಪಿಎಲ್‌ನಲ್ಲಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ಆರ್‌ಸಿಬಿ ಹೆಸರಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ಗೆ 263 ರನ್ ಬಾರಿಸಿದ್ದು ಐಪಿಎಲ್‌ ಇತಿಹಾಸದ ಗರಿಷ್ಠ ರನ್‌. ಈ ದಾಖಲೆಗೆ ಲಕ್ನೋ ಬೆದರಿಕೆ ಒಡ್ಡಿತಾದರೂ ಕೊನೆಗೆ 5 ವಿಕೆಟ್‌ಗೆ 257 ರನ್‌ ಪೇರಿಸಲು ಶಕ್ತವಾಯಿತು. ಇದು ಐಪಿಎಲ್‌ನಲ್ಲಿ ತಂಡವೊಂದರ 2ನೇ ಗರಿಷ್ಠ ಮೊತ್ತವಾಗಿದೆ. 16ನೇ ಓವರ್‌ನಲ್ಲಿಯೇ 200ರ ಗಡಿ ದಾಟಿದ್ದ ಲಕ್ನೋ ಸ್ಲಾಗ್‌ ಓವರ್‌ಗಳಲ್ಲಿ ಮತ್ತಷ್ಟು ಅಬ್ಬರಿಸಲು ವಿಫಲವಾಯಿತು.

ಲಕ್ನೋ ತಂಡದ ಬ್ಯಾಟಿಂಗ್‌ನಲ್ಲಿ ಮಿಂಚಿದವರ ಪೈಕಿ ಕೈಲ್‌ ಮೇಯರ್ಸ್‌ (54ರನ್‌, 24 ಎಸೆತ, 7 ಬೌಂಡರಿ, 4 ಸಿಕ್ಸರ್‌), ಮಾರ್ಕಸ್‌ ಸ್ಟೋಯಿನಸ್‌ (72 ರನ್‌, 40 ಎಸೆತ, 6 ಬೌಂಡರಿ, 5 ಸಿಕ್ಸರ್‌), ಆಯಿಷ್‌ ಬಡೋನಿ (43 ರನ್‌, 24 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹಾಗೂ ನಿಕೋಲಸ್‌ ಪೂರನ್‌ (45ರನ್‌, 19 ಎಸೆತ, 7 ಬೌಂಡರಿ, 1 ಸಿಕ್ಸರ್) ಅವರುಗಳ ಇನ್ನಿಂಗ್ಸ್ ವಿವಿಧ ಘಟ್ಟಗಳಲ್ಲಿ ಪ್ರಮುಖವಾಯಿತು.

ಪಂದ್ಯದ ಮೊದಲ ಎಸೆತದಲ್ಲಿಯೇ ಕೆಎಲ್‌ ರಾಹುಲ್‌ಗೆ ಪಂಜಾಬ್‌ ಜೀವದಾನ ನೀಡಿತು. ಗರ್ನೂರ್‌ ಬ್ರಾರ್‌ ಎಸೆತದಲ್ಲಿ ರಾಹುಲ್‌ ಅವರ ಕ್ಯಾಚ್‌ಅನ್ನು ಅರ್ಥವ ಟೈಡೆ ಕೈಚೆಲ್ಲಿದರು. ಆದರೆ, ಈ ಜೀವದಾನವನ್ನು ರಾಹುಲ್‌ ಉತ್ತಮವಾಗಿ ಬಳಸಿಕೊಳ್ಳಲಿಲ್ಲ. 9 ಎಸೆತಗಳಲ್ಲಿ 12 ರನ್‌ ಬಾರಿಸಿ ರಬಾಡ ಎಸೆತದಲ್ಲಿ ಔಟಾದರು. ಬಳಿಕ ಆಯುಷ್‌ ಬಡೋನಿಗೆ ಭಡ್ತಿ ನೀಡಿ ಮೂರನೇ ಕ್ರಮಾಂಕದಲ್ಲಿ ಆಡಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ಅದರಲ್ಲಿ ಯಶಸ್ಸು ಕಂಡಿತು. ಎದುರಿಸಿದ ಮೂರನೇ ಎಸೆತವನ್ನು ಈತ ಬೌಂಡರಿಗಟ್ಟಿದ್ದರಿಂದ ಲಕ್ನೋ 4 ಓವ್‌ಗಳ ಅಂತ್ಯಕ್ಕೆ 1 ವಿಕೆಟ್‌ಗೆ 45 ರನ್‌ ಪೇರಿಸಿತ್ತು.

ಒಂದಡೆ ಅಬ್ಬರದ ಬ್ಯಾಟಿಂಗ್‌ ಮೂಲಕ ಮಿಂಚಿದ ಕೈಲ್‌ ಮೇಯರ್ಸ್‌ ಕೇವಲ 20 ಎಸೆತಗಳಲ್ಲಿ 50 ರನ್‌ ಬಾರಿಸಿ ಮೂಲಕ ಅಬ್ಬರಿಸಿದರು. ಈ ಬಾರಿಯ ಐಪಿಎಲ್‌ನಲ್ಲಿ ಪವರ್‌ ಪ್ಲೇ ಅವಧಿಯಲ್ಲಿ ಒಟ್ಟು 4 ಅರ್ಧಶತಕಗಳು ದಾಖಲಾಗಿವೆ. ಅದರಲ್ಲಿ ಕೈಲ್‌ ಮೇಯರ್ಸ್‌ ಒಬ್ಬರೇ ಎರಡು ಬಾರಿ ಅರ್ಧಶತಕ ಸಿಡಿಸಿದ್ದಾರೆ. ಇನ್ನೊಂದೆಡೆ ಮೊದಲ ಎರಡು ಓವರ್‌ಗಳಲ್ಲಿ 22 ರನ್‌ ನೀಡಿದ್ದ ಕಗೀಸೋ ರಬಾಡ, ರಾಹುಲ್‌ ಹಾಗೂ ಮೇಯರ್ಸ್‌ ಇಬ್ಬರ ವಿಕೆಟ್‌ಗಳನ್ನೂ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಅದಕ್ಕೂ ಮುನ್ನ ಮೇಯರ್ಸ್‌ ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್‌, 7 ಬೌಂಡರಿಗಳಿದ್ದ 54 ರನ್‌ ಚಚ್ಚಿದ್ದರು. ಇದರಿಂದಾಗಿ 12.33 ರನ್‌ರೇಟ್‌ನಲ್ಲಿ ಲಕ್ನೋ ತಂಡ ಪವರ್‌ ಪ್ಲೇ ಮುಕ್ತಾಯಕ್ಕೆ 2 ವಿಕೆಟ್‌ಗೆ 74 ರನ್‌ ಬಾರಿಸಿತ್ತು.

ಕೊಹ್ಲಿ 'ಸ್ಲೋ' ಬ್ಯಾಟಿಂಗ್‌ ಕೆಣಕಿದ ಮುಂಬೈ ಪೊಲೀಸ್‌ಗೆ ಬೆಂಗಳೂರು ಪೊಲೀಸ್‌ ಖಡಕ್‌ ಉತ್ತರ, ಆದರೆ ಒಂದಿದೆ ಟ್ವಿಸ್ಟು!

ಈ ಪಂದ್ಯದ ಮೂಲಕ ಟಿ20ಗೆ ಪದಾರ್ಪಣೆ ಮಾಡಿದ್ದ ಗರ್ನೂರ್‌ ಬ್ರಾರ್‌ ಕೇವಲ 3 ಓವರ್‌ಗಳ ಕೋಟಾದಲ್ಲಿ 42ರನ್‌ ಬಿಟ್ಟುಕೊಟ್ಟರು. ಅದರಲ್ಲೂ ತಮ್ಮ ಮೂರನೇ ಓವರ್‌ನಲ್ಲಿ ಬರೋಬ್ಬರಿ 24 ರನ್‌ ಬಿಟಟುಕೊಟ್ಟರು. ಮೊದಲ ಓವರ್‌ನಲ್ಲಿ ಕೇವಲ 1 ರನ್‌ ನೀಡಿದ್ದ ಬ್ರಾರ್‌ ನಂತರದ ಎರಡು ಓವರ್‌ಗಳಲ್ಲಿ 4 ಬೌಂಡರಿ ಹಾಗೂ ಮೂರು ಸಿಕ್ಸರ್‌ ಬಿಟ್ಟುಕೊಟ್ಟರು. ಇದರಿಂದಾಗಿ 8ನೇ ಓವರ್‌ ವೇಳೆಗೆ ಲಕ್ನೋ 2 ವಿಕೆಟ್‌ಗೆ 107 ರನ್‌ ಬಾರಿಸಿತ್ತು. ಪಂದ್ಯದಲ್ಲಿ ಕೇವಲ 9 ಓವರ್‌ ಆಗಿರುವಾಗಲೇ ಗರ್ನೂರ್‌ ಬ್ರಾರ್‌ ಬದಲಿಯಾಗಿ ಪ್ರಭ್‌ ಸಿಮ್ರನ್‌ ಸಿಂಗ್‌ರನ್ನು ಕಣಕ್ಕಿಳಿಸುವ ನಿರ್ಧಾರ ಮಾಡುವ ಮೂಲಕ ಪಂಜಾಬ್‌ ಅದಾಗಲೇ 200 ರನ್‌ಗಳ ನಿರೀಕ್ಷೆಯನ್ನು ಇಟ್ಟಿತ್ತು. ಅದರಂತೆ 16ನೇ ಓವರ್‌ ವೇಳೆಗಾಗಲೇ ಪಂಜಾಬ್‌ 200ರ ಗಡಿ ದಾಟಿತು.

ಎಲೆಕ್ಷನ್‌ ಎಫೆಕ್ಟ್‌: ಆರ್‌ಸಿಬಿ AWAY ಮ್ಯಾಚ್‌ ಫೈಟ್‌

ಮೇಯರ್ಸ್‌ ನಿರ್ಗಮನದ ಬಳಿಕ ಕ್ರೀಸ್‌ಗಿಳಿದಿದ್ದ ಸ್ಟೋಯಿನಸ್‌ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಪಂದ್ಯಕ್ಕೂ ಮುನ್ನ ಇದೇ ಐಪಿಎಲ್‌ನ ಕೊನೆ ನಾಲ್ಕು ಓವರ್‌ಗಳ ಆಟದಲ್ಲಿ 13 ಎಸೆತಗಳನ್ನು ಎದುರಿಸಿದ್ದ ಸ್ಟೋಯಿನಿಸ್‌ ಮಿಂಚುವಲ್ಲಿ ವಿಫಲರಾಗಿದ್ದರು. ಆದರೆ, ಸ್ಫೋಟಕ ಆಟವಾಡುವಲ್ಲಿ ವಿಫಲರಾಗಿದ್ದರು.

Follow Us:
Download App:
  • android
  • ios