ನಾಯಕ ನಿತೀಶ್ ರಾಣಾ ಸತತ ಹೋರಾಟ ನೀಡಿದರೂ ಸಾಕಾಗಲಿಲ್ಲ. ರೈಸರ್ಸ್ ನೀಡಿದ ಬೃಹತ್ ಮೊತ್ತ ಚೇಸ್ ಮಾಡಲು ಸಾಧ್ಯವಾಗಲಿಲ್ಲ. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ 23 ರನ್ ಗೆಲುವು ದಾಖಲಿಸಿದೆ.

ಕೋಲ್ಕತಾ(ಏ.14): ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2023ರ ಟೂರ್ನಿಯಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ಆರಂಭಿಕ 2 ಪಂದ್ಯ ಸೋತು ಕಳಪೆ ಎನಿಸಿಕೊಂಡಿದ್ದ ಹೈದರಾಬಾದ್ ಇದೀಗ ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಸತತ 2ನೇ ಗೆಲುವು ದಾಖಲಿಸಿದೆ. ನಾಯಕ ರಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಹೋರಾಟ ನೀಡಿದರೂ ಕೆಕೆಆರ್‌ಗೆ ಗೆಲುವು ಸಿಗಲಿಲ್ಲ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹ್ಯಾರಿ ಬ್ರೂಕ್ ಸಿಡಿಸಿದ ಸೆಂಚುರಿ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ 23 ರನ್ ಗೆಲುವು ದಾಖಲಿಸಿದೆ. ಇದರೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ.

ಕೋಲ್ಕತಾ ನೈಟ್ ರೆಡರ್ಸ್ ತಂಡಕ್ಕೆ 229 ರನ್ ಟಾರ್ಗೆಟ್ ನೀಡಲಾಗಿತ್ತು. ಬೃಹತ್ ಟಾರ್ಗೆಟ್ ಪಡೆದ ಕೋಲ್ಕತಾ ಒತ್ತಡಕ್ಕೆ ಸಿಲುಕಿತು. ಮೊದಲ ಓವರ್‌ನಲ್ಲೇ ರಹಮಾನುಲ್ಹ ಗುರ್ಬಾಜ್ ವಿಕೆಟ್ ಕಳೆದುಕೊಂಡಿತು. ವೆಂಕಟೇಶ್ ಅಯ್ಯರ್ ಕೇವಲ 10 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಸುನಿಲ್ ನರೈನ್ ಡಕೌಟ್ ಆದರು. 20 ರನ್‌ಗಳಿಗೆ ಕೋಲ್ಕತಾ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

'ನೀವು ಆಕೆಯ ಅರೋಗ್ಯಕ್ಕೆ ಇನ್ನಷ್ಟು ಶಕ್ತಿ ತುಂಬಿದ್ದೀರಿ..' ಧೋನಿ ಕುರಿತಾಗಿ ಖುಷ್ಬೂ ಮಾತು!

ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸತತ ಹಿನ್ನಡೆ ಎದುರಾಯಿತು. ಹೋರಾಟದ ಸೂಚನೆ ನೀಡಿದ ಎನ್ ಜಗದೀಶನ್ 36 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಆ್ಯಂಡ್ರೆ ರಸೆಲ್ ಅಬ್ಬರಿಸದೇ ವಿಕೆಟ್ ಕೈಚೆಲ್ಲಿದರು. ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಹೋರಾಟ ಪಂದ್ಯದ ಗತಿಯನ್ನು ಬದಲಿಸಲು ಆರಂಭಿಸಿತು. ನಿತೀಶ್ ರಾಣಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ರಿಂಕು ಮತ್ತೆ ತಮ್ಮ ಅಬ್ಬರ ಆರಂಭಿಸಿದರು. ಸಿಕ್ಸರ್ ಮೂಲಕ ರೈಸರ್ಸ್ ತಂಡದ ಆತಂಕ ಹೆಚ್ಚಿಸಿದರು. ಇತ್ತ ನಿತೀಶ್ ರಾಣಾ 5 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 41 ಎಸೆತದಲ್ಲಿ 75 ರನ್ ಸಿಡಿಸಿದರು. ಆದರೆ ರಿಂಕು ಸಿಂಗ್ ಅಬ್ಬರ ಮುಂದುವರಿಯಿತು. ಶಾರ್ದೂಲ್ ಠಾಕೂರ್ ಹಾಗೂ ರಿಂಗು ಹೋರಾಟ ಕೆಕೆಆರ್ ತಂಡದಲ್ಲಿ ಹೊಸ ಹುರುಪು ತಂದಿತು.

"ಈತ ಕ್ರಿಕೆಟ್ ಜಗತ್ತನ್ನು ಮುಂದಿನ ಒಂದು ದಶಕ ಆಳಲಿದ್ದಾರೆ": ಶುಭ್‌ಮನ್ ಗಿಲ್ ಗುಣಗಾನ ಮಾಡಿದ ಆಸೀಸ್ ದಿಗ್ಗಜ

ರಿಂಕು ಸಿಂಗ್ ಮತ್ತೆ ಸ್ಫೋಟಕ ಬ್ಯಾಟಿಂಗ್ ಮೂಲಕ ಸನ್‌ರೈರ್ಸ್ ತಂಡಕ್ಕೆ ಶಾಕ್ ಮೇಲೆ ಶಾಕ್ ನೀಡಿದರು. ಇದರ ಪರಿಣಾಮ ಕೆಕೆಆರ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 32 ರನ್ ಅವಶ್ಯಕತೆ ಇತ್ತು. ಅಂತಿಮ ಓವರ್‌ನ ಮೊದಲ ಎಸೆತದಲ್ಲಿ 12 ರನ್ ಸಿಡಿಸಿದ್ದ ಠಾಕೂರ್ ವಿಕೆಟ್ ಪತನಗೊಂಡಿತು. ರಿಂಕು ಸಿಂಗ್ 5ನೇ ಎಸೆತ ಸಿಕ್ಸರ್ ಸಿಡಿಸಿದರೂ ಗೆಲುವು ದಕ್ಕಲಿಲ್ಲ. ರಿಂಕು ಸಿಂಗ್ ಅಜೇಯ 58 ರನ್ ಸಿಡಿಸಿದರು. ಕೆಕೆಆರ್ 7 ವಿಕೆಟ್ ನಷ್ಟಕ್ಕೆ 205 ರನ್ ಸಿಡಿಸಿತು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 23 ರನ್ ಗೆಲುವು ದಾಖಲಿಸಿತು