ಸ್ಪಿನ್ನರ್‌ಗಳು ಹಾಗೂ ವೇಗದ ಬೌಲರ್‌ಗಳ ಮೂಲಕ ಭರ್ಜರಿಯಾಗಿ ದಾಳಿ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು 5 ರನ್‌ಗಳಿಂದ ರೋಚಕವಾಗಿ ಮಣಿಸಿದೆ.
ಅಹಮದಾಬಾದ್ (ಮೇ.2): ಸತತ ಸೋಲುಗಳಿಂದ ಸುಣ್ಣವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಮಂಗಳವಾರ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಬಾರಿಸಿದ ಅಜೇಯ 59 ರನ್‌ಗಳು ಹಾಗೂ ಮೊಹಮದ್ ಶಮಿ ಅವರ ನಾಲ್ಕು ವಿಕೆಟ್‌ಗಳ ಸಾಹಸ ಗುಜರಾತ್ ಟೈಟಾನ್ಸ್ ಪಾಲಿಗೆ ವ್ಯರ್ಥವಾಯಿತು. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 131 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡ 6 ವಿಕೆಟ್ ನಷ್ಟಕ್ಕೆ 126 ರನ್ ಬಾರಿಸುವ ಮೂಲಕ 5 ರನ್‌ಗಳ ಸೋಲು ಕಂಡಿತು. ಮೊಹಮದ್ ಶಮಿ ಇತ್ತೀಚಿನ ವರ್ಷದಲ್ಲಿ ಟಿ20 ಪಂದ್ಯವೊಂದರಲ್ಲಿ ತೋರಿದ ಅತ್ಯಾಕರ್ಷಕ ನಿರ್ವಹಣೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಿಯಂತ್ರಿಸಲು ಗುಜರಾತ್ ಟೈಟಾನ್ಸ್ ಯಶಸ್ವಿಯಾದರೂ, ಬ್ಯಾಟಿಂಗ್‌ನಲ್ಲಿ ತಂಡ ಹಿನ್ನಡೆ ಕಂಡಿತು. ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 59 ರನ್ ಬಾರಿಸಿದರೂ, ತೀರಾ ಕ್ಲೋಸ್ ಆಗಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ತಂಡ ಮುಗ್ಗರಿಸಿತು. ಅಂತಿಮ ಓವರ್‌ನಲ್ಲಿ 12 ರನ್ ರಕ್ಷಿಸಿಕೊಳ್ಳಲು ಯಶಸ್ವಿಯಾದ ಇಶಾಂತ್ ಶರ್ಮ ಡೆಲ್ಲಿ ಪಾಲಿಗೆ ಸೂಪರ್ ಸ್ಟಾರ್ ಎನಿಸಿದರು.
ಗುಜರಾತ್ ತಂಡಕ್ಕೆ ನಿರೀಕ್ಷೆ ಮಾಡಿದಂತ ಆರಂಭ ಸಿಗಲಿಲ್ಲ. ವೃದ್ಧಿಮಾನ್ ಸಾಹ ಹಾಗೂ ಶುಭಮನ್ ಗಿಲ್ ಕೆಟ್ಟ ಶಾಟ್‌ಗೆ ಬಲಿಯಾದರೆ, ಇಶಾಂತ್ ಶರ್ಮ ಅವರ ನುಕಲ್ ಬಾಲ್ ತಂತ್ರಕ್ಕೆ ವಿಜಯ್ ಶಂಕರ್ ಬಲಿಯಾದರು. ಕುಲದೀಪ್ ಯಾದವ್ ಎಸೆತದಲ್ಲಿ ಡೇವಿಡ್ ಮಿಲ್ಲರ್ ಬೌಲ್ಡ್ ಆದರು. ಈ ವಿಕೆಟ್‌ಗಳು ತಂಡದ ಚೇಸಿಂಗ್ ಮೇಲೆ ಪರಿಣಾಮ ಬೀರಿತು. ಕ್ರಿಕ್‌ವಿಜ್ ಮಾಡಿರುವ ಅನಾಲೀಸಿಸ್ ಪ್ರಕಾರ, ಪವರ್ ಪ್ಲೇ ಅವಧಿಯಲ್ಲಿ ಬ್ಯಾಟಿಂಗ್ ಮಾಡಲು ಅತ್ಯಂತ ಕಷ್ಟಕರ ಮೈದಾನ ಅಹಮದಾಬಾದ್ ಎನಿಸಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಕೇವಲ 21ರ ಸರಾಸರಿ ಹೊಂದಿದ್ದು ಪ್ರತಿ ಓವರ್‌ಗೆ 6.37 ರ ಸರಾಸರಿಯಲ್ಲಿ ರನ್ ಬಳದಿದೆ. ಕುಲದೀಪ್ ಯಾದವ್ ತಮ್ಮ 4 ಓವರ್‌ಗಳ ಕೋಟಾದಲ್ಲಿ 15 ರನ್ ನೀಡಿ 1 ವಿಕೆಟ್ ಉರುಳಿಸುವ ಮೂಲಕ ಗುಜರಾತ್ ಪಾಲಿಗೆ ಚೇಸಿಂಗ್ ಇನ್ನಷ್ಟು ಕಷ್ಟ ಮಾಡಿದರು.
ಆರ್‌ಸಿಬಿ ಉತ್ತರದ ದಂಡಯಾತ್ರೆಯಲ್ಲಿ Delhi ಮುಂದಿನ ನಿಲ್ದಾಣ!
ಹಾರ್ದಿಕ್ ಪಾಂಡ್ಯ ಹಾಗೂ ಅಭಿನವ್ ಮನೋಹರ್ ಆಡಿದ 62 ರನ್‌ಗಳ ಜೊತೆಯಾಟ ಗುಜರಾತ್ ಟೈಟಾನ್ಸ್ ಪಾಲಿಗೆ ವರವಾಗಿತ್ತು. ಇದರಿಂದಾಗಿ ಕೊನೇ ಮೂರು ಓವರ್‌ಗಳಲ್ಲಿ 37 ರನ್ ಬಾರಿಸುವ ಸವಾಲು ಗುಜರಾತ್ ಮುಂದಿತ್ತು. ಆದರೆ, ಖಲೀಲ್ ಅಹ್ಮದ್ ಅವರ ಅತ್ಯುತ್ತಮ ಓವರ್‌ನಿಂದಾಗಿ ಇದು 12 ಎಸೆತಗಳಲ್ಲಿ 33 ರನ್ ಬೇಕಾಗುವ ಹಂತಕ್ಕೆ ತಲುಪಿತು. ಈ ಹಂತದಲ್ಲಿ ಆನ್ರಿಚ್ ನೋರ್ಜೆ ಓವರ್‌ಗೆ ಸತತ ಮೂರು ಸಿಕ್ಸರ್‌ಗಳನ್ನು ರಾಹುಲ್ ಟೇವಾಟಿಯಾ ಸಿಡಿಸಿದ ಕಾರಣ, ಕೊನೇ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ 6 ಎಸೆತಗಳಲ್ಲಿ 12 ರನ್ ಸಿಡಿಸಬೇಕಾದ ಸವಾಲಿಗೆ ಬಂದು ನಿಂತಿತ್ತು. ಆದರೆ, ಕೊನೇ ಓವರ್‌ನಲ್ಲಿ ಇಶಾಂತ್ ಶರ್ಮ ಎಚ್ಚರಿಕೆಯ ದಾಳಿ ನಡೆಸಿ ತಂಡಕ್ಕೆ ಗೆಲುವು ನೀಡಿದರು.
ಸೋಲಿನ ಬೆನ್ನಲ್ಲೇ ಲಖನೌಗೆ ಮತ್ತೆ ಶಾಕ್, ನಾಯಕ ರಾಹುಲ್ ಕೆಲ ಪಂದ್ಯಗಳಿಗೆ ಡೌಟ್..?
ಡೆಲ್ಲಿ ತಂಡದ ಬ್ಯಾಟಿಂಗ್ ವೇಳೆ ಪವರ್ ಪ್ಲೇ ಅವಧಿಯಲ್ಲಿ ಶಮಿ ಅವರ ಬೌಲಿಂಗ್ ಎಷ್ಟು ಅಮೋಘವಾಗಿತ್ತೆಂದರೆ, ಶಮಿ ಅವರ ಎಲ್ಲಾ ನಾಲ್ಕು ಓವರ್‌ಗಳನ್ನು ಈ ಅವಧಿಯಲ್ಲಿಯೇ ಮುಗಿಸಿಬಿಟ್ಟಿದ್ದರು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 11 ರನ್ ನೀಡಿ ಶಮಿ ನಾಲ್ಕು ವಿಕೆಟ್ ಉರುಳಿಸಿದ್ದರು. ಎಕಾನಮಿ ರೇಟ್ 2.75 ಆಗಿದ್ದರೆ, 19 ಡಾಟ್ ಬಾಲ್‌ಗಳನ್ನು ಅವರು ಎಸೆದಿದ್ದರು. ಇದರಲ್ಲಿ ಕೇವಲ 1 ಬೌಂಡರಿ ಮಾತ್ರವೇ ಅವರು ನೀಡಿದ್ದರು.
