ಕೆಎಲ್ ರಾಹುಲ್ ಇಂಜುರಿಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ಲಖನೌ ತಂಡ ಹೊಸ ನಾಯಕನ ನೇಮಕ ಮಾಡಿದೆ. ಕ್ರುನಾಲ್ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ.ಆದರೆ ನಾಯಕತ್ವದ ಪಂದ್ಯದಲ್ಲೇ ಟಾಸ್ ಸೋತಿದ್ದಾರೆ. ಲಖನೌ ವಿರುದ್ದ ಚೆನ್ನೈ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಲಖನೌ(ಮೇ.03): ಲಖನೌ ಸೂಪರ್ ಜೈಂಟ್ಸ್ ವಿರುದ್ದ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಇಂಜುರಿಯಾಗಿ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಕೆಎಲ್ ರಾಹುಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಲಖನೌ ತಂಡ ಕ್ರುನಾಲ್ ಪಾಂಡ್ಯಗೆ ನಾಯಕತ್ವ ನೀಡಿದೆ. ಚೆನ್ನೈ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ದೀಪಕ್ ಚಹಾರ್ ಸಂಪೂರ್ಣ ಫಿಟ್ ಆಗಿದ್ದು ತಂಡ ಸೇರಿಕೊಂಡಿದ್ದಾರೆ. ಆಕಾಶ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ. ಇತ್ತ ಲಖನೌ ತಂಡದಲ್ಲಿ ಅನಿವಾರ್ಯ ಬದಲಾವಣೆ ಮಾಡಲಾಗಿದೆ. ಮನನ್ ವೋಹ್ರಾ ಹಾಗೂ ಕರಣ್ ಶರ್ಮಾ ತಂಡ ಸೇರಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಡೇವೋನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಆಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ನಾಯಕ), ದೀಪಕ್ ಚಹಾರ್, ಮತೀಶಾ ಪತಿರಾನಾ, ತುಷಾರ್ ದೇಶಪಾಂಡೆ, ಮಹೀಶ ತೀಕ್ಷಾನ
ಲಖನೌ ತಂಡಕ್ಕೆ ಡಬಲ್ ಶಾಕ್: ಐಪಿಎಲ್‌ನಿಂದ ಔಟಾದ ಕೆ.ಎಲ್. ರಾಹುಲ್, ಜಯದೇವ್ ಉನದ್ಕತ್
ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೈಲ್ ಮೇಯರ್ಸ್, ಮನನ್ ವೋಹ್ರ, ಕರಣ್ ಶರ್ಮಾ, ಆಯುಷ್ ಬದೋನಿ, ಮಾರ್ಕಸ್ ಸ್ಟೊಯ್ನಿಸ್, ನಿಕೋಲಸ್ ಪೂರನ್, ಕ್ರುನಾಲ್ ಪಾಂಡ್ಯ(ನಾಯಕ), ಕೆ ಗೌತಮ್, ನವೀನ್ ಉಲ್ ಹಕ್, ರವಿ ಬಿಶ್ನೋಯ್, ಮೊಹ್ಸಿನ್ ಖಾನ್
ಲಖನೌ ಹಾಗೂ ಚೆನ್ನೈ ನಡುವಿನ ಪಂದ್ಯ ಕೊಂಚ ತಡವಾಗಿ ಆರಂಭಗೊಂಡಿದೆ. ಲಖನೌದಲ್ಲಿ ತುಂತುರು ಮಳೆ ಸುರಿದ ಕಾರಣ ಟಾಸ್ ವಿಳಂಬವಾಗಿತ್ತು. ತುಂತುರ ಮಳೆ ಕಾರಣ ಪಿಚ್ ಕವರ್ ಮಾಡಲಾಗಿತ್ತು. ಮಳೆ ನಿಲ್ಲುತ್ತಿದ್ದಂತೆ ಪಿಚ್ ಕವರ್ ತೆಗೆಯಲಾಗಿಯಿತು. ಮೈದಾನದ ಸಿಬ್ಬಂದಿಗಳು ತಕ್ಷಣವೇ ಪಂದ್ಯಕ್ಕೆ ಮೈದಾನ ಸಜ್ಜು ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಸಮಯ ವಿಳಂಬವಾಗದೇ ಪಂದ್ಯ ಆರಂಭಗೊಂಡಿದೆ. 3.30ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ 3.45ಕ್ಕೆ ಆರಂಭವಾಗಿದೆ.
ಬಿಸಿಸಿಐ ಪ್ರವಾಸಗಳಲ್ಲಿ ವೇಶ್ಯೆಯರೊಂದಿಗೆ ಲೈಂಗಿಕ ಸಂಬಂಧ: ಮೊಹಮ್ಮದ್ ಶಮಿ ವಿರುದ್ಧ ಸುಪ್ರೀಂ ಮೊರೆ ಹೋದ ಪತ್ನಿ
ಮಳೆಯ ಕಾರಣ ಧೋನಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಲಖನೌ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿ ಸುಲಭವಾಗಿ ರನ್ ಚೇಸ್ ಮಾಡುವ ಲೆಕ್ಕಾಚಾರದಲ್ಲಿದೆ. ಆದರೆ ಲಖನೌ ನಾಯಕ ಕ್ರುನಾಲ್ ಪಾಂಡ್ಯ ನಾವು ಮೊದಲು ಬ್ಯಾಟಿಂಗ್ ಮಾಡುವ ಲೆಕ್ಕಾಚಾದಲ್ಲಿದ್ದೆವು. ಇದೀಗ ನಮ್ಮ ಲೆಕ್ಕಾಚರದಂತೆ ಬ್ಯಾಟಿಂಗ್ ಮಾಡುತ್ತಿದ್ದೇವೆ. ಹೀಗಾಗಿ ಉತ್ತಮ ಮೊತ್ತ ಸಿಡಿಸಿ ಚೆನ್ನೈ ತಂಡವನ್ನು ಕಟ್ಟಿಹಾಕುವ ವಿಶ್ವಾಸವಿದೆ ಎಂದಿದ್ದಾರೆ.
