* 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಭರ್ಜರಿ ಯಶಸ್ಸು* ಕ್ರೇಜ್ ಕಾ ಬಾಪ್ ಐಪಿಎಲ್ ಟಿಆರ್‌ಪಿಯಲ್ಲಿ ಭಾರೀ ಕುಸಿತ* ಶೇ 10-12 ರಷ್ಟು ಐಪಿಎಲ್ ರೇಟಿಂಗ್ಸ್ ಕುಸಿತ
ಬೆಂಗಳೂರು(ಜೂ.16): 10 ತಂಡಗಳು, ಎರಡು ತಿಂಗಳ ಸುದೀರ್ಘ ಮನರಂಜನೆ ಉಣಬಡಿಸಿದ್ದ 15ನೇ ಐಪಿಎಲ್ (IPL 2022) ಮುಕ್ತಾಯಗೊಂಡಿದೆ. ಕೊರೊನಾ ಆತಂಕದ ನಡುವೆ ಆರಂಭಗೊಂಡು ಕೊನೆಗೂ ಸಕ್ಸಸ್ ಕಂಡಿದೆ. ಬಿಸಿಸಿಐ ಈ ವಿಚಾರದಲ್ಲಿ ಮತ್ತೊಮ್ಮೆ ಗೆದ್ದಿದೆ. ಆದ್ರೆ ಜನಪ್ರಿಯತೆ ವಿಚಾರದಲ್ಲಿ ಬಿಸಿಸಿಐ ಸೋತು ಸುಣ್ಣವಾಗಿದೆ. ನಮಗೆ ಯಾರು ಸಾಟಿನೇ ಇಲ್ಲ. ಟಿ20 ಲೀಗ್ಗೆ ನಾವೇ ಬಾಸ್ ಅಂತ ಕಾಲರ್ ಪಟ್ಟಿ ಹಾರಿಸ್ತಿದ್ದ ಬಿಗ್ಬಾಸ್ಗಳಿಗೆ ದೊಡ್ಡ ಹಿನ್ನಡೆಯಾಗಿದೆ. 14 ಸೀಸನ್ಗಳಿಂದ ಕಾಪಾಡಿಕೊಂಡು ಬಂದಿದ್ದ ಟೂರ್ನಿ ಜನಪ್ರಿಯತೆ ಈ ಸಲ ಕುಗ್ಗಿದೆ. ಕ್ರೇಜ್ ಕಾ ಬಾಪ್ ಐಪಿಎಲ್ಗೆ ಇದೆಂಥಾ ದುಸ್ಥಿತಿ ಬಂತೆಂದು ಎಲ್ಲರೂ ಮಾತನಾಡಿಕೊಳ್ಳುವ ಸ್ಥಿತಿ ಬಂದೊಂದಗಿದೆ.
ಕ್ರಿಕೆಟ್ ಪ್ರಿಯರ ದಿಲ್ ಗೆಲ್ಲುವಲ್ಲಿ ನಾಕೌಟ್ ಪಂದ್ಯಗಳು ಫೇಲ್, ಶೇ 10-12 ರಷ್ಟು ಐಪಿಎಲ್ ರೇಟಿಂಗ್ಸ್ ಕುಸಿತ
ಎಷ್ಟೇ ಅದ್ಧೂರಿಯಾಗಿ ಟೂರ್ನಿ ತೆರೆ ಕಂಡ್ರು, ಹೊಸ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ರು ಐಪಿಎಲ್ ಟಿವಿ ರೇಟಿಂಗ್ಸ್ ಮಾತ್ರ ಹೆಚ್ಚಿಲ್ಲ. ಬದಲಿಗೆ ಕೈಕೊಟ್ಟಿದೆ. ಟೂರ್ನಿ ಆರಂಭದಿಂದಲೇ ಬಿಸಿಸಿಐಗೆ ರೇಟಿಂಗ್ಸ್ ಕುಸಿತ ವಿಚಾರ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಕನಿಷ್ಠ ಪಕ್ಷ ಪ್ಲೇ ಆಫ್ ಸ್ಟೇಜ್ನಲ್ಲಾದ್ರು ಪಂದ್ಯವಳಿಗಳು ಪ್ರೇಕ್ಷರನ್ನು ಸೆಳೆಯಬಹುದು ಎಂದೂ ಬಿಸಿಸಿಐ (BCCI) ನಂಬಿತ್ತು. ಸದ್ಯ ಆಸೆಯೂ ಕಮರಿದೆ. ಯಾಕಂದ್ರೆ ಲೀಗ್ ಹಂತಕ್ಕಿಂತ ನಾಕೌಟ್ ಹಂತದ ಪಂದ್ಯಗಳಲ್ಲೇ ರೇಟಿಂಗ್ಸ್ ಹೆಚ್ಚು ಕುಸಿತ ಕಂಡಿದೆ.
ಹೌದು, ಮೇ 22 ರಿಂದ ಪ್ಲೇ ಆಫ್ ಪಂದ್ಯಗಳು ಆರಂಭಗೊಂಡಿದ್ದು. ಫೈನಲ್ ಸೇರಿ ಒಟ್ಟು 4 ಪಂದ್ಯಗಳು ನಡೆದಿದ್ವು. ಸದ್ಯ ನಾಕೌಟ್ ಸ್ಟೇಜ್ನ ಐಪಿಎಲ್ ರೇಟಿಂಗ್ಸ್ ಹೊರಬಿದ್ದಿದ್ದು ಶೇಕಡಾ 10 ರಿಂದ 12 ರಷ್ಟು ಕುಸಿದಿದೆ. ಅಂದ್ರೆ ನಿರ್ಣಾಯಕ ಪಂದ್ಯಗಳ ವೇಳೆಯೂ ರೇಟಿಂಗ್ಸ್ ಹೆಚ್ಚಿಲ್ಲ. ಇದರಿಂದ ಬಿಸಿಸಿಐ ಮತ್ತು ಪ್ರಸಾರಕ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಕಳೆದ ಬಾರಿಗಿಂತ ಶೇಕಡಾ 30-34 ರಷ್ಟು ಕುಸಿತ
2008ರಿಂದ ಆರಂಭಗೊಂಡ ಐಪಿಎಲ್ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚಿಸಿಕೊಂಡಿತ್ತು. ಆದ್ರೆ ಟೂರ್ನಿ ಹಿಸ್ಟರಿಯಲ್ಲಿ ಫಾರ್ ದಿ ಫಸ್ಟ್ ಟೈಮ್ ಶೇಕಡ 30-34 ರಷ್ಟು ಟಿ20 ರೇಟಿಂಗ್ಸ್ ಕುಸಿತ ಕಂಡಿದ್ದು ಬಿಸಿಸಿಐಯನ್ನ ನಿದ್ದೆಗೆಡಿಸಿದೆ. ಜೊತೆಗೆ ಇದು ಬಿಸಿಸಿಐಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.
IPL Slapgate ನಾನು ತಪ್ಪು ಮಾಡಿದೆ, ಶ್ರೀಶಾಂತ್ ಕಪಾಳಮೊಕ್ಷ ಕುರಿತು ಮೊದಲ ಬಾರಿಗೆ ಹರ್ಭಜನ್ ಮಾತು!
ಈ ಬಾರಿ ರೇಟಿಂಗ್ಸ್ ಭಾರಿ ಕುಸಿತ ಕಂಡಿದ್ದೇಕೆ..?
ಈ ಬಗ್ಗೆ ಬಿಸಿಸಿಐ ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕಿದೆ. ಯಾಕಂದ್ರೆ ಒಂದೇ ಸೀಸನ್ನಲ್ಲಿ 30-34 ರಷ್ಟು ರೇಟಿಂಗ್ ಕುಸಿಯೋದಂದ್ರೆ ನಿಜಕ್ಕೂ ದೊಡ್ಡ ಹಿನ್ನಡೆ. ಇನ್ನು ಇಷ್ಟೊಂದು ಪ್ರಮಾಣದಲ್ಲಿ ರೇಟಿಂಗ್ಸ್ ಕುಸಿಯಲು ಬಲಾಢ್ಯ ತಂಡಗಳ ಕಳಪೆ ಪ್ರದರ್ಶನವೇ ಕಾರಣ. 5 ಬಾರಿ ಚಾಂಪಿಯನ್ಸ್ ಮುಂಬೈ ಹಾಗೂ 4 ಬಾರಿ ಚಾಂಪಿಯನ್, 9 ಬಾರಿ ಫೈನಲಿಸ್ಟ್ ಚೆನ್ನೈ ತಂಡಗಳು ಈ ಸಲ ಟೂರ್ನಿ ಆರಂಭದಿಂದಲೇ ನೀರಸ ಆಟವಾಡಿದ್ವು. ಕೊನೆಗೆ ಲೀಗ್ನಲ್ಲೇ ಹೊರಬಿದ್ವು. ಈ ಎರಡು ಟೀಮ್ಸ್ ಜೊತೆ 2 ಬಾರಿ ಟ್ರೋಫಿ ಗೆದ್ದ ಕೆಕೆಆರ್ ಕೂಡ ಲೀಗ್ನಲ್ಲೇ ಆಟ ಮುಗಿಸ್ತು. ಈ ಬಲಿಷ್ಠ ತಂಡಗಳ ಹೀನಾಯ ಪ್ರದರ್ಶನವೇ ರೇಟಿಂಗ್ಸ್ ಭಾರಿ ಕುಸಿತಕ್ಕೆ ಕಾರಣವಾಯ್ತು ಎನ್ನಲಾಗುತ್ತಿದೆ.
