ಐಪಿಎಲ್ 2022 ಎರಡನೇ ಕ್ವಾಲಿಫೈಯರ್ ಫೈಟ್ ಫೈನಲ್ ಪ್ರವೇಶಕ್ಕೆ ರಾಜಸ್ಥಾನ ಹಾಗೂ ಆರ್‌ಸಿಬಿ ಹೋರಾಟ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ

ಅಹಮ್ಮದಾಬಾದ್(ಮೇ.27): ಐಪಿಎಲ್ 2022 ಟೂರ್ನಿಯ ಎರಡನೇ ಕ್ವಾಲಿಫೈಯರ್ ಹೋರಾಟ. ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ, ಸೋತ ತಂಡ ಔಟ್. ಹೀಗಾಗಿ ಇಂದು ಜಿದ್ದಾಜಿದ್ದಿನ ಹೋರಾಟ ಎರ್ಪಡಲಿದೆ. ಈ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಸತತ ಟಾಸ್ ಸೋತು ಕಂಗಾಲಾಗಿದ್ದ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ ಕೊನೆಗೂ ಟಾಸ್ ಗೆದ್ದಿದ್ದಾರೆ. ಇನ್ನು ರಾಜಸ್ಥಾನ ಹಾಗೂ ಆರ್‌ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್(ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹಮ್ಮದ್, ವಾನಿಂಡು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್

IPL 2022 ಒಂದು ಲಕ್ಷ ಪ್ರೇಕ್ಷಕರ ಎದುರು ನಡೆಯಲಿದೆ ಆರ್‌ಸಿಬಿ vs ಲಖನೌ ಫೈಟ್

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ಶಿಮ್ರೊನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ, ಒಬೆಡ್ ಮೆಕೊಯ್, ಯಜುವೇಂದ್ರ ಚಹಾಲ್

ಇಂದಿನ ಸೋಲು ಗೆಲುವು ಲೆಕ್ಕಾಚರದಲ್ಲಿ ಆರ್‌ಸಿಬಿಗೆ ಮೇಲುಗೈ ಹೆಚ್ಚಿದೆ. ಕಾರಣ ಕಳೆದ 5 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ 3 ಪಂದ್ಯದಲ್ಲಿ ಸೋಲು ಕಂಡರೆ, 2ರಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇನ್ನು ಪ್ಲೇ ಆಫ್ ಸುತ್ತಿನಲ್ಲಿ ರಾಜಸ್ಥಾನ ರಾಯಲ್ಸ್ , ಗುಜರಾತ್ ವಿರುದ್ಧ ಮುಗ್ಗರಿಸಿದೆ. ಆದರೆ ಆರ್‌ಸಿಬಿ ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ದಾಖಲಿಸಿದೆ. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ. ಇನ್ನ ಪ್ಲೇ ಆಫ್ ಸುತ್ತಿನಲ್ಲಿ ಅತೀ ಒತ್ತಡ ಸಂದರ್ಭ ನಿಭಾಯಿಸಿ ಎಲಿಮಿನೇಟರ್ ಪಂದ್ಯ ಗೆದ್ದ ಸಾಧನೆ ಮಾಡಿದೆ. 

ಕಳೆದೆರಡು ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಹಳೆ ಲಯ ಕಂಡುಕೊಂಡಿದೆ. ಇದು ಬೆಂಗಳೂರು ತಂಡದ ಬ್ಯಾಕ್ ಟು ಬ್ಯಾಕ್ ಗೆಲುವಿಗೆ ಕಾರಣವಾಗಿದೆ. ಇತ್ತ ರಾಜಸ್ಥಾನ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ಎಡವುತ್ತಿದೆ. ಹೀಗಾಗಿ ರಾಜಸ್ಥಾನ ರಾಯಲ್ಸ್ ಆತ್ಮವಿಶ್ವಾಸಕ್ಕಿಂತ ಬೆಂಗಳೂರು ತಂಡ ಆತ್ಮವಿಶ್ವಾಸ ಹೆಚ್ಚಿದೆ.

IPL 2022 ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಥ್ಯಾಂಕ್ಸ್‌: ಕಿಂಗ್ ಕೊಹ್ಲಿಗೆ ಪಾಟೀದಾರ್ ಸಲ್ಯೂಟ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದಿತ್ತು. ಬಳಿಕ ದಿಟ್ಟ ಹೋರಾಟವನ್ನೇ ನೀಡಿದೆ. ಇತ್ತ ಅಧಿಕಾರಯುತವಾಗಿ ಪ್ಲೇ ಆಫ್ ಪ್ರವೇಶಿಸಿದ ರಾಜಸ್ಥಾನ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ.

ಲೀಗ್ ಹಂತದ ಪಂದ್ಯಗಳು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಪ್ಲೇ ಆಫ್ ಸುತ್ತಿನ ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯ ಕೋಲ್ಕತಾದಲ್ಲಿ ಆಯೋಜಿಸಲಾಗಿತ್ತು. ಇದೀಗ ಈಡನ್ ಗಾರ್ಡನ್ಸ್‌ನಿಂದ ಪಂದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಶಿಫ್ಟ್ ಆಗಿದೆ. 1 ಲಕ್ಷಕ್ಕೂ ಅಧಿಕ ಮಂದಿ ಕುಳಿತ ಪಂದ್ಯ ನೋಡುವ ಸಾಮರ್ಥ್ಯವಿರುವ ಕ್ರೀಡಾಂಗಣ ಇದಾಗಿದೆ.