ಐಪಿಎಲ್ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದ ಡಿಕಾಕ್ ಅಜೇಯ 140 ರನ್ ಸಿಡಿಸಿದ ಕ್ವಿಂಟನ್ ಡಿಕಾಕ್ ಕೆಕೆಆರ್‌ಗೆ 211 ರನ್ ಟಾರ್ಗೆಟ್ ನೀಡಿದ ಲಖನೌ
ಮುಂಬೈ(ಮೇ.18): ಕೆಕೆಆರ್ ವಿರುದ್ಧ ಸ್ಫೋಟಕ ಬ್ಟಾಟಿಂಗ್ ಪ್ರದರ್ಶನ ನೀಡಿದ ಲಖನೌ ಆರಂಭಿಕ ಕ್ವಿಂಟನ್ ಡಿಕಾಕ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಎರಡನೇ ಸೆಂಚುರಿ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 211 ರನ್ ಟಾರ್ಗೆಟ್ ನೀಡಿದೆ.
59 ಎಸೆತದಲ್ಲಿ ಡಿಕಾಕ್ ಸೆಂಚುರಿ ಸಿಡಿಸಿದ್ದಾರೆ. ಇದರಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್ ಒಳಗೊಂಡಿದೆ. ಡಿಕಾಕ್ ಜೊತೆಗೆ ನಾಯಕ ಕೆಎಲ್ ರಾಹುಲ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಹಾಫ್ ಸೆಂಚುರಿ ಸಿಡಿಸಿದ್ದಾರೆ.
IPL 2022: ದಿಢೀರ್ ಸನ್‌ರೈಸರ್ಸ್ ಹೈದ್ರಾಬಾದ್ ತೊರೆದು ನ್ಯೂಜಿಲೆಂಡ್‌ಗೆ ವಾಪಾಸ್ಸಾದ ವಿಲಿಯಮ್ಸನ್..!
ಕ್ವಿಂಟನ್ ಡಿಕಾಕ್ ಐಪಿಎಲ್ ಶತಕ
108 ರನ್ ಡೆಲ್ಲಿ vs ಆರ್‌ಸಿಬಿ, ಬೆಂಗಳೂರು (2016)
140* ಲಖನೌ vs ಕೆಕೆಆರ್, ಮುಂಬೈ (2022)
ಐಪಿಎಲ್ ಟೂರ್ನಿಯಲ್ಲಿ ವೈಯುಕ್ತಿಗ ಗರಿಷ್ಠ ರನ್
175* ಕ್ರಿಸ್ ಗೇಲ್ RCB v PWI ಬೆಂಗಳೂರು, 2013
158* ಬ್ರೆಂಡನ್ ಮೆಕಲಮ್ KKR v RCB ಬೆಂಗಳೂರು, 2008
140* ಕ್ವಿಂಟನ್ ಡಿಕಾಕ್ LSG v KKR ಮುಂಬೈ, 2022
133* ಎಬಿ ಡಿವಿಲಿಯರ್ಸ್ RCB v MI ಮುಂಬೈ, 2015
132* ಕೆಎಲ್ ರಾಹುಲ್ PK v RCB ದುಬೈ 2020
IPL 2022 ಮುಂಬೈ ವಿರುದ್ಧ 3 ರನ್ ರೋಚಕ ಗೆಲುವು ಕಂಡ ಹೈದರಾಬಾದ್!
ಕ್ವಿಂಟನ್ ಡಿಕಾಕ್ 70 ಎಸೆತದಲ್ಲಿ 10 ಬೌಂಡರಿ ಹಾಗೂ 10 ಸಿಕ್ಸರ್ ನೆರವಿನಿಂದ ಅಜೇಯ 140 ರನ್ ಸಿಡಿಸಿದರು. ಇತ್ತ ನಾಯಕ ಕೆಎಲ್ ರಾಹಲ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ರಾಹುಲ್ 51 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಜೇಯ 68 ರನ್ ಸಿಡಿಸಿದರು.
ಡಿಕಾಕ್ ಹಾಗೂ ರಾಹುಲ್ ಅಬ್ಬರದಿಂದ ಲಖನೌ ಸೂಪರ್ ಜೈಂಟ್ಸ್ ವಿಕೆಟ್ ನಷ್ಟವಿಲ್ಲದೆ 210 ರನ್ ಸಿಡಿಸಿದೆ.
ಲಖನೌ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಶತಕದ ಮೂಲಕ ಅಬ್ಬರಿಸಿದೆ. ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ 4 ಸೆಂಚುರಿ ಸಿಡಿಸಿದ್ದಾರೆ.
ಐಪಿಎಲ್‌ನಲ್ಲಿ 4 ಶತಕ
ರಾಹುಲ್ ಐಪಿಎಲ್‌ನಲ್ಲಿ 4 ಶತಕ ಬಾರಿಸಿದ 6ನೇ ಆಟಗಾರ . 141 ಪಂದ್ಯಗಳಲ್ಲಿ 6 ಶತಕ ಬಾರಿಸಿರುವ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ 5 ಶತಕದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಜೋಸ್ ಬಟ್ಲರ್, ಶೇನ್ ವಾಟ್ಸನ್, ಡೇವಿಡ್ ವಾರ್ನರ್ ಕೂಡಾ ಐಪಿಎಲ್‌ನಲ್ಲಿ 4 ಶತಕಗಳನ್ನು ಬಾರಿಸಿದ್ದಾರೆ.
6 ಟಿ20 ಶತಕ: ಜಂಟಿ ಅಗ್ರಸ್ಥಾನ
ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಭಾರತ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡಾ 6 ಶತಕಗಳನ್ನು ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ(5), ಸುರೇಶ್ ರೈನಾ(4) ನಂತರದ ಸ್ಥಾನಗಳಲ್ಲಿದ್ದಾರೆ.
