IPL 2022 ಲಖನೌಗೆ 2 ರನ್ ರೋಚಕ ಗೆಲುವು, ಟೂರ್ನಿಯಿಂದ ಹೊರಬಿದ್ದ ಕೆಕೆಆರ್!

  • ಕೆಕೆಆರ್ ವಿರುದ್ಧ ಲಖನೌ ತಂಡಕ್ಕೆ 2 ರನ್ ಗೆಲುವು
  • ಎರಡನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟ ರಾಹುಲ್ ಪಡೆ
  • ಕೆಕೆಆರ್ ಅಧಿಕೃತವಾಗಿ ಟೂರ್ನಿಯಿಂದ ಔಟ್
IPL 2022 Lucknow Super Giants enters play offs after beat Kolkata Knight Riders by 2 runs ckm

ನವದೆಹಲಿ(ಮೇ.18): IPL 2022 ಟೂರ್ನಿಯ ಪ್ಲೇ ಆಫ್ ಹಂತಕ್ಕೆ ಲಖನೌ ಸೂಪರ್ ಜೈಂಟ್ಸ್ ಪ್ರವೇಶ ಪಡೆದಿದೆ. ಕೆಕೆಆರ್ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ರನ್ ಗೆಲುವು ದಾಖಲಿಸಿದ ಕೆಎಲ್ ರಾಹುಲ್ ಪಡೆ, ಎರಡನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಇತ್ತ ಕೆಕೆಆರ್ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ.

ಲಖನೌ ಸೂಪರ್ ಜೈಂಟ್ಸ್ ಹಾಗೂ ಕೆಕೆಆರ್ ತಂಡದ ಅಂತಿಮ ಲೀಗ್ ಪಂದ್ಯದಲ್ಲಿ ಅತ್ಯುತ್ತಮ ಹೋರಾಟ ಏರ್ಪಟ್ಟಿತು. ಲಖನೌ ಬ್ಯಾಟಿಂಗ್‌ನಲ್ಲಿ ಸ್ಫೋಟಕ ಪ್ರದರ್ಶನ ನೀಡಿತು. ವಿಕೆಟ್ ನಷ್ಟವಿಲ್ಲದೆ 210 ರನ್ ಸಿಡಿಸಿತ್ತು. ಕ್ವಿಂಟನ್ ಡಿಕಾಕ್ ಸೆಂಚರಿ ಹಾಗೂ ನಾಯಕ ಕೆಎಲ್ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. 211ರನ್ ಟಾರ್ಗೆಟ್ ಪಡೆದ ಕೆಕೆಆರ್ ಕೂಡ ದಿಟ್ಟ ಹೋರಾಟವನ್ನೇ ನೀಡಿತು. ಆದರೆ ಗೆಲುವು ಸಿಗಲಿಲ್ಲ.

ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ವೇಗಿ ಜಸ್ಪ್ರೀತ್ ಬುಮ್ರಾ..!

ಕೆಕೆಆರ್ ಆರಂಭ ಕಳೆಪೆಯಾಗಿತ್ತು. ವೆಂಕಟೇಶ್ ಅಯ್ಯರ್ ಶೂನ್ಯ ಸುತ್ತಿದರೆ, ಅಭಿಜಿತ್ ತೋಮರ್ 4 ರನ್ ಿಸಿಡಿಸಿ ಔಟಾದರು. ಈ ಮೂಲಕ 9 ರನ್‌ಗಳಿಗೆ ಕೆಕೆಆರ್ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಿತೀಶ್ ರಾಣಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಹೋರಾಟದಿಂದ ಕೆಕೆಆರ್ ಚೇತರಿಸಿಕೊಂಡಿತು.

ರಾಣಾ 22 ಎಸೆತದಲ್ಲಿ 42 ರನ್ ಸಿಡಿಸಿ ಔಟಾದರು. ಇತ್ತ ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ಸಿಡಿಸಿದರು. ಅಯ್ಯರ್ 29 ಎಸೆತದಲ್ಲಿ 50 ರನ್ ಸಿಡಿಸಿ ನಿರ್ಗಮಿಸಿದರು. ಇನ್ನು ಸ್ಯಾಮ್ ಬಿಲ್ಲಿಂಗ್ಸ್ 24 ಎಸೆತದಲ್ಲಿ 36 ರನ್ ಕಾಣಿಕೆ ನೀಡಿದರು. 

ಆ್ಯಂಡ್ರೆ ರಸೆಲ್ 5 ರನ್ ಸಿಡಿಸಿ ಔಟಾದರು. ಆದರೆ ರಿಂಕು ಸಿಂಗ್ ಹಾಗೂ ಸುನಿಲ್ ನರೈನ್ ಜೊತೆಯಾಟ ಪಂದ್ಯದ ಗತಿಯನ್ನೇ ಬದಲಿಸಿತು ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ಲಖನೌ ತಂಡಕ್ಕೆ ಟೆನ್ಶನ್ ಹೆಚ್ಚಿಸಿತು. ಕಾರಣ ಸೋಲಿನ ಸುಳಿಯಲ್ಲಿದ್ದ ಕೆಕೆಆರ್ ಗೆಲುವಿನ ಹಾದಿಯಲ್ಲಿ ಸಾಗತೊಡಗಿತು.

ಅಂತಿಮ 6 ಎಸತದಲ್ಲಿ ಕೆಕೆಆರ್ ಗೆಲುವಿಗೆ 21 ರನ್ ಅವಶ್ಯಕತೆ ಇತ್ತು. ಎರಡು ಸಿಕ್ಸರ್, ಬೌಂಡರಿ ಮೂಲಕ ಪಂದ್ಯದ ರೋಚಕತೆಯನ್ನು ರಿಂಕು ಸಿಂಗ್ ಹೆಚ್ಚಿಸಿದರು. ಎರಡು ಎಸೆತದಲ್ಲಿ 3 ರನ್ ಬೇಕಿರುವಾಗ ರಿಂಕು ಸಿಂಗ್ ವಿಕೆಟ್ ಪತನಗೊಂಡಿತು. ಈ ಮೂಲಕ ಕೆಕೆಆರ್ ಗೆಲುವಿಗೆ ಅಂತಿಮ 1 ಎಸೆತದಲ್ಲಿ 3 ರನ್ ಅವಶ್ಯಕತೆ ಬಿದ್ದಿತು.

ಹಾಲ್ ಆಫ್ ಫೇಮ್ ಪರಿಚಯಿಸಿದ ಆರ್ ಸಿಬಿ, ಗೌರವ ಪಡೆದ ಮೊದಲಿಗರಾದ ಕ್ರಿಸ್ ಗೇಲ್, ಎಬಿಡಿ!

ಕ್ರೀಸ್‌ಗೆ ಬಂದ ಉಮೇಶ್ ಯಾದವ್ ಬಿರುಸಿನ ಹೊಡೆತಕ್ಕೆ ಮುಂದಾದರು ಆದರೆ ವಿಕೆಟ್ ಕೈಚೆಲ್ಲಿದರು. ಇದರೊಂದಿಗೆ ಲಖನೌ ಸೂಪರ್ ಜೈಂಟ್ಸ್ 2 ರನ್‌ಗಳ ರೋಚಕ ಗೆಲುವು ಕಂಡಿತು. 211 ರನ್ ಟಾರ್ಗೆಟ್ ಪಡದೆರೂ ದಿಟ್ಟ ಹೋರಾಟ ನೀಡಿದ ಕೆಕೆಆರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸೋಲಿನೊಂದಿಗೆ ಕೆಕೆಆರ್ ಟೂರ್ನಿಗೆ ವಿದಾಯ ಹೇಳಿತು.

 

ಡಿ ಕಾಕ್‌-ರಾಹುಲ್‌ ದಾಖಲೆ ಜೊತೆಯಾಟ!

ನವಿ ಮುಂಬೈ: ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಮೊದಲ ವಿಕೆಟ್‌ಗೆ ದ್ವಿಶತಕದ ಜೊತೆಯಾಟವಾಡಿದ ದಾಖಲೆಯನ್ನು ಲಖನೌ ಸೂಪರ್‌ಜೈಂಟ್ಸ್‌ ತಂಡದ ಕ್ವಿಂಟನ್‌ ಡಿ ಕಾಕ್‌ ಹಾಗೂ ಕೆ.ಎಲ್‌.ರಾಹುಲ್‌ ಬರೆದಿದ್ದಾರೆ. ಈ ಜೋಡಿ ಕೆಕೆಆರ್‌ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 210 ರನ್‌ ಜೊತೆಯಾಟವಾಡಿತು. 2019ರಲ್ಲಿ ಸನ್‌ರೈಸ​ರ್‍ಸ್ ಪರ ಆಡುವಾಗ ಜಾನಿ ಬೇರ್‌ಸ್ಟೋವ್‌ ಮತ್ತು ಡೇವಿಡ್‌ ವಾರ್ನರ್‌ ಮೊದಲ ವಿಕೆಟ್‌ಗೆ ಗಳಿಸಿದ್ದ 185 ರನ್‌ ಈ ಹಿಂದಿನ ದಾಖಲೆ ಎನಿಸಿತ್ತು.

ಇದು ಐಪಿಎಲ್‌ನಲ್ಲಿ ದಾಖಲಾದ 3ನೇ ಗರಿಷ್ಠ ರನ್‌ ಜೊತೆಯಾಟವೂ ಹೌದು. ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ ವಿಲಿಯ​ರ್‍ಸ್ ಒಮ್ಮೆ 229 ಮತ್ತೊಮ್ಮೆ 215 ರನ್‌ ಜೊತೆಯಾಟವಾಡಿದ್ದರು.

ಇನ್ನು ಐಪಿಎಲ್‌ನಲ್ಲಿ ಪೂರ್ತಿ 20 ಓವರ್‌ ಬ್ಯಾಟ್‌ ಮಾಡಿದ ಮೊದಲ ಜೋಡಿ ಎನ್ನುವ ದಾಖಲೆಯನ್ನೂ ಡಿ ಕಾಕ್‌ ಹಾಗೂ ರಾಹುಲ್‌ ಬರೆದಿದ್ದಾರೆ. 140 ರನ್‌ ಗಳಿಸಿ ಔಟಾಗದೆ ಉಳಿದ ಡಿ ಕಾಕ್‌, ಐಪಿಎಲ್‌ನಲ್ಲಿ 3ನೇ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು. ಕ್ರಿಸ್‌ ಗೇಲ್‌ (175) ಮತ್ತು ಬ್ರೆಂಡನ್‌ ಮೆಕ್ಕಲಂ(158) ಮೊದಲೆರಡು ಸ್ಥಾನಗಳಲ್ಲಿದ್ದಾರೆ.

Latest Videos
Follow Us:
Download App:
  • android
  • ios