Asianet Suvarna News Asianet Suvarna News

ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ವೇಗಿ ಜಸ್ಪ್ರೀತ್ ಬುಮ್ರಾ..!

* ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ಮುಂಬೈ ಇಂಡಿಯನ್ಸ್‌ ವೇಗಿ ಜಸ್ಪ್ರೀತ್ ಬುಮ್ರಾ

* ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಕಿತ್ತ ಪ್ರಥಮ ಭಾರತೀಯ ವೇಗಿ ಬುಮ್ರಾ

* ಟಿ20 ಕ್ರಿಕೆಟ್‌ನಲ್ಲಿ ಇದಕ್ಕೂ ಮೊದಲು ನಾಲ್ವರು ಭಾರತೀಯರು 250+ ವಿಕೆಟ್‌ ಪಡೆದಿದ್ದಾರೆ

IPL 2022 Mumbai Indians Jasprit Bumrah becomes first Indian pacer to take 250 T20 wickets kvn
Author
Bengaluru, First Published May 18, 2022, 10:08 AM IST

ಮುಂಬೈ(ಮೇ.18): ಮುಂಬೈ ಇಂಡಿಯನ್ಸ್‌ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಕಿತ್ತ ಪ್ರಥಮ ಭಾರತೀಯ ವೇಗಿ ಎನಿಸಿಕೊಂಡಿದ್ದಾರೆ. ಮಂಗಳವಾರ ಸನ್‌ರೈಸ​ರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧದ ಪಂದ್ಯದಲ್ಲಿ ವಾಷಿಂಗ್ಟನ್‌ ಸುಂದರ್‌ ಅವರನ್ನು ಬೌಲ್ಡ್‌ ಮಾಡುವ ಮೂಲಕ ಅವರು ಈ ಮೈಲಿಗಲ್ಲು ತಲುಪಿದರು. ಅವರು ಒಟ್ಟು 206 ಪಂದ್ಯಗಳನ್ನಾಡಿದ್ದಾರೆ. 

ಟಿ20 ಕ್ರಿಕೆಟ್‌ನಲ್ಲಿ ಇದಕ್ಕೂ ಮೊದಲು ನಾಲ್ವರು ಭಾರತೀಯರು 250+ ವಿಕೆಟ್‌ ಪಡೆದಿದ್ದಾರೆ. ಅವರೆಲ್ಲರೂ ಸ್ಪಿನ್ನರ್‌ಗಳು ಎನ್ನುವುದು ಗಮನಾರ್ಹ. ಸದ್ಯ ರಾಜಸ್ಥಾನ ರಾಯಲ್ಸ್‌ ಪರ ಆಡುತ್ತಿರುವ ಆರ್‌.ಅಶ್ವಿನ್‌ 274 ವಿಕೆಟ್‌ಗಳೊಂದಿಗೆ ಭಾರತೀಯರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಹಲ್‌(271), ಪಿಯೂಶ್‌ ಚಾವ್ಲಾ (270), ಅಮಿತ್‌ ಮಿಶ್ರಾ(262) ಕೂಡಾ 250ಕ್ಕೂ ಹೆಚ್ಚು ಪಡೆದಿದ್ದಾರೆ.

ಗಾಯ: ಅಜಿಂಕ್ಯಾ ರಹಾನೆ ಐಪಿಎಲ್‌ನಿಂದ ಹೊರಕ್ಕೆ

ಮುಂಬೈ: ಹೈದರಾಬಾದ್‌ ವಿರುದ್ಧದ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿರುವ ಕೋಲ್ಕತಾ ನೈಟ್ ರೈಡರ್ಸ್‌ ಬ್ಯಾಟರ್‌ ಅಜಿಂಕ್ಯ ರಹಾನೆ (Kolkata Knight Riders Cricketer Ajinkya Rahane) 15ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರು ಶೀಘ್ರದಲ್ಲೇ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಗೆ ತೆರಳಲಿದ್ದು, ನಾಲ್ಕು ವಾರಗಳ ಕಾಲ ಆಟದಿಂದ ದೂರ ಇರಲಿದ್ದಾರೆ. ಮುಂದಿನ ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. 

IPL 2022 ಮುಂಬೈ ವಿರುದ್ಧ 3 ರನ್ ರೋಚಕ ಗೆಲುವು ಕಂಡ ಹೈದರಾಬಾದ್!

ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ 1 ಕೋಟಿ ರುಪಾಯಿಗೆ ಕೆಕೆಆರ್‌ ಪಾಲಾಗಿದ್ದ ರಹಾನೆ 7 ಪಂದ್ಯಗಳಲ್ಲಿ 19ರ ಸರಾಸರಿಯಲ್ಲಿ ಕೇವಲ 133 ರನ್‌ ಗಳಿಸಿದ್ದು, ಮುಂದಿನ ಆವೃತ್ತಿಗೆ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರಾ ಶಿಖರ್ ಧವನ್‌?

ನವದೆಹಲಿ: ಟೀಂ ಇಂಡಿಯಾ ಆರಂಭಿಕ ಬ್ಯಾಟರ್‌ ಶಿಖರ್‌ ಧವನ್‌ ಸಿನಿಮಾ ರಂಗಕ್ಕೆ (Team India Cricketer Shikhar Dhawan Cinema Entry) ಪ್ರವೇಶಿಸಲು ಸಜ್ಜಾಗಿದ್ದು, ಇದೇ ವರ್ಷ ಬಾಲಿವುಡ್‌ ಸಿನಿಮಾವೊಂದರಲ್ಲಿ ಅಭಿನಯಿಸಲಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ ಧವನ್‌ ಸಿನಿಮಾದಲ್ಲಿ ಅಭಿನಯಿಸಲು ಈಗಾಗಲೇ ಒಪ್ಪಿಕೊಂಡಿದ್ದು, ಪೂರ್ಣ ಪ್ರಮಾಣದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಇದೇ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ’ ಎಂದು ಗೊತ್ತಾಗಿದೆ. ಸದ್ಯ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್ ಪರ ಆಡುತ್ತಿರುವ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಸ್ಯ ವಿಡಿಯೋಗಳಲ್ಲಿ ತಮ್ಮ ನಟನೆ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League Tournament) ಟೂರ್ನಿಯಲ್ಲಿ ಶಿಖರ್‌ ಧವನ್‌ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಇದುವರೆಗೂ 13 ಪಂದ್ಯಗಳನ್ನಾಡಿರುವ ಧವನ್‌ 38.27ರ ಬ್ಯಾಟಿಂಗ್‌ ಸರಾಸರಿಯಲ್ಲಿ 421 ರನ್ ಬಾರಿಸಿದ್ದು, ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಜೋಸ್ ಬಟ್ಲರ್(627), ಕೆ.ಎಲ್ ರಾಹುಲ್(469) ಹಾಗೂ ಡೇವಿಡ್ ವಾರ್ನರ್(427) ಬಳಿಕ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಶಿಖರ್ ಧವನ್ ಅದ್ಭುತ ಪ್ರದರ್ಶನದ ಹೊರತಾಗಿಯೂ ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್‌ ತಂಡವು ಪ್ಲೇ ಆಫ್‌ಗೇರುವಲ್ಲಿ ವಿಫಲವಾಗಿದೆ. ಇದುವರೆಗೂ ಪಂಜಾಬ್ ಕಿಂಗ್ಸ್ ತಂಡವು 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಪಂಜಾಬ್ ತಂಡವು ಇನ್ನೊಂದು ಪಂದ್ಯವನ್ನು ಆಡುವುದು ಭಾಕಿ ಉಳಿದಿದ್ದು, ಪ್ಲೇ ಆಫ್ ರೇಸ್‌ನಿಂದ ಬಹುತೇಕವಾಗಿ ಹೊರಬಿದ್ದಿದೆ
 

Follow Us:
Download App:
  • android
  • ios