Asianet Suvarna News Asianet Suvarna News

IPL 2022 ಕೆಎಲ್ ರಾಹುಲ್ ಆಯ್ತು, ಮಯಾಂಕ್ ಟೀಮ್ ಮೇಲೂ ಸೋತ ಚೆನ್ನೈ ಸೂಪರ್ ಕಿಂಗ್ಸ್!

ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 200ಕ್ಕೂ ಅಧಿಕ ಮೊತ್ತ ಬಾರಿಸಿಯೂ ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾನುವಾರದ ಪಂದ್ಯದಲ್ಲಿ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧವೂ ಮುಗ್ಗರಿಸಿದೆ. ಚೆನ್ನೈ ತಂಡ ಹಾಲಿ ಐಪಿಎಲ್ ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಂತಾಗಿದೆ.
 

IPL 2022 CSK vs PBKS Punjab Kings Beat Chennai Super Kings and Ravindra Jadeja Team faces third loss in row san
Author
Bengaluru, First Published Apr 3, 2022, 11:13 PM IST

ಮುಂಬೈ (ಏ.3): ಚೆನ್ನೈ ಸೂಪರ್ ಕಿಂಗ್ಸ್ (Chennai Super Kings ) ತಂಡದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಪಂಜಾಬ್ ಕಿಂಗ್ಸ್  (Punjab Kings) ತಂಡ ತನ್ನ 2ನೇ ಗೆಲುವು ದಾಖಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 54 ರನ್ ಗಳಿಂದ ಮಣಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿ (Brabourne Stadium) ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ (PBKS)ತಂಡ ಲಿಯಾಮ್ ಲಿವಿಂಗ್ ಸ್ಟೋನ್ (Liam Livingstone) ಬಾರಿಸಿದ ಅರ್ಧಶತಕ ಹಾಗೂ ಇತರ ಬ್ಯಾಟ್ಸ್ ಮನ್ ಗಳ ಕೆಲ ಕಾಣಿಕೆಯಿಂದಾಗಿ 8 ವಿಕೆಟ್ ಗೆ 180 ರನ್ ಪೇರಿಸಿತ್ತು. ಪ್ರತಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ 18 ಓವರ್ ಗಳಲ್ಲಿ 126 ರನ್ ಗೆ ಆಲೌಟ್‌ ಆಗುವುದರೊಂದಿಗೆ ಲೀಗ್ ನಲ್ಲಿ ಸತತ ಮೂರನೇ ಸೋಲು ಕಂಡಿತು. ಇನ್ನಿಂಗ್ಸ್ ನ ಕೊನೆಯಲ್ಲಿ ಎಂಎಸ್ ಧೋನಿ 23 ರನ್ (28 ಎಸೆತ, 1 ಬೌಂಡರಿ, 1 ಸಿಕ್ಸರ್) ಬಾರಿಸಲಷ್ಟೇ ಯಶಸ್ವಿಯಾದರು.

ಲಿಯಾಮ್ ಲಿವಿಂಗ್ ಸ್ಟೋನ್ (60 ರನ್, 32 ಎಸೆತ, 5 ಬೌಂಡರಿ, 5 ಸಿಕ್ಸರ್) ಸಖತ್ ಬ್ಯಾಟಿಂಗ್ ನಿಂದ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ ಸವಾಲಿನ ಮೊತ್ತವನ್ನು ಗುರಿಯಾಗಿ ನೀಡಿತ್ತು. 181 ರನ್ ಗಳ ಗುರಿ ಬೆನ್ನಟ್ಟಬಹುದಾದ ಮೊತ್ತವೇ ಆಗಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿಯಲು ಪಂಜಾಬ್ ಕಿಂಗ್ಸ್ ಬೌಲರ್ ಗಳು ಯಶಸ್ವಿಯಾಗಿದ್ದರು.

36 ರನ್ ಗಳಿಸುವ ವೇಳೆಗೆ ಪ್ರಮುಖ ಐದು ವಿಕೆಟ್ ಗಳನ್ನು ಕಳೆದುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆ ಬಳಿಕ ಚೇಸಿಂಗ್ ನಡೆಸುವ ಸಾಹಸಕ್ಕೆ ಮುಂದಾಗಲಿಲ್ಲ. ಫಾಫ್ ಡು ಪ್ಲೆಸಿಸ್ ತಂಡವನ್ನು ತೊರೆದ ಕ್ಷಣದಿಂದಲೂ ಕಳಪೆ ಫಾರ್ಮ್ ನಲ್ಲಿರುವ ರುತುರಾಜ್ ಗಾಯಕ್ವಾಡ್ (1) ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ರಬಾಡ ಎಸೆತದಲ್ಲಿ ಶಿಖರ್ ಧವನ್ ಗೆ ಕ್ಯಾಚ್ ನೀಡಿ ಹೊರಡೆದರು. ಕಳೆದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದ್ದ ಕನ್ನಡಿಗ ರಾಬಿನ್ ಉತ್ತಪ್ಪ 13 ರನ್ (10 ಎಸೆತ, 2 ಬೌಂಡರಿ) ಆಟ ಹಚ್ಚು ಹೊತ್ತು ಉಳಿಯಲಿಲ್ಲ. ವೈಭವ್ ಅರೋರಾ ಎಸೆತದಲ್ಲಿ ಮಯಾಂಕ್ ಗೆ ಕ್ಯಾಚ್ ನೀಡಿದ ಔಟಾದರು.

IPL 2022 'ನನ್ನ ಅಪ್ಪ-ಅಪ್ಪನಿಗಾಗಿ ಮನೆ ಖರೀದಿಸೋದು ನನ್ನ ಏಕೈಕ ಗುರಿ' ಎಂದ ಸೆನ್ಸೇಷನ್ ತಿಲಕ್ ವರ್ಮ!

ತಂಡ ಅಪಾಯದ ಸ್ಥಿತಿಯಲ್ಲಿದ್ದ ಹಂತದಲ್ಲಿ ಜೊತೆಯಾಗಿದ್ದ ಮೊಯಿನ್ ಅಲಿ ಹಾಗೂ ರವೀಂದ್ರ ಜಡೇಜಾ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಾಗಲಿಲ್ಲ. 2 ಎಸೆತ ಎದುರಿಸಿದ ಮೊಯಿನ್ ಅಲಿ ಶೂನ್ಯಕ್ಕೆ ವೈಭವ್ ಅರೋರಾಗೆ ವಿಕೆಟ್ ನೀಡಿದರೆ, ರವೀಂದ್ರ ಜಡೇಜಾ ಕೂಡ ಶೂನ್ಯಕ್ಕೆ ಆರ್ಶದೀಪ್ ಸಿಂಗ್ ಗೆ ಬೌಲ್ಡ್ ಆದರು. 23 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಅಂಬಟಿ ರಾಯುಡು ಹಾಗೂ ಶಿವಂ ದುಬೆ ಚೇತರಿಕೆ ನೀಡಲು ಪ್ರಯತ್ನಿಸಿದರು. 21 ಎಸೆತಗಳಲ್ಲಿ ತಾಳ್ಮೆಯ 13 ರನ್ ಬಾರಿಸಿದ್ದ ಅಂಬಟಿ ರಾಯುಡು, ಒಡೇನ್ ಸ್ಮಿತ್ ಗೆ ಔಟಾಗುತ್ತಿದ್ದಂತೆ ಚೆನ್ನೈ ಕಂಗಾಲಾಯಿತು.

IPL 2022 ಲಿವಿಂಗ್‌ಸ್ಟೋನ್ ಹಾಫ್ ಸೆಂಚುರಿ, ಚೆನ್ನೈಗೆ 181 ರನ್ ಗುರಿ!

ಚೆನ್ನೈ ತಂಡದ ಪರವಾಗಿ ಏಕಾಂಗಿ ಹೋರಾಟ ನಡೆಸಿದ ಶಿವಂ ದುಬೆ 57 ರನ್ (30 ಎಸೆತ, 6 ಬೌಂಡರಿ, 3 ಸಿಕ್ಸರ್) ಬಾರಿಸಿ ಗಮನಸೆಳೆದರು. ಶಿವಂ ದುಬೆ (Shivam Dube) ಮೈದಾನದಲ್ಲಿ ಇರುವವರೆಗೂ ಚೆನ್ನೈ ತಂಡ ಸಾಹಸಿಕ ಗೆಲುವು ಸಾಧಿಸಬಹುದು ಎನ್ನುವ ನಿರೀಕ್ಷೆ ಇಡಲಾಗಿತ್ತು. ಅವರ ಬ್ಯಾಟಿಂಗ್ ಸಾಹಸ ಕೂಡ ಅದೇ ರೀತಿಯಲ್ಲಿತ್ತು. ಧೋನಿ ಜೊತೆ 6ನೇ ವಿಕೆಟ್ ಗೆ ಅಮೂಲ್ಯ 62 ರನ್ ಜೊತೆಯಾಟವಾಡಿ ತಂಡಕ್ಕೆ ಜಯದ ವಿಶ್ವಾಸ ನೀಡಿದ್ದರು. ಸೀ ಹಂತದಲ್ಲಿ ದಾಳಿಗಿಳಿದ ಲಿವಿಂಗ್ ಸ್ಟೋನ್ ಸತತ ಎರಡು ಎಸೆತಗಳಲ್ಲಿ ಶಿವಂ ದುಬೆ ಹಾಗೂ ಡ್ವೇನ್ ಬ್ರಾವೋ ವಿಕೆಟ್ ಉರುಳಿಸುವ ಮೂಲಕ ಬೌಲಿಂಗ್ ನಲ್ಲೂ ತಂಡದ ಸಹಾಯಕ್ಕೆ ಬಂದರು. ರಾಹುಲ್ ಚಹರ್ 25 ರನ್ ಗೆ 3 ವಿಕೆಟ್ ಉರುಳಿಸಿ ಗಮನ ಸೆಳೆದರೆ, ಲಿವಿಂಗ್ ಸ್ಟೋನ್ ಹಾಗೂ ವೈಭವ್ ಅರೋರಾ ತಲಾ 2 ವಿಕೆಟ್ ಉರುಳಿಸಿದರು.

Follow Us:
Download App:
  • android
  • ios