IPL 2022 'ನನ್ನ ಅಪ್ಪ-ಅಪ್ಪನಿಗಾಗಿ ಮನೆ ಖರೀದಿಸೋದು ನನ್ನ ಏಕೈಕ ಗುರಿ' ಎಂದ ಸೆನ್ಸೇಷನ್ ತಿಲಕ್ ವರ್ಮ!
ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರಬಹುದು. ಆದರೆ, ತಿಲಕ್ ವರ್ಮ ಮೂಲಕ ಭವಿಷ್ಯದ ಆಟಗಾರನನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ. 19 ವರ್ಷ ಹೈದರಾಬಾದ್ ಹುಡುಗನ ಕ್ರಿಕೆಟ್ ಜರ್ನಿಯ ಮೈನವಿರೇಳಿಸುವಂಥದ್ದಾಗಿದೆ.
ಬೆಂಗಳೂರು (ಏ.3): ಮುಂಬೈ ಇಂಡಿಯನ್ಸ್ (Mumbai Indian) ತಂಡ ಐಪಿಎಲ್ ಹರಾಜಿನಲ್ಲಿ (IPL Auction) ತಿಲಕ್ ವರ್ಮ (Tilak Verma) ಎನ್ನುವ ಯುವ ಹುಡುಗನಿಗಾಗಿ ಬಿಡ್ ಮಾಡಿದಾಗಲೇ ಈ ಆಟಗಾರನ ಬಗ್ಗೆ ಸಾಕಷ್ಟು ಕುತೂಹಲಗಳು ದಾಖಲಾಗಿದ್ದವು. 2020 ಹಾಗೂ 2022ರಲ್ಲಿ ಭಾರತ ತಂಡ ರನ್ನರ್ ಅಪ್ ಆಗಿದ್ದ ಅಂಡರ್ -19 ವಿಶ್ವಕಪ್ ಟೂರ್ನಿಯ (U19 World Cup) ತಂಡದಲ್ಲಿ ಸ್ಥಾನ ಪಡೆದಿದ್ದ ಹೈದರಾಬಾದ್ ಹುಡುಗ ಐಪಿಎಲ್ ನಂಥ ದೊಡ್ಡ ವೇದಿಕೆಯಲ್ಲಿ ಆಡಿದ ಕೆಲವೇ ಇನ್ನಿಂಗ್ಸ್ ಗಳ ಮೂಲಕ ತಮ್ಮ ಮೌಲ್ಯವನ್ನು ಸಾಬೀತು ಮಾಡಿದ್ದಾರೆ.
ಐಪಿಎಲ್ ಹರಾಜಿನಲ್ಲಿ 1.7 ಕೋಟಿಗೆ ಮುಂಬೈಗೆ ಮಾರಾಟವಾಗಿದ್ದ ಹೈದರಾಬಾದ್ (Hyderabad) ಮೂಲದ ಕ್ರಿಕೆಟಿಗ ಮುಂಬೈ ಪರವಾಗಿ ಆಡಿ ಎರಡು ಪಂದ್ಯಗಳಲ್ಲಿ ಕ್ರಮವಾಗಿ 21 ಹಾಗೂ 61 ರನ್ ಬಾರಿಸಿದ್ದಾರೆ. ಹೈದರಾಬಾದ್ ನಲ್ಲಿ ಇಂದಿಗೂ ಬಾಡಿಗೆ ಮನೆಯಲ್ಲಿ ವಾಸವಿರುವ ತಿಲಕ್ ವರ್ಮ, ಐಪಿಎಲ್ ನಿಂದ (IPL) ಬಂದ ಹಣದಲ್ಲಿ ಅಪ್ಪ ಅಮ್ಮನಿಗಾಗಿ ಒಂದೊಳ್ಳೆಯ ಮನೆಯನ್ನು ಖರೀದಿಸುವ ಯೋಚನೆಯಲ್ಲಿದ್ದಾರೆ. ತಿಲಕ್ ವರ್ಮ ಆಡಿದ ಎರಡೂ ಇನ್ನಿಂಗ್ಸ್ ಗಳಲ್ಲಿ ಅಂತಾರಾಷ್ಟ್ರೀಯ ಬೌಲರ್ ಗಳನ್ನು ವಿಶ್ವಾಸದಿಂದ ಎದುರಿಸುವ ಮೂಲಕ ಗಮನಸೆಳೆದರು.
19 ವರ್ಷದ ಕ್ರಿಕೆಟಿಗ ಸಾಮಾನ್ಯ ಕುಟುಂಬದಿಂದ ಬಂದವರು. ಜೂನಿಯರ್ ಮಟ್ಟದ ಕ್ರಿಕೆಟ್‌ನಲ್ಲಿ ಕೆಲವು ಅದ್ಭುತ ಪ್ರದರ್ಶನಗಳೊಂದಿಗೆ ಉನ್ನತ ಸ್ಥಾನಕ್ಕೆ ಏರಿದ್ದಾರೆ. ತಿಲಕ್ ವರ್ಮಾ 2022 U19 ವಿಶ್ವಕಪ್‌ನಲ್ಲಿ ಗುರುತು ಗಮನಸೆಳೆಯಲು ವಿಫಲರಾದಾಗ, ಐಪಿಎಲ್ 2022 ಮೂಲಕ ಜಗತ್ತಿನ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಂ ಇಂಡಿಯಾ ಕೋಚ್ ಆಗಿ ದ್ರಾವಿಡ್ ಅದ್ಭುತ ಕೆಲಸ ಮಾಡುತ್ತಿದ್ದಾರೆ: ಸೌರವ್ ಗಂಗೂಲಿ
ಇತ್ತೀಚೆಗೆ ಈ ಬಗ್ಗೆ ಮಾತನಾಡಿದ ಬ್ಯಾಟ್ಸ್ ಮನ್ ( Batsman ), ತಾವು ಎದುರಿಸಿದ ಹಣಕಾಸು ಸವಾಲು (f inancial difficulties ), ಬಡತನಗಳ ಮಧ್ಯೆ ಎದ್ದು ಬಂದ ಬಗ್ಗೆ ತಿಳಿಸಿದರು. “ಕ್ರಿಕೆಟ್ ನಲ್ಲಿ ಆಗಿನ್ನೂ ಚಿಕ್ಕ ಹಂತದಲ್ಲಿದ್ದಾಗ, ನಾವು ಸಾಕಷ್ಟು ಆರ್ಥಿಕ ತೊಂದರೆಗಳನ್ನು ಹೊಂದಿದ್ದೆವು. ನನ್ನ ತಂದೆ ತನ್ನ ಅಲ್ಪ ಸಂಬಳದಲ್ಲಿ ನನ್ನ ಕ್ರಿಕೆಟ್ ವೆಚ್ಚವನ್ನು ಮತ್ತು ನನ್ನ ಅಣ್ಣನ ವ್ಯಾಸಂಗವನ್ನು ನೋಡಿಕೊಳ್ಳಬೇಕಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಕೆಲವು ಪ್ರಾಯೋಜಕತ್ವ ಮತ್ತು ಪಂದ್ಯದ ಶುಲ್ಕದೊಂದಿಗೆ ( Match Fee ) , ನನ್ನ ಕ್ರಿಕೆಟ್ ವೆಚ್ಚವನ್ನು ( Cricket expenses ) ನಾನು ನೋಡಿಕೊಳ್ಳಲು ಆರಂಭಿಸಿದ್ದೇನೆ' ಎಂದು ಹೇಳಿದ್ದಾರೆ. “ನಮಗೆ ಇನ್ನೂ ಸ್ವಂತ ಮನೆ ಇಲ್ಲ. ಹಾಗಾಗಿ ಈ ಐಪಿಎಲ್‌ನಲ್ಲಿ ನಾನು ಗಳಿಸಿದ್ದೆಲ್ಲದರ ಜೊತೆಗೆ ನನ್ನ ಏಕೈಕ ಗುರಿ ನನ್ನ ತಂದೆ-ತಾಯಿಗಳಿಗೆ ಮನೆ ಕೊಡಿಸುವುದು. ಈ ಐಪಿಎಲ್ ಹಣವು ನನ್ನ ಉಳಿದ ವೃತ್ತಿಜೀವನದಲ್ಲಿ ಮುಕ್ತವಾಗಿ ಆಡಲು ನೆರವಾಗುತ್ತದೆ' ಎಂದು ಹೇಳಿದ್ದಾರೆ.
ICC Women's World Cup: ಸೀವರ್ ಶತಕ ವ್ಯರ್ಥ, ಆಸ್ಟ್ರೇಲಿಯಾ 7ನೇ ಬಾರಿಗೆ ವಿಶ್ವ ಚಾಂಪಿಯನ್
ಹರಾಜಿನಲ್ಲಿ ನಾನು ಮುಂಬೈ ತಂಡ ಸೇರಿಕೊಂಡಾಗ ಅಮ್ಮ ಮೌನವಾಗಿದ್ದರು: ನಾನು ಐಪಿಎಲ್ ಒಪ್ಪಂದ ಪಡೆದುಕೊಂಡ ಬಳಿಕ ನನ್ನ ತಾಯಿ ಮೌನವಾಗಿದ್ದರು. ಅವರ ಸಂಭ್ರಮವನ್ನು ಹೇಳಲು ಪದಗಳೇ ಇರಲಿಲ್ಲ. "ಐಪಿಎಲ್ ಹರಾಜು ನಡೆಯುತ್ತಿರುವ ದಿನ, ನಾನು ನನ್ನ ಕೋಚ್ ಜೊತೆ ವಿಡಿಯೋ ಕಾಲ್ ನಲ್ಲಿದ್ದೆ. ಬಿಡ್‌ಗಳು ಹೆಚ್ಚಾದಾಗ ನನ್ನ ಕೋಚ್ ಕಣ್ಣೀರಿಡಲು ಪ್ರಾರಂಭಿಸಿದರು. ನನ್ನನ್ನು ಮುಂಬೈ ತಂಡ ಆಯ್ಕೆ ಮಾಡಿದ ನಂತರ, ನಾನು ನನ್ನ ಪೋಷಕರಿಗೆ ಕರೆ ಮಾಡಿದೆ. ಅವರೂ ಕೂಡ ಕರೆಯಲ್ಲಿಯೇ ಅಳಲು ಆರಂಭಿಸಿದ್ದರು. ನನ್ನ ತಾಯಿಗೆ ಸಂಭ್ರಮದಲ್ಲಿ ಪದಗಳೇ ಹೊರಳುತ್ತಿರಲಿಲ್ಲ ”ಎಂದು ಹೇಳಿದರು.