IPL 2023 ಡಿ. 16ಕ್ಕೆ ಐಪಿಎಲ್ ಆಟಗಾರರ ಮಿನಿ ಹರಾಜು, ಜಡೇಜಾ ಖರೀದಿಗೆ ಹಲವು ಫ್ರಾಂಚೈಸಿ ತಯಾರಿ!
ಟಿ20 ವಿಶ್ವಕಪ್ ಟೂರ್ನಿಗೆ ತಯಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮುಂಬರುವ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದೆ. ಇದೀಗ ಡಿಸೆಂಬರ್ 16ಕ್ಕೆ ಐಪಿಎಲ್ ಆಟಗಾರರ ಮಿನಿ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಬಾರಿಯ ಹರಾಜಿನ ವಿವರ ಇಲ್ಲಿವೆ.
ಮುಂಬೈ(ಸೆ.23): ಐಪಿಎಲ್ ಟೂರ್ನಿ ಸಿದ್ಧತೆಗಳು ಆರಂಭಗೊಂಡಿದೆ. ಫ್ರಾಂಚೈಸಿಗಳು ಈಗಾಗಲೇ ಆರಂಭಿಕ ಹಂತದ ತಯಾರಿ ಮಾಡಿಕೊಳ್ಳುತ್ತಿದೆ. ಇತ್ತ ಬಿಸಿಸಿಐ ಕೂಡ ಮಿನಿ ಐಪಿಎಲ್ ಹರಾಜು ಪ್ರಕ್ರಿಯೆಗೆ ಕೆಲಸ ಆರಂಭಿಸಿದೆ. ಬಿಸಿಸಿಐ ಮೂಲಗಳ ಪ್ರಕಾರ ಡಿಸೆಂಬರ್ 16ಕ್ಕೆ ಐಪಿಎಲ್ ಆಟಾಗರರ ಮಿನಿ ಹರಾಜು ನಡೆಯಲಿದೆ. 2022ರ ಐಪಿಎಲ್ ಟೂರ್ನಿಗಾಗಿ ಈ ವರ್ಷದ ಫೆಬ್ರವರಿಯಲ್ಲಿ ಮೆಘಾ ಐಪಿಎಲ್ ಹರಾಜು ನಡೆದಿತ್ತು. ಈ ಮೂಲಕ ಬಹುತೇಕ ಆಟಗಾರರು ಅದಲು ಬದಲಾಗಿದ್ದರು. ಇದೀಗ ಮಿನಿ ಹರಾಜು ನಡೆಯಲಿದೆ. ಆದರೆ ಈ ಬಾರಿಯ ಹರಾಜು ಪ್ರಕ್ರಿಯೆ ಎಲ್ಲಿ ನಡೆಯಲಿದೆ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಡಿಸೆಂಬರ್ ತಿಂಗಳಲ್ಲಿ ಮಿನಿ ಹರಾಜು ನಡೆದರೆ ಒಂದು ವರ್ಷದಲ್ಲಿ ಎರಡು ಹರಾಜು ಪ್ರಕ್ರಿಯೆ ನಡೆದಂತಾಗುತ್ತದೆ. ಇದಕ್ಕೂ ಮೊದಲು 2018ರಲ್ಲಿ ಇದೇ ರೀತಿ ಒಂದೇ ವರ್ಷದಲ್ಲಿ ಎರಡು ಹರಾಜು ನಡೆದಿತ್ತು.
ಫ್ರಾಂಚೈಸಿಗಳು(Franchise) ಹರಾಜಿಗೂ ಮುನ್ನ ಕೆಲವೇ ಕೆಲವು ಆಟಗಾರರನ್ನು ರಿಲೀಸ್ ಮಾಡಲಿದೆ. ರಿಲೀಸ್ ಆದ ಹಾಗೂ ಇತರ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ ತಿಂಗಳಲ್ಲಿ ಪ್ರತಿ ಫ್ರಾಂಚೈಸಿ ತಂಡದಲ್ಲಿ ಉಳಿಸಿಕೊಂಡ ಹಾಗೂ ರಿಲೀಸ್(Retain and Release) ಮಾಡಿದ ಆಟಗಾರರ ಪಟ್ಟಿಯನ್ನು ನೀಡಬೇಕು.
IPL 2023: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಮಿನಿ ಹರಾಜಿಗೂ(IPL Mini Auction ) ಮುನ್ನವೇ ಟ್ರೇಡ್ ಮೂಲಕ ಆಟಗಾರರ ಖರೀದಿಗೆ ಕೆಲ ಫ್ರಾಂಚೈಸಿಗಳು ಮುಂದಾಗಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರವೀಂದ್ರ ಜಡೇಜಾ(Ravindra Jadeja) ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಚೆನ್ನೈ ಫ್ರಾಂಚೈಸಿ ಕದ ತಟ್ಟಿದೆ. ಟ್ರೇಡ್ ಮೂಲಕ ಜಡೇಜಾ ಖರೀದಿಸಲು ಡೆಲ್ಲಿ ಯತ್ನಿಸುತ್ತಿದೆ. ಇತ್ತ ಇತರ ಕೆಲ ಫ್ರಾಂಚೈಸಿ ಕೂಡ ರವೀಂದ್ರ ಜಡೇಜಾ ಖರೀದಿಗೆ ಆಸಕ್ತಿ ತೋರಿದೆ.
2023ರಲ್ಲೂ ಸಿಎಸ್‌ಕೆಗೆ ಧೋನಿಯೇ ನಾಯಕ
2023ರ ಐಪಿಎಲ್‌ನಲ್ಲಿ ಎಂ.ಎಸ್.ಧೋನಿ ಆಡಲಿದ್ದಾರೆ ಎನ್ನುವ ವಿಷಯವನ್ನು ಖಚಿತಪಡಿಸಿರುವ ಚೆನ್ನೈ ಸೂಪರ್ ಕಿಂಗ್‌್ಸ ತಂಡದ ಸಿಇಒ ಕಾಶಿ ವಿಶ್ವನಾಥನ್, ಧೋನಿಯೇ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ. 2022ರ ಆವೃತ್ತಿಯ ಆರಂಭದಲ್ಲಿ ನಾಯಕತ್ವದಿಂದ ಹಿಂದೆ ಸರಿದಿದ್ದ ಧೋನಿ, ರವೀಂದ್ರ ಜಡೇಜಾಗೆ ಜವಾಬ್ದಾರಿ ವಹಿಸಿದ್ದರು. ಆದರೆ ಜಡೇಜಾ ಅವರ ನಾಯಕತ್ವದಲ್ಲಿ ತಂಡ ಉತ್ತಮ ಆಟವಾಡದ ಕಾರಣ ಧೋನಿ ಮತ್ತೊಮ್ಮೆ ತಂಡ ಮುನ್ನಡೆಸುವ ಹೊಣೆ ಹೊತ್ತಿದ್ದರು. 2022ರ ಆವೃತ್ತಿ ಬಳಿಕ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆ ಸುದ್ದಿ ಸುಳ್ಳು ಎಂದು ಸಿಎಸ್‌ಕೆ ಸ್ಪಷ್ಟಪಡಿಸಿದೆ.
Ind vs Aus T20I: ಮೂರನೇ ಪಂದ್ಯದ ಟಿಕೆಟ್ ಖರೀದಿಸಿಲು ಹೈದರಾಬಾದ್‌ನಲ್ಲಿ ನೂಕು ನುಗ್ಗಲು..! ಲಾಠಿ ಚಾರ್ಜ್
ಲಾರಾ ಸನ್ರೈಸರ್ಸ್ ತಂಡದ ಹೊಸ ಕೋಚ್
ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ 2023ರ ಐಪಿಎಲ್ ಆವೃತ್ತಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಟಿ20 ತಂಡವೊಂದರ ಪ್ರಧಾನ ಕೋಚ್ ಆಗಿ ಮೊದಲ ಬಾರಿಗೆ ಲಾರಾ ಕಾರ‍್ಯನಿರ್ವಹಿಸಲಿದ್ದಾರೆ. ಈ ಹಿಂದೆ ಅವರು ಸನ್ರೈಸರ್ಸ್ ತಂಡದ ಸಲಹೆಗಾರ ಮತ್ತು ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಕಳೆದ ಆವೃತ್ತಿಯಲ್ಲಿ ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ತಂಡದ ಕೋಚ್ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡ 8ನೇ ಸ್ಥಾನ ಪಡೆದಿತ್ತು.