ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದದ ಪಂದ್ಯದಲ್ಲಿ ಔಟ್‌ ಬೇಸರದಲ್ಲಿ ಡಗೌಟ್‌ನಲ್ಲಿ ಚೇರ್‌ಗೆ ಒದ್ದಿದ್ದಕ್ಕೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮ್ಯಾಚ್‌ ರೆಫ್ರಿಯಿಂದ ಚೀಮಾರಿ ಹಾಕಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಚೆನ್ನೈ(ಏ.16): ಸನ್‌ರೈಸ​ರ್ಸ್‌ ಹೈದರಾಬಾದ್‌ ವಿರುದ್ಧ ಬುಧವಾರ(ಏ.14)ದಂದು ನಡೆದ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ್ದಕ್ಕೆ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿಗೆ ಮ್ಯಾಚ್‌ ರೆಫ್ರಿ ನಾರಾಯಣ್‌ ಕುಟ್ಟಿ ಛೀಮಾರಿ ಹಾಕಿದ್ದಾರೆ. 

ಸನ್‌ರೈಸರ್ಸ್‌ ವೇಗಿ ಜೇಸನ್‌ ಹೋಲ್ಡರ್‌ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಔಟಾಗಿ ಹೊರನಡೆಯುವಾಗ ಸಿಟ್ಟಿನಲ್ಲಿ ತಂಡದ ಡಗೌಟ್‌ನಲ್ಲಿದ್ದ ಚೇರ್‌ವೊಂದನ್ನು ಒದ್ದರು. ಇದು ನಿಯಮ ಉಲ್ಲಂಘನೆಯಾಗಿದ್ದು, ಕೊಹ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಮತ್ತೊಮ್ಮೆ ನಿಯಮ ಉಲ್ಲಂಘಿಸದಂತೆ ರೆಫ್ರಿ, ಕೊಹ್ಲಿಗೆ ಎಚ್ಚರಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 33 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದ್ದರು.

ಒಂದೇ ಓವರ್‌ನಲ್ಲಿ 3 ವಿಕೆಟ್‌: ಯಶಸ್ಸಿನ ಸೀಕ್ರೇಟ್‌ ಬಿಚ್ಚಿಟ್ಟ ಶಹಬಾಜ್‌ ಅಹಮದ್

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಆರ್‌ಸಿಬಿ ನೀಡಿದ್ದ 150 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ಹೈದರಾಬಾದ್‌ ಒಂದು ಹಂತದಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 96 ರನ್‌ ಬಾರಿಸುವ ಮೂಲಕ ಗೆಲುವಿನತ್ತ ದಾಪುಗಾಲು ಇಟ್ಟಿತ್ತು. ಆದರೆ ಶಹಬಾಜ್ ಅಹಮದ್ 17ನೇ ಓವರ್‌ನಲ್ಲಿ 3 ವಿಕೆಟ್‌ ಕಬಳಿಸುವ ಮೂಲಕ ಪಂದ್ಯ ಆರ್‌ಸಿಬಿ ಪಾಲಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.