Asianet Suvarna News Asianet Suvarna News

ಐಪಿಎಲ್‌ಗೆ ರಶೀದ್‌ ಖಾನ್‌, ಮೊಹಮ್ಮದ್ ನಬಿ ಲಭ್ಯ

* ಆಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಅಟ್ಟಹಾಸ

* ಹೀಗಿದ್ದೂ ಐಪಿಎಲ್‌ನಲ್ಲಿ ರಶೀದ್ ಖಾನ್‌, ಮೊಹಮ್ಮದ್ ನಬಿ ಭಾಗಿ

* ಐಪಿಎಲ್ ಭಾಗ 2 ಸೆಪ್ಟೆಂಬರ್ 19ರಿಂದ ಆರಂಭ

IPL 2021 Rashid Khan Mohammad Nabi Available For UAE Leg Says SRH kvn
Author
Kabul, First Published Aug 17, 2021, 8:26 AM IST
  • Facebook
  • Twitter
  • Whatsapp

ಕಾಬೂಲ್‌(ಆ.17): ದೇಶವನ್ನು ತಾಲಿಬಾನಿಗಳು ಆಕ್ರಮಿಸಿದ್ದರೂ ಅಪ್ಘಾನಿಸ್ತಾನದ ಕ್ರಿಕೆಟಿಗರು ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಆರಂಭಗೊಳ್ಳಲಿರುವ ಐಪಿಎಲ್‌ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಅಪ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ(ಎಸಿಬಿ) ಸಿಇಒ ಹಂಇಸ್‌ ಶಿನ್ವರಿ ತಿಳಿಸಿದ್ದಾರೆ.

ತಾಲಿಬಾನ್‌ಗಳು ಕ್ರಿಕೆಟ್‌ ಅನ್ನು ಇಷ್ಟಪಡುತ್ತಾರೆ ಹಾಗೂ ಬೆಂಬಲಿಸುತ್ತಾರೆ. ಹಾಗಾಗಿ ಆಫ್ಘನ್‌ನಲ್ಲಿ ಕ್ರಿಕೆಟ್‌ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಕ್ರಿಕೆಟ್‌ ಆಟಗಾರರ ಕುಟುಂಬಸ್ಥರು ಕ್ಷೇಮವಾಗಿದ್ದಾರೆ. ಮಂಗಳವಾರದಿಂದಲೇ ದೇಶದಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಮತ್ತೆ ಆರಂಭಗೊಳ್ಳಲಿದೆ. ಸೆ.1ರಿಂದ ಪಾಕಿಸ್ತಾನ ವಿರುದ್ಧ ನಿಗದಿಯಾಗಿರುವ ಕ್ರಿಕೆಟ್‌ ಸರಣಿ, ಸೇರಿದಂತೆ ಟಿ20 ವಿಶ್ವಕಪ್‌ನಲ್ಲೂ ತಂಡ ಭಾಗವಹಿಸಲಿದೆ ಎಂದಿದ್ದಾರೆ.

ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ದಿಗ್ಗಜ ಎಡಗೈ ಕ್ರಿಕೆಟಿಗರು..!

ಪ್ರಸ್ತುತ ರಶೀದ್‌ ಖಾನ್‌, ಮೊಹಮ್ಮದ್‌ ನಬಿ, ಮುಜೀಬ್‌ ಜರ್ದಾನ್‌ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಹಂಡ್ರೆಡ್‌ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಅಪ್ಘಾನಿಸ್ತಾನದ ಕ್ರಿಕೆಟಿಗರಾದ ರಶೀದ್‌ ಖಾನ್‌ ಹಾಗೂ ಮೊಹಮ್ಮದ್‌ ನಬಿ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್‌ ತಂಡ ತಿಳಿಸಿದೆ. ಸದ್ಯ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿಲ್ಲ. ಆದರೆ, ಇಬ್ಬರು ಐಪಿಎಲ್‌ಗೆ ಲಭ್ಯ ಇರಲಿದ್ದಾರೆ’ ಎಂದು ಸನ್‌ರೈಸರ್ಸ್‌ ಸಿಇಒ ಕೆ.ಷಣ್ಮುಗಂ ತಿಳಿಸಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಿಂದ ಹಿಂದಕ್ಕೆ:

ದೇಶದಲ್ಲಿ ಉಂಟಾಗಿರುವ ಅರಾಜೂಕತೆಯಿಂದಾಗಿ ಅಷ್ಘಾನಿಸ್ತಾನದ ಅಥ್ಲೀಟ್‌ಗಳು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾರೆ.
 

Follow Us:
Download App:
  • android
  • ios