IPL 2021 ಟೂರ್ನಿಯ 32ನೇ ಲೀಗ್ ಪಂದ್ಯ ಪಂಜಾಬ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ ಹೋರಾಟ ಉಭಯ ತಂಡದ ಸಂಭಾವ್ಯ ಪ್ಲೇಯಿಂಗ್ 11, ಯಾರಿಗೆದೆ ಚಾನ್ಸ್?
ದುಬೈ(ಸೆ.21): ಪಂಜಾಬ್ ಕಿಂಗ್ಸ್(Punjab Kings) ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಹೋರಾಟ ಹಲವು ಕುತೂಹಲಕ್ಕೆ ಕಾರಣವಾಗಿದೆ. ಉಭಯ ತಂಡದಲ್ಲೂ ಬಲಿಷ್ಠ ಟಿ20 ಬ್ಯಾಟ್ಸ್‌ಮನ್ ದಂಡೇ ಇದೆ. ಹೀಗಾಗಿ ರೋಚಕ ಹೋರಾಟ ಖಚಿತ. ಇಂದಿನ ಐಪಿಎಲ್ 2021ರ (IPL 2021) 32ನೇ ಲೀಗ್ ಪಂದ್ಯಕ್ಕೆ ತಂಡದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಸಂಭಾವ್ಯ ತಂಡದ ಲಿಸ್ಟ್ ನೀಡುತ್ತಿದೆ.
ರಾಜಸ್ಥಾನ Vs ಪಂಜಾಬ್: ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಸೆಣಸಾಟ!
ಪಂಜಾಬ್(PBKS) ತಂಡದಲ್ಲಿ ಕ್ರಿಸ್ ಅಥವಾ ಎಡೆನ್ ಮರಕ್ರಾಮ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಜೇ ರಿಚರ್ಡನ್ಸನ್, ರಿಲೆ ಮೆರೆಡಿತ್, ಡೇವಿಡ್ ಮಲನ್ ದುಬೈ ಅವತರಣಿಕೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ.
ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ 11:
ಕೆಎಲ್ ರಾಹುಲ್(ನಾಯಕ), ಮಯಾಂಗ್ ಅಗರ್ವಾಲ್,, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡ, ಶಾರುಖ್ ಖಾನ್, ಆದಿಲ್ ರಶೀದ್, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್, ನಥನ್ ಎಲ್ಲಿಸ್, ಮೊಹಮ್ಮದ್ ಶಮಿ
IPL 2021: ಕೆಕೆಆರ್ ವಿರುದ್ದ ಮುಗ್ಗರಿಸಿದ ಕೊಹ್ಲಿ ಸೈನ್ಯದ ನೆಟ್ ರನ್‌ರೇಟ್ ಕುಸಿತ!
ದುಬೈನಲ್ಲಿ ಆರಂಭಗೊಂಡಿರುವ ಐಪಿಎಲ್ 2021ರ ಎರಡನೇ ಭಾಗಕ್ಕೆ ಕೆಲ ಇಂಗ್ಲೆಂಡ್ ಕ್ರಿಕೆಟಿಗರು ಅಲಭ್ಯರಾಗಿದ್ದಾರೆ. ಇದು ರಾಜಸ್ಥಾನ ರಾಯಲ್ಸ್(Rajasthan Royals) ತಂಡಕ್ಕೆ ತೀವ್ರ ಹೊಡೆತ ನೀಡಿದೆ. ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಆ್ಯಂಡ್ರೂ ಟೈ ಅಲಭ್ಯರಾಗಿದ್ದಾರೆ.
ರಾಜಸ್ಥಾನ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ 11:
ಇವಿನ್ ಲಿವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ), ರಿಯಾನ್ ಪರಾಗ್, ಶಿವಮ್ ದುಬೆ, ಲಿಯಾಮ್ ಲಿವಿಂಗ್‌ಸ್ಟೋನ್, ರಾಹುಲ್ ಟಿವಾಟಿಯಾ, ಕ್ರಿಸ್ ಮೊರಿಸ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ, ತಬ್ರೈಜ್ ಶಮ್ಸಿ
IPL 2021: ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದರೂ ಹೊಸ ಮೈಲಿಗಲ್ಲು ನಿರ್ಮಿಸಿದ ನಾಯಕ ವಿರಾಟ್!
ಇತ್ತೀಚೆಗೆ ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಟಿ20 ವಿಶ್ವಕಪ್ ಟೂರ್ನಿಗೆ ತಂಡ ಪ್ರಕಟಿಸಿದೆ. ಆದರೆ ರಾಜಸ್ಥಾನ ರಾಯಲ್ಸ್‌ನಿಂದ ಯಾವೊಬ್ಬ ಆಟಗಾರ ಆಯ್ಕೆಯಾಗಿಲ್ಲ.
ರಾಜಸ್ಥಾನ ರಾಯಲ್ಸ್(RR) ಆಡಿದ 7 ಪಂದ್ಯದಿಂದ 3 ಗೆಲುವು ಹಾಗೂ 4 ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇತ್ತ ಪಂಜಾಬ್ ಕಿಂಗ್ಸ್ 8 ಪಂದ್ಯಗಳನ್ನು ಆಡಿದೆ. ಇದರಲ್ಲಿ 3 ಗೆಲುವು ಹಾಗೂ 5 ಸೋಲು ಕಂಡಿದೆ. ಇದರೊಂಂದಿಗೆ ಪಂಜಾಬ್ ಕಿಂಗ್ಸ್ 7 ಸ್ಥಾನ ಪಡೆದಿದೆ.
IPL 2021 ಮುಂಬೈ ಎದುರು ಚೆನ್ನೈ ದಿಗ್ವಿಜಯವನ್ನು ಕೊಂಡಾಡಿದ ಕ್ರಿಕೆಟ್ ಪಂಡಿತರು..
ದುಬೈ ಕ್ರೀಡಾಂಗಣ:
ಈ ಆವೃತ್ತಿಯ ಮೊದಲ ಪಂದ್ಯ ದುಬೈ(Dubai) ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಮುಂಬೈ(MI) ಮಣಿಸಿ ಗೆಲುವು ಕಂಡಿತ್ತು. ಇದೇ ಮೈದಾನದಲ್ಲಿ ಇಂದು ರಾಜಸ್ಥಾನ ಹಾಗೂ ಪಂಜಾಬ್ ತಂಡ ಹೋರಾಟ ನಡೆಸಲಿದೆ. ಹೀಗಾಗಿ ಟಾಸ್ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದೆ.
