Asianet Suvarna News Asianet Suvarna News

IPL 2021: ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದರೂ ಹೊಸ ಮೈಲಿಗಲ್ಲು ನಿರ್ಮಿಸಿದ ನಾಯಕ ವಿರಾಟ್!

  • IPL 2021 ಎರಡನೇ ಭಾಗದ 2ನೇ ಪಂದ್ಯಲ್ಲಿ ಕೊಹ್ಲಿ ಸಾಧನೆ
  • ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಕೊಹ್ಲಿಗೆ ಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು
  • ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಪಂದ್ಯ ಆಡಿದ ಸಾಧನೆ
     
IPL 2021 Virat kohli plays 200th match for royal challengers bangalore franchise ckm
Author
Bengaluru, First Published Sep 20, 2021, 9:49 PM IST
  • Facebook
  • Twitter
  • Whatsapp

ಅಬು ಧಾಬಿ(ಸೆ.20); ಐಪಿಎಲ್ 2021(IPL 2021) ಎರಡನೆ ಭಾಗ ಆರಂಭದಲ್ಲೇ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದೆ. ಅಬ್ಬರದ ಬ್ಯಾಟಿಂಗ್ ನಿರೀಕ್ಷಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(royal challengers bangalore)ತಂಡದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಒಂದೇ ಫ್ರಾಂಚೈಸಿಗೆ ಗರಿಷ್ಠ ಪಂದ್ಯ ಆಡಿದ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

IPL 2021:ಕೆಕೆಆರ್ ದಾಳಿಗೆ ತತ್ತರಿಸಿದ RCB, ಅಲ್ಪ ಮೊತ್ತಕ್ಕೆ ಆಲೌಟ್!

ಕೋಲ್ಕತಾ ನೈಟ್ ರೈಡರ್ಸ್( kolkata knight riders)ವಿರುದ್ಧದ ಪಂದ್ಯ ನಾಯಕ ವಿರಾಟ್ ಕೊಹ್ಲಿಗೆ(Virat Kohli) 200ನೇ ಐಪಿಎಲ್ ಪಂದ್ಯ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರ ಗರಿಷ್ಠ ಪಂದ್ಯ ಆಡಿದ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 

ವಿರಾಟ್ ಕೊಹ್ಲಿ ಬಳಿಕ RCB ನಾಯಕರಾಗೋರು ಯಾರು..? ಇಲ್ಲಿವೆ 5 ಉತ್ತಮ ಆಯ್ಕೆಗಳು..!

IPL 2021,ಒಂದೇ ಫ್ರಾಂಚೈಸಿಗೆ  ಗರಿಷ್ಠ ಪಂದ್ಯ ಆಡಿದ ಕ್ರಿಕೆಟರ್ಸ್:
200 ಪಂದ್ಯ, ವಿರಾಟ್ ಕೊಹ್ಲಿ(RCB) *
182 ಪಂದ್ಯ, ಎಂ.ಎಸ್.ಧೋನಿ(CSK)
172 ಪಂದ್ಯ, ಸುರೇಶ್ ರೈನಾ (CSK)
172 ಪಂದ್ಯ, ಕೀರನ್ ಪೊಲಾರ್ಡ್ (MI)
162 ಪಂದ್ಯ, ರೋಹಿತ್ ಶರ್ಮಾ (MI)

BREAKING: ಐಪಿಎಲ್ 2021ರ ಬಳಿಕ RCB ನಾಯಕತ್ವಕ್ಕೆ ಕೊಹ್ಲಿ ಗುಡ್‌ಬೈ!

200 ಐಪಿಎಲ್ ಪಂದ್ಯದಿಂದ ವಿರಾಟ್ ಕೊಹ್ಲಿ 6,081 ರನ್ ಸಿಡಿಸಿದ್ದಾರೆ. 5 ಶತಕ ಹಾಗೂ 40 ಅರ್ಧಶತಕ ಸಿಡಿಸಿದ್ದಾರೆ. 115 ರನ್ ವೈಯುಕ್ತಿ ಗರಿಷ್ಠ ಸ್ಕೋರ್. ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ 130ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.   

IPL 2021: ಆರ್‌ಸಿಬಿ ಕುರಿತಂತೆ ಮುತ್ತಿನಂಥ ಮಾತನಾಡಿದ ಕಿಂಗ್‌ ಕೊಹ್ಲಿ..!  

ಈ ಪಂದ್ಯದಲ್ಲಿ ಕೊಹ್ಲಿ ಗರಿಷ್ಠ ಪಂದ್ಯ ಆಡಿದ ಸಾಧನೆ ಮಾಡಿದ್ದಾರೆ. ಆದರೆ ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ್ದಾರೆ.  ಕೇವಲ 5 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಕೊಹ್ಲಿ ಮಾತ್ರವಲ್ಲ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಾ ಬ್ಯಾಟ್ಸ್‌ಮನ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.  ಕೆಕೆಆರ್ ವಿರುದ್ಧ ಆರ್‌ಸಿಬಿ ಕೇವಲ 92 ರನ್ ಸಿಡಿಸಿ ಆಲೌಟ್ ಆಗಿದೆ. 

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಪಂದ್ಯ ಆಡಿರುವ ಕೊಹ್ಲಿ ಟೀಂ ಇಂಡಿಯಾ ಪರ ಹಲವು ದಾಖಲೆ ಬರೆದಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಕೊಹ್ಲಿ 96 ಪಂದ್ಯ ಆಡಿದ್ದಾರೆ. ಈ ಮೂಲಕ 7,765 ರನ್ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 27 ಸೆಂಚುರಿ, 5 ಡಬಲ್ ಸೆಂಚುರಿ ಹಾಗೂ 27 ಅರ್ಧಶತಕ ಸಿಡಿಸಿದ್ದಾರೆ.

254 ಏಕದಿನ ಪಂದ್ಯದಿಂದ 12,169 ರನ್ ಸಿಡಿಸಿದ್ದಾರೆ. 183 ಗರಿಷ್ಠ ಸ್ಕೋರ್. 43 ಸೆಂಚುರಿ, 62 ಹಾಫ್ ಸೆಂಚುರಿ ಸಿಡಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 89 ಪಂದ್ಯ ಆಡಿದ್ದಾರೆ. ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ 3,159 ರನ್ ಸಿಡಿಸಿದ್ದಾರೆ. ಟಿ20ಯಲ್ಲಿ 28 ಹಾಫ್ ಸೆಂಚುರಿ ದಾಖಲಿಸಿದ್ದಾರೆ.

 

Follow Us:
Download App:
  • android
  • ios