IPL 2021 ಮುಂಬೈ ಎದುರು ಚೆನ್ನೈ ದಿಗ್ವಿಜಯವನ್ನು ಕೊಂಡಾಡಿದ ಕ್ರಿಕೆಟ್ ಪಂಡಿತರು..!
ದುಬೈ : ಯುಎಇ ಚರಣದ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಒಂದು ಹಂತದಲ್ಲಿ 24 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕ್ವಾಡ್ ಬಾರಿಸಿದ ಕೆಚ್ಚೆದೆಯ 156 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮುಂಬೈ 136 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ತಂಡದ ಗೆಲುವನ್ನು ಕ್ರಿಕೆಟ್ ಪಂಡಿತರು ಶ್ಲಾಘಿಸಿದ್ದಾರೆ
Ruturaj Gaikwad
ಇದು ಚೆನ್ನೈ ಪಾಲಿಗೆ ಅತ್ಯಂತ ಸ್ಮರಣೀಯ ಗೆಲುವಾಗಿದೆ. ಎಂತಹ ಕಮ್‌ಬ್ಯಾಕ್. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಟೀಂ ಇಂಡಿಯಾ ಮೆಂಟರ್ ಆಗಿ ಕಾರ್ಯ ನಿರ್ವಹಿಸುವುದನ್ನು ಕಣ್ತುಂಬಿಕೊಳ್ಳಲು ಕಾತುರನಾಗಿದ್ದೇನೆ. ಇಂದು ತೋರಿದ ತಂತ್ರಗಾರಿಕೆನ್ನು ಅಲ್ಲೂ ತೋರಿದರೆ, 2007ರ ಇತಿಹಾಸ ಅಕ್ಟೋಬರ್‌ನಲ್ಲಿ ಮರುಕಳಿಸಲಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಟ್ವೀಟ್ ಮಾಡಿದ್ದಾರೆ.
Ruturaj Gaikwad
24/4ರಿಂದ ಗೆಲುವಿನವರೆಗೆ. 2020ರ ಐಪಿಎಲ್‌ನಲ್ಲಿ 7ನೇ ಸ್ಥಾನದಲ್ಲಿದ್ದ ತಂಡವೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. CSK ತಂಡದಲ್ಲಿ C ಅರ್ಥವೇ ಕಮ್‌ಬ್ಯಾಕ್. ಇದೊಂದು ಅದ್ಭುತ ಗೆಲುವು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಬಣ್ಣಿಸಿದ್ದಾರೆ.
ಉತ್ತಮವಾಗಿ ಆಡಿದೆ ಋತುರಾಜ್ ಗಾಯಕ್ವಾಡ್, ಸೂಪರ್ ಇನಿಂಗ್ಸ್ ಮಚ್ಚಾ ಎಂದು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಪ್ರದರ್ಶನವನ್ನು ಕೊಂಡಾಡಿದ್ದಾರೆ.
Ruturaj Gaikwad
ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡರೂ, ಅನುಭವಿ ಆಟಗಾರರನ್ನೊಳಗೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿತು. ಮುಂಬೈ ತಂಡವು ಇನಿಂಗ್ಸ್ ಮಧ್ಯದಲ್ಲಿ ಆಕ್ರಮಣಕಾರಿ ಬೌಲರ್‌ಗಳ ಕೊರತೆಯನ್ನು ಎದುರಿಸಿತು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ವಿಶ್ಲೇಷಣೆ ಮಾಡಿದ್ದಾರೆ.
Ruturaj Gaikwad