ರಾಜಸ್ಥಾನ Vs ಪಂಜಾಬ್: ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಸೆಣಸಾಟ!
* ಇಂದು ರಾಜಸ್ಥಾನ-ಪಂಜಾಬ್ ಮುಖಾಮುಖಿ
* ಗೇಲ್, ರಾಹುಲ್ vs ಸ್ಯಾಮ್ಸನ್, ಲೆವಿಸ್
* ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಸೆಣಸಾಟ
ದುಬೈ(ಸೆ.21): ಐಪಿಎಲ್‌ನಲ್ಲಿ ನೇರಾನೇರ ಪೈಪೋಟಿ ನಡೆಯುತ್ತಲೇ ಇರುತ್ತವೆ. ಅಂತಹ ಪೈಪೋಟಿಗೆ ಮಂಗಳವಾರದ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಪಂದ್ಯ ಸಾಕ್ಷಿಯಾಗಲಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ಗಳ ನಡುವೆ ಏರ್ಪಡುವ ಪೈಪೋಟಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
ರಾಜಸ್ಥಾನ ತಂಡದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್, ಎವಿನ್ ಲೆವಿಸ್, ಸಂಜು ಸ್ಯಾಮ್ಸನ್‌ರಂತಹ ಟಿ20 ತಜ್ಞ ಬ್ಯಾಟ್ಸ್‌ಮನ್‌ಗಳಿದ್ದರೆ, ಪಂಜಾಬ್ ತಂಡದಲ್ಲಿ ಟಿ20 ಕಿಂಗ್ ಕ್ರಿಸ್ ಗೇಲ್, ಕೆ.ಎಲ್.ರಾಹುಲ್, ಮಯಾಂಕ್ ಅಗರ್‌ವಾಲ್ ಇದ್ದಾರೆ. ಈ ತಾರಾ ಆಟಗಾರರ ಜೊತೆಗೆ ಎರಡೂ ತಂಡಗಳಲ್ಲಿ ಇನ್ನೂ ಹಲವು ಟಿ20 ತಜ್ಞ ಆಟಗಾರರಿದ್ದು, ಭರ್ಜರಿ ಪೈಪೋಟಿ ನಿರೀಕ್ಷೆ ಮಾಡಬಹುದಾಗಿದೆ.
ಎರಡೂ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ರಾಜಸ್ಥಾನ, ಪ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ಕನಿಷ್ಠ 4 ಪಂದ್ಯ ಗೆಲ್ಲಬೇಕಿದೆ. ಮತ್ತೊಂದೆಡೆ ಪಂಜಾಬ್ ಬಾಕಿ ಇರುವ 6 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆಲ್ಲಲೇಬೇಕಿದೆ.
ಒಟ್ಟು ಮುಖಾಮುಖಿ: 22
ರಾಜಸ್ಥಾನ: 12
ಪಂಜಾಬ್: 10
ಸಂಭವನೀಯ ಆಟಗಾರರ ಪಟ್ಟಿ
ರಾಜಸ್ಥಾನ: ಲಿವಿಂಗ್‌ಸ್ಟೋನ್, ಲೆವೆಸ್, ಸ್ಯಾಮ್ಸನ್(ನಾಯಕ), ವೋಹ್ರಾ, ದುಬೆ, ತೆವಾಟಿಯಾ, ಮೋರಿಸ್, ಶ್ರೇಯಸ್, ಉನಾದ್ಕತ್, ಮುಸ್ತಾಫಿಜುರ್/ಶಮ್ಸಿ, ಸಕಾರಿಯಾ.
ಪಂಜಾಬ್: ರಾಹುಲ್(ನಾಯಕ), ಮಯಾಂಕ್, ಗೇಲ್, ಪೂರನ್, ಹೂಡಾ, ಶಾರುಖ್ ಖಾನ್, ಜೋರ್ಡನ್, ಆದಿಲ್ ರಶೀದ್, ಶಮಿ, ಬಿಷ್ಣೋಯ್, ಅಶ್‌ರ್‍ದೀಪ್.
ಸ್ಥಳ: ದುಬೈ, ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್‌ರ್
ಪಿಚ್ ರಿಪೋರ್ಟ್
ದುಬೈ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡುವ ತಂಡ 150ಕ್ಕಿಂತ ಹೆಚ್ಚು ರನ್ ಗಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುವುದು ಚೆನ್ನೈ-ಮುಂಬೈ ಪಂದ್ಯದಲ್ಲಿ ಕಂಡುಬಂತು. ಪಂದ್ಯ ಸಾಗಿದಂತೆ ಪಿಚ್ ವೇಗ ಕಳೆದುಕೊಳ್ಳಲಿದೆ. ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆ ಇದೆ