IPL 2021: ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಮುಂಬೈ, SRHಗೆ ಮನೀಶ್ ಪಾಂಡೆ ನಾಯಕ!
- ಪ್ಲೇ ಆಫ್ ಪ್ರವೇಶಕ್ಕಾಗಿ ಮುಂಬೈ ಇಂಡಿಯನ್ಸ್ ಕಸರತ್ತು
- ಹೈದರಾಬಾದ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ
- ಪ್ಲೈಆಫ್ ಎಂಟ್ರಿಗಾಗಿ ಮುಂಬೈ ಇಂಡಿಯನ್ಸ್ ಕೊನೆಯ ಪ್ರಯತ್ನ
ಅಬು ಧಾಬಿ(ಅ.08): IPL 2021ರ ಟೂರ್ನಿ ಲೀಗ್ ಹಂತದ ಪಂದ್ಯ ಇವತ್ತು ಕೊನೆಯಾಗಲಿದೆ. 55ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai indians) ಹಾಗೂ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ತಂಡ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್(Toss) ಗೆದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಹೃದಯ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7 ಕ್ರಿಕೆಟ್ ಕಳ್ಳರು!
ಸನ್‌ರೈಸರ್ಸ್ ತಂಡಕ್ಕೆ ಕನ್ನಡಗಿ ಮನೀಶ್ ಪಾಂಡೆ ನಾಯಕನಾಗಿದ್ದಾರೆ. ಕೇನ್ ವಿಲಿಯಮ್ಸನ್ ಬದಲು ಇಂದು ಪಾಂಡೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತ ಮುಂಬೈ ಇಂಡಿಯನ್ಸ್ ತಂಡದಲ್ಲಿ 2 ಬದಲಾವಣೆ ಮಾಡಿದೆ.
ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಪ್ರವೇಶದ ಆಸೆ ಜೀವಂತವಾಗಿದ್ದರೂ, ಸಾಧ್ಯತೆ ಬಹಳ ಕಡಿಮೆ. ಕಾರಣ ಸನ್‌ರೈಸರ್ಸ್ ವಿರುದ್ಧ ಕೇವಲ ಗೆಲುವಲ್ಲ, ಭಾರಿ ಅಂತರದ ಗೆಲುವು ಬೇಕಿದೆ. ಈ ಅಂತರ ಬಹುತೇಕ ಕಷ್ಟ. ಇತ್ತ ಪ್ಲೇ ಆಫ್ ಸುತ್ತಿನ ಹೋರಾಟದಿಂದ ಹೊರಬಿದ್ದ ಮೊದಲ ತಂಡ ಸನ್‌ರೈಸರ್ಸ್ ಹೈದರಾಬಾದ್. ಹೀಗಾಗಿ ಹೈದರಾಬಾದ್ ತಂಡ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಹೋರಾಟ ನಡೆಸಲಿದೆ.
IPL 2021 - ಗ್ಲಾಮರ್ ಹರಡುತ್ತಿರುವ ಯುಜ್ವೇಂದ್ರ ಚಾಹಲ್ ಪತ್ನಿ!
ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ 6ನೇ ಸ್ಥಾನದಲ್ಲಿದೆ. 13 ಪಂದ್ಯಗಳಿಂದ 6 ಗೆಲುವು ಹಾಗೂ 7 ಸೋಲಿನ ಮೂಲಕ 12 ಅಂಕ ಸಂಪಾದಿಸಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿದರೆ 14 ಅಂಕಗಳಾಗಲಿದೆ. ಸದ್ಯ 4ನೇ ಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ 14 ಅಂಕ ಸಂಪಾದಿಸಿದೆ. ಆದರೆ ಕೆಕೆಆರ್ ನೆಟ್‌ರನ್ ರೇಟ್ +0.587.
ಮುಂಬೈ ಇಂಡಿಯನ್ಸ್ ನೆಟ್‌ರನ್ ರೇಟ್ -0.048. ಹೀಗಾಗಿ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿದರೂ ಕೆಕೆಆರ್ ರನ್‌ರೇಟ್ ಹಿಂದಿಕ್ಕಿವುದು ಕಷ್ಟವಾಗಿದೆ. ಮ್ಯಾಜಿಕ್ ನಡೆದರೆ ಮಾತ್ರ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಸ್ಥಾನಕ್ಕೆ ಎಂಟ್ರಿಕೊಡಲಿದೆ.
ಚಕ್ ದೇ ಹುಡುಗಿಗೆ ಬೌಲ್ಡ್ ಆದ ಈ ಫೇಮಸ್ ಬೌಲರ್!
ಮುಂಬೈ ಇಂಡಿಯನ್ಸ್ ಕನಿಷ್ಠ 171 ರನ್‌ಗಳ ಗೆಲುವು ದಾಖಲಿಸಿದರೆ ಕೆಕೆಆರ್ ನೆಟ್‌ರನ್ ರೇಟ್ ಹಿಂದಿಕ್ಕಲಿದೆ. ಆದರೆ ಈ ಅಂತರದ ಗೆಲುವು ಟಿ20 ಕ್ರಿಕೆಟ್‌ನಲ್ಲಿ ಅಸಾಧ್ಯವಾಗಿದೆ. ಹೀಗಾಗಿ ಪ್ಲೇ ಆಫ್ ಸುತ್ತಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಹೋರಾಟ ಮಾಡಲಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂದು ಪಂದ್ಯ ಗೆದ್ದರೂ, ಸೋತರು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಳ್ಳಲಿದೆ. 13 ಪಂದ್ಯಗಳಿಂದ ಹೈದರಾಬಾದ್ ತಂಡ ಕೇವಲ 3 ಗೆಲುವು ಹಾಗೂ 10 ಸೋಲು ಕಂಡಿದೆ. ಹೀಗಾಗಿ 6 ಅಂಕ ಸಂಪಾದಿಸಿರುವ ಹೈದರಾಬಾದ್‌ಗೆ ಇಂದಿನ ಪಂದ್ಯದ ಫಲಿತಾಂಶದಿಂದ ಸ್ಥಾನದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಆದರೆ ಒಂದು ಗೆಲುವು ಹೈದರಾಬಾದ್ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಲಿದೆ.
IPL 2021: ಪ್ಲೇ ಆಫ್‌ಗೂ ಮುನ್ನ KKR ತಂಡಕ್ಕೆ ಸಿಕ್ತು ಗುಡ್ ನ್ಯೂಸ್..!
ಐಪಿಎಲ್ ಟೂರ್ನಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಎರಡು ಪಂದ್ಯಗಳು ಆಯೋಜನೆ ಮಾಡಲಾಗಿದೆ. ಮತ್ತೊಂದು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ.