MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಹೃದಯ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7 ಕ್ರಿಕೆಟ್ ಕಳ್ಳರು!

ಹೃದಯ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7 ಕ್ರಿಕೆಟ್ ಕಳ್ಳರು!

ಭಾರತೀಯ ಕ್ರಿಕೆಟ್ ತಂಡದ ಆಟಗಾರರು ತಮ್ಮ ಕ್ರೀಡೆಗಳಿಗೆ ಎಷ್ಟು ಪ್ರಸಿದ್ಧರಾಗಿದ್ದಾರೋ, ಅವರು ತಮ್ಮ ಲವ್‌ಲೈಫ್‌ಗೂ ಫೇಮಸ್‌ ಆಗಿದ್ದಾರೆ.  ಪ್ರಸ್ತುತ ದುಬೈನಲ್ಲಿ ನೆಡೆಯುತ್ತಿರುವ IPLನಲ್ಲಿ ಒಬ್ಬ ಆಟಗಾರನ love story ಇಡೀ ಪ್ರಪಂಚದ ಎದುರು ಬಹಿರಂಗಗೊಂಡಿದೆ. IPL-2021 ರಲ್ಲಿ ಪಂದ್ಯವನ್ನು ಸೋತ ನಂತರವೂ, CSK ಆಟಗಾರ ದೀಪಕ್ ಚಹಾರ್ (Deepak Chahar) ತಮ್ಮ ಗರರ್ಲ್‌ಫ್ರೆಂಡ್‌ (Girl Friend)ಗೆ ಫಿಲ್ಮಿ ಸ್ಟೈಲ್‌ನಲ್ಲಿ (Filmy Style)  ಮಂಡಿಯೂರಿ ಮದುವೆ ಪ್ರಪೋಸ್ ಮಾಡಿದ್ದಾರೆ. ಜಯಾ (Jaya Bhardwaj) ಕೂಡ ತಕ್ಷಣವೇ ಪ್ರಪೋಸಲ್ ಅನ್ನು ಒಪ್ಪಿಕೊಂಡರು. ದೀಪಕ್ ಹೊರತಾಗಿ, ಈ ರೀತಿ ವಿಶಿಷ್ಟ ಶೈಲಿಯಲ್ಲಿ ಪ್ರಸ್ತಾಪಿಸಿದ ಇನ್ನೂ ಅನೇಕ  ಕ್ರಿಕೆಟರ್ಸ್ ಇದ್ದಾರೆ. ಅವರಾರು? ಮಾಹಿತಿಗಾಗಿ ಕೆಳಗೆ ಓದಿ.

2 Min read
Suvarna News | Asianet News
Published : Oct 08 2021, 06:29 PM IST
Share this Photo Gallery
  • FB
  • TW
  • Linkdin
  • Whatsapp
17

ಹಾರ್ದಿಕ್‌ ಪಾಂಡ್ಯ-ನತಾಶಾ:
ಕಳೆದ ವರ್ಷ ಲಾಕ್‌ಡೌನ್ (Lockdown) ಸಮಯದಲ್ಲಿ  ಹಾರ್ದಿಕ್  (Hardik Pandya) ಮತ್ತು ನತಾಶಾ ಸರಳ ರೀತಿಯಲ್ಲಿ ಮದುವೆಯಾಗಿದ್ದರು. ಆದರೆ ಹಾರ್ದಿಕ್ ಪಾಂಡ್ಯ ತನ್ನ ಗೆಳತಿ ನತಾಶಾ ಸ್ಟ್ಯಾಂಕೋವಿಕ್‌ ಅವರಿಗೆ  2020 ರ ಜನವರಿಯಲ್ಲಿ  ದುಬಾರಿ ಹಡಗನಲ್ಲಿ ದುಬೈಗೆ ಕೆರದುಕೊಂಡು ಹೋಗಿ, ಪ್ರಪೋಸ್ (Propose) ಮಾಡಿದರು. 

27

ರೋಹಿತ್ ಶರ್ಮಾ - ರಿತಿಕಾ ಸಜದೇಹ್:
ರೋಹಿತ್ ಶರ್ಮಾ  (Rohith Sharma)ಮತ್ತು ರಿತಿಕಾ ಸಜ್ದೆ  15 ಡಿಸೆಂಬರ್ 2015 ರಂದು ವಿವಾಹವಾದರು. ಆದರೆ ರೋಹಿತ್ ಅವರ ಪ್ರಪೋಸಲ್‌ ಸ್ಟೈಲ್‌ ವಿಭಿನ್ನವಾಗಿತ್ತು. ಅವನು ತನ್ನ ಗರ್ಲ್‌ಫ್ರೆಂಡ್‌ ರಿತಿಕಾರನ್ನು ತಾನು ಕ್ರಿಕೆಟ್ (Cricket) ಆಡಲು ಕಲಿತ ಮೈದಾನದಲ್ಲೇ ಪ್ರಪೋಸ್‌ ಮಾಡಿದ್ದರು.

37

ಎಂಎಸ್ ಧೋನಿ - ಸಾಕ್ಷಿ:
ಎಂಎಸ್ ಧೋನಿ, ತಮ್ಮ ಪತ್ನಿ (Wife) ಸಾಕ್ಷಿ (Sakshi) ಅವರಿಗೆ ಫೋನಿನಲ್ಲಿ ತುಂಬಾ ಸಿಂಪಲ್‌ ಪದಗಳಲ್ಲಿ ಪ್ರಪೋಸ್‌ ಮಾಡಿದ್ದರು. ನನ್ನ ಜೀವನವು ಕ್ರಿಕೆಟ್ ಕಿಟ್‌ನಷ್ಟು ಚಿಕ್ಕದಾಗಿದೆ ಎಂದು ಹೇಳಿದರು.  ಧೋನಿ ಐ ಲವ್‌ ಯೂ (I Love You) ಎಂದು ಹೇಳದೆ ಮದುವೆಯಾಗಿದ್ದಾಗೆ ಹೇಳಿ ಕೊಂಡಿದ್ದರು.

47

ದೀಪಕ್ ಚಹರ್ - ಜಯಾ ಭಾರದ್ವಾಜ್:
ಸಿಎಸ್‌ಕೆ (Chennai Super Kinds) ಆಟಗಾರ ದೀಪಕ್ ಚಹರ್  ಇಡೀ ಪ್ರಪಂಚದ ಮುಂದೆ ತನ್ನ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್‌ ಮಾಡಿದರು. ಐಪಿಎಲ್ 2021 ರಲ್ಲಿ ನೆಡೆದ ರೋಮ್ಯಾಂಟಿಕ್  ಪ್ರಪೋಸಲ್‌ (Romantic Proposal) ಸಕ್ಕತ್‌  ವೈರಲ್‌ ಆಗಿದೆ. ಇದನ್ನು ನೋಡಿದ ಜಯಾ ಭಾರದ್ವಾಜ್‌ ಸಂತೋಷಕ್ಕೆ ಮಿತಿಯಿಲ್ಲ ಮತ್ತು ಉಂಗುರವನ್ನು (Ring) ಧರಿಸಿದ ನಂತರ ಅವಳು ದೀಪಕ್ ಅವರನ್ನು ಹಗ್‌ (Hug) ಮಾಡಿದರು.

57

ಸಚಿನ್ ತೆಂಡೂಲ್ಕರ್ - ಅಂಜಲಿ:
ಸಚಿನ್ ತೆಂಡೂಲ್ಕರ್ (Sachin Tendulkar) ತಮ್ಮ ಪತ್ನಿಗೆ ಪ್ರಪೋಸ್ ಮಾಡಲಿಲ್ಲ. ಆದರೆ ಅಂಜಲಿ ಅವರೇ ಪ್ರಪೋಸ್ ಮಾಡಿದರು. ಸಚಿನ್ ತುಂಬಾ ನಾಚಿಕೆ (Shy) ಸ್ವಭಾವದವರು. ಇಂತಹ ಪರಿಸ್ಥಿತಿಯಲ್ಲಿ, ಅಂಜಲಿ ಸ್ವತಃ ತಮ್ಮ ಮದುವೆ ಪ್ರಪೋಸಲ್‌ (Wedding proposal)ನೊಂದಿಗೆ ಸಚಿನ್ ಮನೆಗೆ ಹೋಗಿದ್ದರು.

67

ಹರ್ಭಜನ್ ಸಿಂಗ್ - ಗೀತಾ ಬಸ್ರಾ:
ಐಪಿಎಲ್ ಸಮಯದಲ್ಲಿ ಅನೇಕ ಆಟಗಾರರು ಸಂಬಂಧಗಳನ್ನು ರೂಪಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh). ಐಪಿಎಲ್ 2014 ರಲ್ಲಿ ಭಜ್ಜಿ ಪಾಜಿ ಗೀತಾ ಬಸ್ರಾ (Geetha Basra) ಅವರಿಗೆ ಪ್ರಪೋಸ್‌ ಮಾಡಿದ್ದರು. ಆ ಸಮಯದಲ್ಲಿ ಗೀತಾ ಬಸ್ರಾ ರಿಲೆಷನ್‌ಶಿಪ್‌ನಲ್ಲಿ (Relationship) ಇರಲು ಬಯಸುವುದಿಲ್ಲ ಎಂದು ಹೇಳಿದ್ದರು. ನಂತರ 11 ತಿಂಗಳು ಕಾಯಿಸಿ, ಅವರು ಮದುವೆಗೆ ಒಪ್ಪಿಕೊಂಡರು.
 

77

ಮಯಾಂಕ್ ಅಗರ್ವಾಲ್ - ಆಶಿತಾ ಸೂದ್:
ದೀಪಕ್ ನಂತೆ, ಮಯಾಂಕ್ ಅಗರ್ವಾಲ್ (Mayank Agarwal) ಕೂಡ ತನ್ನ ಗರ್ಲ್‌ಫ್ರೆಂಡ್‌ಗೆ ಫಿಲ್ಮಿ ಶೈಲಿಯಲ್ಲಿ ಪ್ರಪೋಸ್ ಮಾಡಿದರು. ಅವರು ಲಂಡನ್‌ನ (London) ಥೇಮ್ಸ್ (Thames) ನದಿಯ ದಡದಲ್ಲಿ  ಪ್ರಪೋಸ್‌ ಮಾಡಿದ್ದರು ಮತ್ತು ಅವರ ಈ ರೋಮ್ಯಾಂಟಿಕ್ ಶೈಲಿಯನ್ನು ನೋಡಿ, ಆಶಿತಾ ಸೂದ್ ಕೂಡ ಮದುವೆಗೆ ಒಪ್ಪಿಕೊಂಡರು.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved