ಪಾಂಡ್ಯ ಕುಟುಂಬದಿಂದ 200 ಆಕ್ಸಿಜನ್ ಕಾನ್ಸಟ್ರೇಟರ್ಸ್; ನೆರವು ಘೋಷಿಸಿದ ಹಾರ್ದಿಕ್
ಭಾರತದ ಕೊರೋನಾ ಸಂಕಷ್ಟಕ್ಕೆ ಕ್ರಿಕೆಟಿಗರು ನೆರವು ನೀಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ, ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಪ್ಲೇಯರ್ ಹಾರ್ದಿಕ್ ಪಾಂಡ್ಯ 200 ಆಕ್ಸಿಜನ್ ಕಾನ್ಸಟ್ರೇಟರ್ಸ್ ಘೋಷಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ
ದೆಹಲಿ(ಮೇ.01): ಭಾರತ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಅಷ್ಟರ ಮಟ್ಟಿಗೆ 2ನೇ ಕೊರೋನಾ ಅಲೆ ಭಾರತವನ್ನು ಕಂಗೆಡಿಸಿದೆ. ದೇಶದ ಮೂಲೆ ಮೂಲೆಗಳಿಂದ ನೆರವಿನ ಕೂಗು ಕೇಳಿಬರುತ್ತಿದೆ. ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯಗಳೇ ಕಣ್ಣೆದುರಿಗೆ ಬಂದು ನಿಲ್ಲುತ್ತಿದೆ. ಈ ಸಂಕಷ್ಟ ಸಮಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ, ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೆರವು ಘೋಷಿಸಿದ್ದಾರೆ.
ಕೋವಿಡ್ ಹೋರಾಟಕ್ಕೆ ಕೈಜೋಡಿಸಿದ ಪೂರನ್, ಉನಾದ್ಕತ್, ಧವನ್
ಹಾರ್ದಿಕ್ ಪಾಂಡ್ಯ, ಸಹೋದರ ಕ್ರುನಾಲ್ ಪಾಂಡ್ಯ, ತಾಯಿ ಸೇರಿದಂತೆ ಪಾಂಡ್ಯ ಬ್ರದರ್ಸ್ ಕುಟುಂಬದಿಂದ 200 ಆಕ್ಸಿಜನ್ ಕಾನ್ಸಟ್ರೇಟರ್ಸ್ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಿಸುತ್ತಿರುವ ಮಂದಿಗೆ ನೆರವಾಗಲು ನಿರ್ಧರಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿ ಲೀಗ್ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಈ ಘೋಷಣೆ ಮಾಡಿದ್ದಾರೆ. ಕುಟುಂಬದಿಂದ 200 ಆಕ್ಸಿಜನ್ ಕಾನ್ಸಟ್ರೇಟರ್ಸ್ ನೀಡುತ್ತಿದ್ದೇವೆ, ವೈದ್ಯಕೀಯ ಅಗತ್ಯ ಇರುವ ಗ್ರಾಮೀಣ ಭಾಗಕ್ಕೆ ಈ ಆಕ್ಸಿಜನ್ ಕಾನ್ಸಟ್ರೇಟರ್ಸ್ ನೀಡಲಿದ್ದೇವೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಕೊರೋನಾ ನರಕ ದರ್ಶನ ಮಾಡಿಸಿದ ಅಶ್ವಿನ್ ಪತ್ನಿ ಪ್ರೀತಿ
ದೇಶ ವಿದೇಶಗಳಿಂದ ಕೇಂದ್ರ ಸರ್ಕಾರ ಆಕ್ಸಿಜನ್ ತರಿಸಿಕೊಂಡು ತುರ್ತ ಅಗತ್ಯಕ್ಕೆ ಪೂರೈಕೆ ಮಾಡುತ್ತಿದೆ. ಆದರೂ ಆಕ್ಸಿಜನ್ ಕೊರತೆ ನೀಗಿಲ್ಲ. ಇನ್ನು ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿರುವ ಕಾರಣ ಆತಂಕ ಪರಿಸ್ಥಿತಿ ಎದುರಾಗಿದೆ . ಕಳೆದ 24 ಗಂಟೆಯಲ್ಲಿ ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಕೊರೋನಾ ಹೊಸ ಪ್ರಕರಣಗಳು ದಾಖಲಾಗಿದೆ.