ಒಂದೇ ವಾರದಲ್ಲಿ ತಮ್ಮ ಕುಟುಂಬದ 10 ಮಂದಿಗೆ ಕೋವಿಡ್ ದೃಢಪಟ್ಟ ಆ ಭೀಕರ ಕ್ಷಣವನ್ನು ರವಿಚಂದ್ರನ್ ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್ ಟ್ವೀಟ್ ಮೂಲಕ ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

ಚೆನ್ನೈ(ಮೇ.01): ಟೀಂ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್‌ ಕುಟುಂಬ ಕೋವಿಡ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು, ಒಂದು ವಾರದ ಅವಧಿಯಲ್ಲಿ ಅಶ್ವಿನ್‌ ಕುಟುಂಬದ 10 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಆ ಭೀಕರ ಕ್ಷಣಗಳನ್ನು ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್‌ ಬಿಚ್ಚಿಟ್ಟಿದ್ದಾರೆ.

ಕೋವಿಡ್ 19 ಎರಡನೇ ಅಲೆ ಭಾರತವನ್ನು ಬೆಚ್ಚಿಬೀಳಿಸಿದೆ. ಕಳೆದೊಂದು ವಾರದಲ್ಲಿ ಭಾರತದಲ್ಲಿ ಪ್ರತಿನಿತ್ಯ 3 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕೋವಿಡ್ 19 ಬಿಸಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೂ ತಟ್ಟಿದೆ. ಕೆಲ ದಿನಗಳ ಹಿಂದಷ್ಟೇ ಡೆಲ್ಲಿ ಕ್ಯಾಪಿಟಲ್ಸ್‌ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಿಢೀರ್ ಎನ್ನುವಂತೆ ಐಪಿಎಲ್‌ನಿಂದ ಹಿಂದೆ ಸರಿದಿದ್ದರು.

ಕುಟುಂಬ ಸದಸ್ಯರಿಗೆ ಕೊರೋನಾ: IPLನಿಂದ ಹೊರ ಬಂದ ಅಶ್ವಿನ್

ಇದೀಗ ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್ ಸರಣಿ ಟ್ವೀಟ್‌ಗಳ ಮೂಲಕ ಕಳೆದೊಂದು ವಾರದಲ್ಲಿ ತಮ್ಮ ಕುಟುಂಬ ಅನುಭವಿಸಿದ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಂದೇ ವಾರದಲ್ಲಿ 6 ವಯಸ್ಕರು ಹಾಗೂ 4 ಮಕ್ಕಳಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಎಲ್ಲರೂ ವಿವಿಧ ನಗರಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದಷ್ಟು ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಿ. ಇದೊಂದೆ ಕೋವಿಡ್ ವಿರುದ್ದ ಹೋರಾಡುವ ಅಸ್ತ್ರ ಎಂದು ಪ್ರೀತಿ ಕರೆಕೊಟ್ಟಿದ್ದಾರೆ.

Scroll to load tweet…

ನನಗನಿಸುತ್ತೆ, ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ. ಕಳೆದ 5 ರಿಂದ 8 ದಿನಗಳು ನನ್ನ ಪಾಲಿಗೆ ಅತ್ಯಂತ ಕ್ಲಿಷ್ಟಕರವಾಗಿತ್ತು. ಎಲ್ಲರೂ ಇದ್ದೂ, ಎಲ್ಲಾ ರೀತಿಯ ಸಹಾಯ ಮಾಡಿದರೂ, ಯಾರೊಬ್ಬರು ಜತೆಗಿರಲಿಲ್ಲ. ಇದೊಂದು ಅತ್ಯಂತ ಕೆಟ್ಟ ಐಸೋಲೆಷನ್‌ ರೋಗ ಎಂದು ಪ್ರೀತಿ ಟ್ವೀಟ್ ಮಾಡಿದ್ದಾರೆ.

Scroll to load tweet…

ರವಿಚಂದ್ರನ್ ಅಶ್ವಿನ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೇವಲ 5 ಪಂದ್ಯವನ್ನಾಡಿದ್ದರು. ಇದಾದ ಬಳಿಕ ತಮ್ಮ ಕುಟುಂಬಸ್ಥರಿಗೆ ಕೋವಿಡ್ 19 ವೈರಸ್ ತಗುಲಿರುವ ವಿಚಾರ ತಿಳಿಯುತ್ತಿದ್ದಂಯೇ ಬಯೋ ಬಬಲ್ ತೊರೆದು ಮನಗೆ ವಾಪಾಸಾಗಿದ್ದರು

Scroll to load tweet…

2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅಶ್ವಿನ್ ಭಾರತ ಪರ 78 ಟೆಸ್ಟ್, 111 ಏಕದಿನ ಹಾಗೂ 46 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು 159 ಐಪಿಎಲ್ ಪಂದ್ಯಗಳನ್ನಾಡಿರುವ ಅನುಭವಿ ಆಫ್‌ಸ್ಪಿನ್ನರ್ 139 ವಿಕೆಟ್ ಕಬಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona