Asianet Suvarna News Asianet Suvarna News

ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ಹೈದರಾಬಾದ್‌ಗೆ ನಿರಾಸೆ

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ರೋಚಕ ಪಂದ್ಯ ಸೂಪರ್ ಓವರ್‌ನಲ್ಲಿ ಅಂತ್ಯವಾಗಿದೆ. ಸೂಪರ್ ಓವರ್‌ನಲ್ಲಿ ಸೂಪರ್ ಆಟವಾಡಿದ ಡೆಲ್ಲಿ ಪಂದ್ಯ ಗೆದ್ದುಕೊಂಡಿತು. 

IPL 2021 Delhi Capitals beat SRH in Super over ckm
Author
Bengaluru, First Published Apr 25, 2021, 11:47 PM IST

ಚೆನ್ನೈ(ಏ.25):   ಐಪಿಎಲ್ ಟೂರ್ನಿ ಮತ್ತೊಂದು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಸೂಪರ್ ಓವರ್ ಪಂದ್ಯ ಅಭಿಮಾನಿಗಳನ್ನು ರಂಜಿಸಿತು. ಈ ಹೋರಾಟದಲ್ಲಿ  ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ದಾಖಲಿಸಿದೆ. 

ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ; ಡೆಲ್ಲಿ vs ಹೈದರಾಬಾದ್ ಪಂದ್ಯ ಟೈ!.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಟೈ ಆದರ ಕಾರಣ ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೇನ್ ವಿಲಿಯಮ್ಸ್ ಸಿಡಿಸಿದ ಒಂದು ಬೌಂಡರಿ ನೆರವಿನಿಂದ ಒಟ್ಟು7 ರನ್ ಸಿಡಿಸಿತು.

ಡೆಲ್ಲಿ ಕ್ಯಾಪಿಟಲ್ಸ್  ಪರ ರಿಷಬ್ ಪಂತ್ ಹಾಗೂ ಶಿಖರ್ ಧವನ್ 8 ರನ್ ಟಾರ್ಗೆಟ್ ಬೆನ್ನಟ್ಟಲು ಕಣಕ್ಕಿಳಿದರು. ರಶೀದ್ ಖಾನ್ 3ನೇ ಎಸೆತವನ್ನು ಬೌಂಡರಿ ಸಿಡಿಸಿದ ಪಂತ್ ಡೆಲ್ಲಿ ಗೆಲುವಿನ ಹಾದಿ ಸುಗಮಗೊಳಿಸಿದರು. ಅಂತಿಮ 2 ರನ್ ಗಳಿಸಲು ಡೆಲ್ಲಿ ಪರದಾಡಿತು. ಆದರೂ ದೆಹಲಿ 8 ರನ್ ಪೂರೈಸಿ ಸೂಪರ್ ಓವರ್ ಮೂಲಕ ಪಂದ್ಯ ಗೆದ್ದುಕೊಂಡಿತು. 

Follow Us:
Download App:
  • android
  • ios