ಚೆನ್ನೈ(ನ.15): ನಿಷೇಧದ ಶಿಕ್ಷೆ ಮುಗಿಸಿ 2018ರಲ್ಲಿ ಐಪಿಎಲ್ ಟೂರ್ನಿಗೆ ವಾಪಾಸ್ಸಾದ ಚೆನ್ನೈ ಸೂಪರ್ ಕಿಂಗ್ಸ್, ಪ್ರಶಸ್ತಿ ಗೆದ್ದು ಇತಿಹಾಸ ರಚಿಸಿತ್ತು. 2019ರ ಐಪಿಎಲ್ ಆವೃತ್ತಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತು. ಇದೀಗ  ಕಳೆದ  ಬಾರಿ ಕೈತಪ್ಪಿದ ಚಾಂಪಿಯನ್‌ ಪಟ್ಟವನ್ನು ಬಾಚಿಕೊಳ್ಳಲು CSK ಮುಂದಾಗಿದೆ. ಇದಕ್ಕಾಗಿ ಬಲಿಷ್ಠ ತಂಡ ಕಟ್ಟಲು ಫ್ರಾಂಚೈಸಿ ನಿರ್ಧರಿಸಿದೆ. ಇದರ ಬೆನ್ನಲ್ಲೇ 6 ಆಟಗಾರರನ್ನು ಕೈಬಿಟ್ಟಿರುವ ಚೆನ್ನೈ, ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಲು ಮುಂದಾಗಿದೆ.

ಇದನ್ನೂ ಓದಿ: ಅರ್ಧಕ್ಕರ್ಧ ಆಟಗಾರರಿಗೆ ಗೇಟ್ ಪಾಸ್ ಕೊಟ್ಟ RCB..!.

ಮೋಹಿತ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್ ಸೇರಿದಂತೆ  ಚೆನ್ನೈ ಸೂಪರ್ ಕಿಂಗ್ಸ್ 6 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಎಂ.ಎಸ್.ಧೋನಿ ನಾಯಕತ್ವದ  ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದು, ಇದೀಗ ಮುಂಬೈ ಇಂಡಿಯನ್ಸ್ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟಲು ಪ್ಲಾನ್ ಹಾಕಿಕೊಂಡಿದೆ.

ಇದನ್ನೂ ಓದಿ: IPL 2020: ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ನ್ನೇ ಕೈಬಿಟ್ಟ ಮುಂಬೈ ಇಂಡಿಯನ್ಸ್!

ಚೆನ್ನೈ ಸೂಪರ್‌ಕಿಂಗ್ಸ್ ರಿಲೀಸ್ ಮಾಡಿದ ಆಟಗಾರರು:
1) ಮೋಹಿತ್ ಶರ್ಮಾ
2) ಧ್ರುವ್ ಶೊರೆ
3) ಸ್ಯಾಮ್ ಬಿಲ್ಲಿಂಗ್ಸ್
4) ಸ್ಕಾಟ್ ಕಗ್ಲಿಲಿಜಿನ್
5) ಡೇವಿಡ್ ವಿಲೆ
6) ಚೈತನ್ಯ ಬಿಶ್ನೋಯಿ