ಶತಕ ವೀರ ಶುಭ್‌ಮನ್ ಗಿಲ್‌ಗೆ ಗಾಯ: ಟೀಂ ಇಂಡಿಯಾ ಪಾಳಯದಲ್ಲಿ ಶುರವಾಯ್ತು ಆತಂಕ..!
ಭಾನುವಾರ ಫೀಲ್ಡಿಂಗ್ ವೇಳೆ ಗಿಲ್ ಕೈ ಬೆರಳಿಗೆ ಗಾಯವಾಗಿದೆ. ಹೀಗಾಗಿ ಅವರು ಸೋಮವಾರ ಮೈದಾನಕ್ಕೆ ಬರಲಿಲ್ಲ. ಅವರ ಬದಲು ಸರ್ಫರಾಜ್ ಖಾನ್ ಫೀಲ್ಡಿಂಗ್ ಮಾಡಿದರು. ಗಿಲ್ ಈಗಾಗಲೇ ಸ್ಕ್ಯಾನಿಂಗ್‌ಗೆ ಒಳಗಾಗಿದ್ದು, ಕೆಲ ದಿನಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಫೆ.15ರಿಂದ ಆರಂಭಗೊಳ್ಳಲಿರುವ 3ನೇ ಟೆಸ್ಟ್‌ಗೂ ಮುನ್ನ ಫಿಟ್ ಆಗುವ ನಿರೀಕ್ಷೆಯಿದೆ.
ವಿಶಾಖಪಟ್ಟಣಂ(ಫೆ.06): 2ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ ಭಾರತದ ತಾರಾ ಬ್ಯಾಟರ್ ಶುಭ್‌ಮನ್ ಗಿಲ್ ಗಾಯಗೊಂಡಿದ್ದಾರೆ. ಈಗಾಗಲೇ ಕೆಲ ಆಟಗಾರರು ಗಾಯದಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದು, ಈ ನಡುವೆ ಗಿಲ್ ಕೂಡಾ ಗಾಯಗೊಂಡಿದ್ದರಿಂದ ಭಾರತಕ್ಕೆ 3ನೇ ಟೆಸ್ಟ್ ಗೂ ಮುನ್ನ ಆತಂಕ ಶುರುವಾಗಿದೆ.
ಭಾನುವಾರ ಫೀಲ್ಡಿಂಗ್ ವೇಳೆ ಗಿಲ್ ಕೈ ಬೆರಳಿಗೆ ಗಾಯವಾಗಿದೆ. ಹೀಗಾಗಿ ಅವರು ಸೋಮವಾರ ಮೈದಾನಕ್ಕೆ ಬರಲಿಲ್ಲ. ಅವರ ಬದಲು ಸರ್ಫರಾಜ್ ಖಾನ್ ಫೀಲ್ಡಿಂಗ್ ಮಾಡಿದರು. ಗಿಲ್ ಈಗಾಗಲೇ ಸ್ಕ್ಯಾನಿಂಗ್‌ಗೆ ಒಳಗಾಗಿದ್ದು, ಕೆಲ ದಿನಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಫೆ.15ರಿಂದ ಆರಂಭಗೊಳ್ಳಲಿರುವ 3ನೇ ಟೆಸ್ಟ್‌ಗೂ ಮುನ್ನ ಫಿಟ್ ಆಗುವ ನಿರೀಕ್ಷೆಯಿದೆ.
ಟೆಸ್ಟ್ ಚಾಂಪಿಯನ್‌ಶಿಪ್: ಇಂಗ್ಲೆಂಡ್ ಎರಡನೇ ಸ್ಥಾನಕ್ಕೇರಿದ ಭಾರತ
ಧೋನಿಯನ್ನು ಹಿಂದಿಕ್ಕಿದ ರೋಹಿತ್
ಭಾರತದ ಪರ ಅತಿ ಹೆಚ್ಚು ಪಂದ್ಯ ಗೆದ್ದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರು ಎಂ.ಎಸ್.ಧೋನಿಯನ್ನು ಹಿಂದಿಕ್ಕಿದ್ದಾರೆ. ಧೋನಿ ಭಾರತ ಗೆದ್ದಿರುವ 295 ಪಂದ್ಯಗಳಲ್ಲಿ ತಂಡದ ಭಾಗವಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಗೆದ್ದ ಪಂದ್ಯ ರೋಹಿತ್ ಪಾಲಿಗೆ 296 ನೇ ಪಂದ್ಯ. ವಿರಾಟ್ ಕೊಹ್ಲಿ 313, ಸಚಿನ್ ತೆಂಡುಲ್ಕರ್ 307 ಪಂದ್ಯಗಳಲ್ಲಿ ಗೆದ್ದಿದ್ದಾರೆ.
ಚಂದ್ರಶೇಖರ್ ದಾಖಲೆ ಮುರಿದ ಆರ್.ಅಶ್ವಿನ್!
ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಭಾರತೀಯರ ಪಟ್ಟಿಯಲ್ಲಿ ಆರ್.ಅಶ್ವಿನ್ ಅಗ್ರಸ್ಥಾನಕ್ಕೇರಿದ್ದಾರೆ. 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದ ಅಶ್ವಿನ್, ವಿಕೆಟ್ ಗಳಿಕೆಯನ್ನು 97ಕ್ಕೆ ಏರಿಸಿದರು. ಲೆಗ್ ಸ್ಪಿನ್ನರ್ ಭಾಗವತ್ ಚಂದ್ರಶೇಖರ್ 95 ವಿಕೆಟ್ ಪಡೆದಿದ್ದರು. ಇನ್ನು, ಅನಿಲ್ ಕುಂಬ್ಳೆ 92, ಬಿಶನ್ ಸಿಂಗ್ ಬೇಡಿ ಹಾಗೂ ಕಪಿಲ್ ದೇವ್ ತಲಾ 85 ವಿಕೆಟ್ ಕಿತ್ತಿದ್ದಾರೆ.
ಮೊದಲ ಸೋಲಿಗೆ ಸೇಡು ತೀರಿಸಿದ ಭಾರತ, ವಿಶಾಖಪಟ್ಟಣ ಟೆಸ್ಟ್‌ನಲ್ಲಿ 106 ರನ್ ಭರ್ಜರಿ ಗೆಲುವು!
ವಿಶ್ರಾಂತಿಗಾಗಿ ಇಂಗ್ಲೆಂಡ್ ಆಟಗಾರರು ಅಬು ಧಾಬಿಗೆ
ವಿಶಾಖಪಟ್ಟಣಂ: ಭಾರತ ವಿರುದ್ಧ 3ನೇ ಟೆಸ್ಟ್ ಪಂದ್ಯ ಫೆ.15ಕ್ಕೆ ಆರಂಭಗೊಳ್ಳಲಿದ್ದು, ಇದಕ್ಕೂ ಮುನ್ನ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡ ವಿಶ್ರಾಂತಿಗಾಗಿ ಅಬುಧಾಬಿಗೆ ತೆರಳಲಿದೆ. ಆಟಗಾರರು ಫೆ.10ರ ವರೆಗೂ ಅಲ್ಲೇ ಇರಲಿದ್ದು, ಅಗತ್ಯ ವಿಶ್ರಾಂತಿ ಪಡೆಯಲಿದ್ದಾರೆ. ಭಾರತದ ವಿರುದ್ಧ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಆಟಗಾರರು ಅಬು ಧಾಬಿಯಲ್ಲೇ ಕೆಲ ದಿನಗಳ ಕಾಲ ಅಭ್ಯಾಸ ನಡೆಸಿದ್ದರು.
ಕಿಶನ್ ದೇಸಿ ಕ್ರಿಕೆಟ್ ಆಡಿದ್ರೆ ಮಾತ್ರ ರಾಷ್ಟ್ರೀಯ ತಂಡಕ್ಕೆ
ವಿಶಾಖಪಟ್ಟಣಂ: ಇಶಾನ್ ಕಿಶನ್ ಯಾವಾಗ ಕ್ರಿಕೆಟ್‌ಗೆ ಮರಳುತ್ತಾರೆಂದು ಅವರೇ ನಿರ್ಧರಿಸಬೇಕು. ಅವರು ದೇಸಿ ಕ್ರಿಕೆಟ್‌ನಲ್ಲಿ ಆಡಲು ಶುರು ಮಾಡಿದ ಬಳಿಕವೇ ರಾಷ್ಟ್ರೀಯ ತಂಡದ ಅಯ್ಕೆಗೆ ಪರಿಗಣಿಸುತ್ತೇವೆ ಎಂದು ಭಾರತದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಮಾತನಾಡಿರುವ ಅವರು, ಕಿಶನ್‌ರನ್ನು ಆಡುವಂತೆ ಒತ್ತಾಯಿಸುವುದಿಲ್ಲ. ಅದು ಅವರ ಆಯ್ಕೆ. ವಿಶ್ರಾಂತಿ ಬೇಕೆಂದಾಗ ಸಂತೋಷವಾಗಿ ಒಪ್ಪಿಕೊಂಡಿದ್ದೇವೆ ಎಂದಿದ್ದಾರೆ.
ಡಿಸೆಂಬರ್‌ನಲ್ಲಿ ವೈಯಕ್ತಿಕ ಕಾರಣಕ್ಕಾಗಿ ವಿಶ್ರಾಂತಿ ತೆಗೆದುಕೊಂಡಿದ್ದ ಇಶಾನ್, ಸದ್ಯ ರಣಜಿಯಲ್ಲೂ ಆಡುತ್ತಿಲ್ಲ. ಮಾನಸಿಕ ಆರೋಗ್ಯ ಕಾರಣಕ್ಕೆ ಬಿಡುವು ಪಡೆದು, ವಿದೇಶದಲ್ಲಿ ಪಾರ್ಟಿ ಮಾಡಿ ಅಶಿಸ್ತು ತೋರಿದ್ದಕ್ಕೆ ಅವರನ್ನು ಭಾರತ ತಂಡದಿಂದ ಹೊರಗಿಡಲಾಗಿದೆ ಎಂದು ಈ ಮೊದಲು ವರದಿಯಾಗಿತ್ತು.