Asianet Suvarna News Asianet Suvarna News

ಇಂದೋರ್ ಟೆಸ್ಟ್: ಮತ್ತೆ ಮುತ್ತಯ್ಯ ದಾಖಲೆ ಸರಿಗಟ್ಟಿದ ಅಶ್ವಿನ್..!

ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್ ದಾಖಲೆ ಬೆನ್ನುಬಿದ್ದಿರುವ ರವಿಚಂದ್ರನ್ ಅಶ್ವಿನ್ ಇದೀಗ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆ ಸರಿಗಟ್ಟಿದ್ದಾರೆ. ಅಲ್ಲದೇ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Indore Test Ravichandran Ashwin becomes fastest to 250 wickets at home
Author
Indore, First Published Nov 14, 2019, 4:48 PM IST

ಇಂದೋರ್[ನ.14]: ಟೀಂ ಇಂಡಿಯಾದ ಚಾಣಾಕ್ಷ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಪಡೆದು ಅಪರೂಪದ ದಾಖಲೆ ಸರಿಗಟ್ಟಿದ್ದಾರೆ.

ಮುರಳೀಧರನ್ ವಿಶ್ವದಾಖಲೆ ಸರಿಗಟ್ಟಲು ಅಶ್ವಿನ್‌ಗೆ ಬೇಕಿದೆ ಇನ್ನೊಂದೇ ವಿಕೆಟ್..!

ಹೌದು, ಬಾಂಗ್ಲಾದೇಶ ನಾಯಕ ಮೊಮಿ​ನುಲ್‌ ಹಕ್‌ ವಿಕೆಟ್ ಪಡೆಯುತ್ತಿದ್ದಂತೆ ರವಿಚಂದ್ರನ್ ಅಶ್ವಿನ್ ತವರಿನಲ್ಲಿ 250 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ತವರಿನಲ್ಲಿ ಅತಿವೇಗವಾಗಿ 250+ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡರು. ಮುತ್ತಯ್ಯ ಮುರುಳೀಧರನ್ ಹಾಗೂ ಅಶ್ವಿನ್ ತಾವು ತವರಿನಲ್ಲಾಡಿದ 42ನೇ ಪಂದ್ಯದಲ್ಲಿ 250+ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೊದಲು ಅಶ್ವಿನ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅತಿವೇಗವಾಗಿ 350+ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲೂ ಮುರುಳಿ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದರು. 

ಭಾರತೀಯ ಬೌಲರ್‌ಗಳ ಮಾರಕ ದಾಳಿ; ಬಾಂಗ್ಲಾದೇಶ 150ಕ್ಕೆ ಆಲೌಟ್!

ಭಾರತದ ಮೂರನೇ ಬೌಲರ್: ತವರಿನಲ್ಲಿ 250 ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎನ್ನುವ ಗೌರವಕ್ಕೂ ಅಶ್ವಿನ್ ಪಾತ್ರರಾಗಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ[350] ಹಾಗೂ ಹರ್ಭಜನ್ ಸಿಂಗ್[265] ತವರಿನಲ್ಲಿ 250+ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 

ಇಂದೋರ್ ಟೆಸ್ಟ್: ದಾಖಲೆ ಹೊಸ್ತಿ​ಲಲ್ಲಿ ವಿರಾಟ್ ಕೊಹ್ಲಿ!

ಇನ್ನು ಭಾರತ ಪರ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದ ಆಟಗಾರರಲ್ಲಿ ಅಶ್ವಿನ್ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅನಿಲ್ ಕುಂಬ್ಳೆ[619] ಮೊದಲ ಸ್ಥಾನದಲ್ಲಿದ್ದರೆ, ಕಪಿಲ್ ದೇವ್[434] ಹರ್ಭಜನ್ ಸಿಂಗ್[417] ಅಶ್ವಿನ್[357] ಆನಂತರದ ಸ್ಥಾನದಲ್ಲಿದ್ದಾರೆ. 
 
ಅತಿ ಕಡಿಮೆ ಪಂದ್ಯಗಳಲ್ಲಿ 250+ ವಿಕೆಟ್ ಪಡೆದ ಟಾಪ್ 5 ಬೌಲರ್’ಗಳು
42- ಮುತ್ತಯ್ಯ ಮುರುಳೀಧರನ್& ರವಿಚಂದ್ರನ್ ಅಶ್ವಿನ್
43- ಅನಿಲ್ ಕುಂಬ್ಳೆ
44- ರಂಗನಾ ಹೆರಾತ್
49-ಡೇಲ್ ಸ್ಟೇನ್
51- ಹರ್ಭಜನ್ ಸಿಂಗ್

Follow Us:
Download App:
  • android
  • ios