ಭಾರತೀಯ ಬೌಲರ್‌ಗಳ ಮಾರಕ ದಾಳಿ; ಬಾಂಗ್ಲಾದೇಶ 150ಕ್ಕೆ ಆಲೌಟ್!
ಬಾಂಗ್ಲಾದೇಶ ವಿರುದ್ಧ ಮಾರಕ ದಾಳಿ ಸಂಘಟಿಸಿದ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಇಂದೋರ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರ ಬೌಲರ್‌ಗಳ ಪ್ರದರ್ಶನ ಹೇಗಿದೆ? ಇಲ್ಲಿದೆ ವಿವರ.
ಇಂದೋರ್(ನ.14): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ. ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲೌಟ್ ಆಗಿದೆ.
ಇದನ್ನೂ ಓದಿ: ಬಾಲ್ ಟ್ಯಾಂಪರಿಂಗ್: ಮತ್ತೊಬ್ಬ ಕ್ರಿಕೆಟಿಗ ಬ್ಯಾನ್..!
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ, ಬಹುಬೇಗನ ಆರಂಭಿಕರನ್ನು ಕಳೆದುಕೊಂಡಿತು. ಶದ್ಮನ್ ಇಸ್ಲಾಂ 6 ಹಾಗೂ ಇಮ್ರುಲ್ ಕೈಸ್ 6 ರನ್ ಸಿಡಿಸಿ ಔಟಾದರು. ನಾಯಕ ಮೊಮಿನಲ್ ಹಕ್ 37 ಕಾಣಿಕೆ ನೀಡೋ ಮೂಲಕ ಬಾಂಗ್ಲಾ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಮೊಹಮ್ಮದ್ ಮಿಥುನ್ 13 ರನ್ ಸಿಡಿಸಿ ನಿರ್ಗಮಿಸಿದರು.
ಮುಶ್ಫಿಕರ್ ರಹೀಮ್ ಹೋರಾಟ ನೀಡಿದರೆ, ಇತರರಿಂದ ನಿರೀಕ್ಷಿತ ಸಾಥ್ ಸಿಗಲಿಲ್ಲ. ರಹೀಮ್ 43 ರನ್ ಸಿಡಿಸಿ ಔಟಾದರು. ಮೊಹಮ್ಮದುಲ್ಲಾ 10, ಲಿಟ್ಟನ್ ದಾಸ್ 21 ರನ್ ಸಿಡಿಸಿ ಔಟಾದರು. ಮೆಹದಿ ಹಸನ್, ತೈಜುಲ್ ಇಸ್ಲಾಂ ಹಾಗೂ ಎಬಾದತ್ ಹುಸೈನ್ ಅಬ್ಬರಿಸಲಿಲ್ಲ. ಹೀಗಾಗಿ ಬಾಂಗ್ಲಾದೇಶ 150 ರನ್‌ಗೆ ಆಲೌಟ್ ಆಯಿತು.
ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಬೌಲರ್‌ಗಳ ಕರಾಮತ್ತು!
ಮೊಹಮ್ಮದ್ ಶಮಿ 3 ವಿಕೆಟ್
ಇಂಶಾತ್ ಶರ್ಮಾ 2 ವಿಕೆಟ್
ಉಮೇಶ್ ಯಾದವ್ 2 ವಿಕೆಟ್
ಆರ್ ಅಶ್ವಿನ್ 2 ವಿಕೆಟ್