ಇಂದೋರ್ ಟೆಸ್ಟ್: ಅಪರೂಪದ ದಾಖಲೆ ಬರೆಯಲು ರೆಡಿಯಾದ ಕಿಂಗ್ ಕೊಹ್ಲಿ..!
ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಅಷ್ಟಕ್ಕೂ ಕೊಹ್ಲಿ ಪಾಲಾಗಲಿರುವ ದಾಖಲೆಗಳಾವುವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಇಂದೋರ್[ನ.14]: ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೆಲ ಪ್ರಮುಖ ದಾಖಲೆಗಳನ್ನು ಬರೆಯುವ ನಿರೀಕ್ಷೆಯಲ್ಲಿದ್ದಾರೆ. ನಾಯಕನಾಗಿ 5000 ರನ್ ಪೂರೈಸಲು ಕೊಹ್ಲಿಗೆ ಕೇವಲ 32 ರನ್‌ಗಳ ಅವಶ್ಯಕತೆ ಇದೆ. ಕೊಹ್ಲಿ 84 ಇನ್ನಿಂಗ್ಸ್‌ಗಳಲ್ಲಿ 4968 ರನ್ ಕಲೆಹಾಕಿದ್ದಾರೆ.
ಇಂದೋರ್ ಟೆಸ್ಟ್: ಹ್ಯಾಟ್ರಿಕ್ ಹೊಸ್ತಿಲಲ್ಲಿ ಶಮಿ
ಕೊಹ್ಲಿ 5000 ರನ್ ಮೈಲಿಗಲ್ಲು ತಲುಪಿದ ಭಾರತದ ಮೊದಲ ನಾಯಕ ಎನಿಸಿಕೊಳ್ಳಲಿದ್ದಾರೆ. ಜತೆಗೆ ತಮ್ಮ 85ನೇ ಇನ್ನಿಂಗ್ಸ್‌ನಲ್ಲಿ 32ಕ್ಕಿಂತ ಹೆಚ್ಚಿಗೆ ರನ್ ಗಳಿಸಿದರೆ ಅತಿವೇಗವಾಗಿ 5000 ರನ್ ಗಳಿಸಿದ ನಾಯಕ ಎನ್ನುವ ದಾಖಲೆಗೂ ಪಾತ್ರರಾಗಲಿದ್ದಾರೆ.
ನಾಯಕನಾಗಿ 19 ಶತಕಗಳನ್ನು ಬಾರಿಸಿರುವ ಕೊಹ್ಲಿ, ಅತಿಹೆಚ್ಚು ಶತಕಗಳನ್ನು ಬಾರಿಸಿದ ನಾಯಕ ಎನಿಸಿಕೊಳ್ಳಲು ಇನ್ನೊಂದು ಶತಕದ ಅಗತ್ಯವಿದೆ. ಸದ್ಯ ಆಸ್ಪ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ (19 ಶತಕ) ಜತೆ ಕೊಹ್ಲಿ ದಾಖಲೆ ಹಂಚಿಕೊಂಡಿದ್ದಾರೆ.
ಭಾರತೀಯ ಬೌಲರ್‌ಗಳ ಮಾರಕ ದಾಳಿ; ಬಾಂಗ್ಲಾದೇಶ 150ಕ್ಕೆ ಆಲೌಟ್!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಕೇವಲ 150 ರನ್‌ಗಳಿಗೆ ಸರ್ವಪತನ ಕಂಡಿದೆ. ಮೊಹಮ್ಮದ್ ಶಮಿ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಆರ್. ಅಶ್ವಿನ್ ತಲಾ 2 ವಿಕೆಟ್ ಪಡೆದಿದ್ದಾರೆ.