* ಇಂಗ್ಲೆಂಡ್ ಪ್ರವಾಸಕ್ಕೆ ಕಠಿಣ ಕ್ವಾರಂಟೈನ್‌ಗೆ ಒಳಗಾದ ಟೀಂ ಇಂಡಿಯಾ* 7 ದಿನಗಳ ಕಾಲ ಯಾರೂ ತಮ್ಮ ಹೋಟೆಲ್ ರೂಂ ಬಿಟ್ಟು ಹೊರಬರುವಂತಿಲ್ಲ.* ಜೂ.2ಕ್ಕೆ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಇಂಗ್ಲೆಂಡ್‌ಗೆ ಹೊರಡಲಿವೆ.

ಮುಂಬೈ(ಮೇ.26): ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡದ ಕಠಿಣ ಕ್ವಾರಂಟೈನ್‌ ಮಂಗಳವಾರದಿಂದ ಆರಂಭಗೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದಲ್ಲೇ ಇರುವ ಪಂಚತಾರಾ ಹೋಟೆಲ್‌ನಲ್ಲಿ ಪುರುಷ ಹಾಗೂ ಮಹಿಳಾ ತಂಡದ ಆಟಗಾರರು, ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 7 ದಿನಗಳ ಕಾಲ ಯಾರೂ ತಮ್ಮ ರೂಂ ಬಿಟ್ಟು ಹೊರಬರುವಂತಿಲ್ಲ. ಆಟಗಾರರಿಗೆ ರೂಂಗಳಲ್ಲೇ ಮಿನಿ ಜಿಮ್‌ ವ್ಯವಸ್ಥೆ ಮಾಡಲಾಗಿದ್ದು, ಫಿಟ್ನೆಸ್‌ ಅಭ್ಯಾಸ ನಡೆಸಲು ಅನುಕೂಲವಾಗಲಿದೆ. 3 ಬಾರಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಲಿದ್ದು, ಮೂರರ ವರದಿಯು ನೆಗೆಟಿವ್‌ ಬರಬೇಕಿದೆ. ಜೂ.2ಕ್ಕೆ ತಂಡಗಳು ಇಂಗ್ಲೆಂಡ್‌ಗೆ ಹೊರಡಲಿವೆ.

ಟೆಸ್ಟ್ ವಿಶ್ವಕಪ್ ಫೈನಲ್‌ ಆಡಲು ಕೆ.ಎಲ್ ರಾಹುಲ್ ಫಿಟ್?

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವು ಮೊದಲಿಗೆ ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ಪ್ರಶಸ್ತಿಗಾಗಿ ಕಾದಾಡಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಇಂಗ್ಲೆಂಡ್ ವಿರುದ್ದದ ಟೆಸ್ಟ್‌ ಸರಣಿಯು ಆಗಸ್ಟ್ 04ರಿಂದ ಆರಂಭವಾಗಲಿದೆ.