ಕ್ರಿಕೆಟ್ ಪ್ರೇಮಿಗಳಿಗೆ ವರ್ಲ್ಡ್ ಕಪ್ ಹಬ್ಬ ಶುರುವಾಗ್ತಿದೆ. ಫೆಬ್ರವರಿ 7 ರಿಂದ ಟಿ 20 ವರ್ಲ್ಡ್ ಕಪ್ ಆರಂಭವಾಗಲಿದ್ದು, ಈ ಬಾರಿ ಇಂಡಿಯಾ ಟೀಂನಲ್ಲಿ ಮಾತ್ರವಲ್ಲ ವಿದೇಶಿ ಟೀಂನಲ್ಲೂ ಭಾರತೀಯರನ್ನು ನೋಡ್ಬಹುದು. 

ಟಿ 20 ವರ್ಲ್ಡ್ ಕಪ್(T20 World Cup) ಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 7 ರಿಂದ ಟಿ – 20 ವಿಶ್ವಕಪ್ ಪ್ರಾರಂಭವಾಗಲಿದೆ. ಮೊದಲ ದಿನವೇ ಮೂರು ಮ್ಯಾಚ್ ನಡೆಯಲಿದೆ. ಈ ಬಾರಿ ವರ್ಲ್ಡ್ ಕಪ್ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಈ ವಿಶ್ವಕಪ್ ಭಾರತೀಯ ಆಟಗಾರರಿಂದ ತುಂಬಿರಲಿದೆ. ಟೀಂ ಇಂಡಿಯಾ ಬಿಟ್ಟು ಸುಮಾರು 40 ಭಾರತೀಯ ಆಟಗಾರರು ವಿವಿಧ ಟೀಂನಲ್ಲಿ ಆಡಲಿದ್ದಾರೆ.

ವಿದೇಶಿ ಟೀಂನಲ್ಲಿ ಭಾರತೀಯ ಆಟಗಾರರು

ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲ ಕ್ರಿಕೆಟ್ ಆಟಗಾರರ ಸಂಖ್ಯೆ ಕೂಡ ಹೆಚ್ಚಿದೆ. ಬರೀ ಭಾರತದಲ್ಲಿ ಮಾತ್ರವಲ್ಲ ಭಾರತದಿಂದ ಬೇರೆ ದೇಶಕ್ಕೆ ವಲಸೆ ಹೋಗಿರುವ ಭಾರತೀಯರು ಕೂಡ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದು, ವಿದೇಶಿ ಟೀಂನಲ್ಲಿ ಸ್ಥಾನ ಪಡೆಯಲು ಸಕ್ಸಸ್ ಆಗಿದ್ದಾರೆ. ಯುಎಸ್ಎ, ಕೆನಡಾ ಮತ್ತು ಯುಎಇಗಳು ಸಹ 23 ಭಾರತೀಯ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಮುಂಬೈ ಮೂಲದ ಅಮೆರಿಕನ್ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣೆಸಲಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಬಂಡವಾಳ ಬಯಲು ಮಾಡಿದ ಪಾಕ್ ಮಾಜಿ ಕ್ರಿಕೆಟಿಗ! ಭಾರತ ಕೈಬಿಟ್ರೆ

ಐಸಿಸಿ ಟಿ20 ವಿಶ್ವಕಪ್ 2026 ಗಾಗಿ ಕೆನಡಾದ ತಂಡವು ಒಟ್ಟು 11 ಭಾರತೀಯ ಆಟಗಾರರನ್ನು ಆಯ್ಕೆ ಮಾಡ್ಕೊಂಡಿದೆ. ಯುಎಸ್ಎ ತಂಡದಲ್ಲಿ ಒಂಬತ್ತು ಭಾರತೀಯರಿದ್ದಾರೆ. ಓಮನ್ ತಂಡದಲ್ಲಿ ಏಳು ಭಾರತೀಯರಿದ್ದಾರೆ. ಯುಎಇ ತಂಡದಲ್ಲಿ ಭಾರತೀಯ ಮೂಲದ ಏಳು ಆಟಗಾರರಿದ್ದಾರೆ. ಎಲ್ಲಾ ವಿದೇಶಿ ತಂಡಗಳು ಸೇರಿದಂತೆ, ಸುಮಾರು 40 ಭಾರತೀಯ ಕ್ರಿಕೆಟಿಗರು ಈ ವಿಶ್ವಕಪ್ನಲ್ಲಿ ವಿವಿಧ ತಂಡಗಳಿಗಾಗಿ ಆಡಲಿದ್ದಾರೆ.

ಈ ಬಾರಿ ಒಟ್ಟು 20 ತಂಡಗಳು ಭಾಗಿ

2026 ರ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಪ್ ಗಾಗಿ ಸೆಣೆಸಾಡಲಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪು ಐದು ತಂಡಗಳನ್ನು ಒಳಗೊಂಡಿದೆ. ಪ್ರತಿ ಗುಂಪಿನಲ್ಲಿರುವ ತಂಡಗಳು ಮೊದಲು ಪರಸ್ಪರ ಸೆಣೆಸಾಡಲಿವೆ. ಇದರಿಂದ ಸೂಪರ್ 8 ಟೀಂ ನಿರ್ಧಾರವಾಗಲಿದೆ. ಎಂಟು ತಂಡಗಳು ಮುಂದಿನ ಹಂತಕ್ಕೆ ಮುನ್ನಡೆಯಲಿವೆ. ಮಾರ್ಚ್ 8 ರಂದು ಫೈನಲ್ ಪಂದ್ಯ ನಡೆಯಲಿದೆ. ಫೆಬ್ರವರಿ 15 ರಂದು ಭಾರತ ವಿರುದ್ಧದ ಲೀಗ್ ಹಂತದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸುವುದಾಗಿ ಘೋಷಿಸಿದೆ. ಈ ಬಾರಿ ಬಾಂಗ್ಲಾದೇಶ ವಿಶ್ವಕಪ್ ಭಾಗವಾಗ್ತಿಲ್ಲ.

ಸೆಮಿಫೈನಲ್ ತಲುಪೋರು ಯಾರು?

ಇಂಗ್ಲೆಂಡ್ನ ಮಾಜಿ ನಾಯಕ ಮತ್ತು ಪ್ರಸಿದ್ಧ ಆಟಗಾರ ಮೈಕೆಲ್ ವಾಘನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅವರ ಪೋಸ್ಟ್ ಸಂಚಲನ ಮೂಡಿಸಿದೆ. ತಮ್ಮ ಪೋಸ್ಟ್ನಲ್ಲಿ, ಈ ವರ್ಷ ಸೆಮಿಫೈನಲ್ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ. ಭಾರತದ ಜೊತೆಗೆ, ಅವರು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಹೆಸರು ಹೇಳಿದ್ದಾರೆ. ಪಾಕಿಸ್ತಾನ ಅವರ ಪೋಸ್ಟ್ನಿಂದ ಹೊರಗುಳಿದಿದೆ.

ಔಟಾಗಿ ಹೋಗುತ್ತಿದ್ದ ಪಾಕ್ ಆಟಗಾರನ ಮೇಲೆ ಮುಗಿಬಿದ್ದ ವೈಭವ್

ಈವರೆಗೆ ಟೀಂ ಇಂಡಿಯಾ ಎಂದು ಟಿ -20 ವಿಶ್ವಕಪ್ ಗೆದ್ದಿದ್ದೆ?

ಐಸಿಸಿ ಟಿ20 ವಿಶ್ವಕಪ್ 2007 ರಲ್ಲಿ ಆರಂಭವಾಯಿತು. 2026ರ ಟಿ20 ವಿಶ್ವಕಪ್ನ 10 ನೇ ಆವೃತ್ತಿಯಾಗಲಿದೆ. ಭಾರತ ಇದುವರೆಗೆ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದೆ. 2007 ಮತ್ತು 2024 ರಲ್ಲಿ ಭಾರತ ಕಪ್ ಎತ್ತಿ ಹಿಡಿದಿದೆ. 2024 ರಲ್ಲಿ, ವೆಸ್ಟ್ ಇಂಡೀಸ್ನಲ್ಲಿ ನಡೆದ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸುವ ಮೂಲಕ ಭಾರತ 11 ವರ್ಷಗಳ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸಿತು. ಈ ಬಾರಿ ಕಪ್ ನಮ್ದಾಗುತ್ತಾ ಕಾದು ನೋಡಬೇಕಿದೆ.