Asianet Suvarna News Asianet Suvarna News

ಶಿಖರ್ ಧವನ್ ಸಂಪೂರ್ಣ ಫಿಟ್‌, ಇಂದಿನ ಟಿ20 ಪಂದ್ಯಕ್ಕೆ ಲಭ್ಯ

* ಲಂಕಾ ಎದುರಿನ ಎರಡನೇ ಟಿ20 ಪಂದ್ಯ ಇಂದಿನಿಂದ ಆರಂಭ

* ಶ್ರೀಲಂಕಾ ಎದುರಿನ ಎರಡನೇ ಪಂದ್ಯಕ್ಕೆ ಶಿಖರ್ ಧವನ್ ಲಭ್ಯ

* ಟೀಂ ಇಂಡಿಯಾಗೆ ಕೊರೋನಾ ಭೀತಿ

Indian cricket captain Shikhar Dhawan fit and available for remaining T20 match Says Report kvn
Author
Colombo, First Published Jul 28, 2021, 6:05 PM IST
  • Facebook
  • Twitter
  • Whatsapp

ಕೊಲಂಬೊ(ಜು.28): ಭಾರತ ಹಾಗೂ ಶ್ರೀಲಂಕಾ ನಡುವಿನ ಉಳಿದೆರಡು ಟಿ20 ಪಂದ್ಯಗಳು ಈ ಹಿಂದೆ ನಿಗದಿಯಾದಂತೆಯೇ ನಡೆಯಲಿದೆ ಎಂದು ವರದಿಯಾಗಿದೆ. ಅದೇ ರೀತಿ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಸಂಪೂರ್ಣ ಫಿಟ್‌ ಆಗಿದ್ದು, ಲಂಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಜುಲೈ 27ರಂದು ಆರಂಭವಾಗಬೇಕಿದ್ದ ಲಂಕಾ ಎದುರಿನ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಪಂದ್ಯವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು. ಇನ್ನು ಕೃನಾಲ್‌ ಪಾಂಡ್ಯ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇನ್ನುಳಿದ ಏಳು ಆಟಗಾರರನ್ನು ಹೋಟೆಲ್‌ ಕ್ವಾರಂಟೈನ್‌ ಮಾಡಲಾಗಿದೆ. ಹೀಗಾಗಿ ಕೃನಾಲ್ ಪಾಂಡ್ಯ ಸೇರಿ ಒಟ್ಟು  8 ಆಟಗಾರರು ಲಂಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.

INDvSL 2ನೇ ಪಂದ್ಯ ಕೊರೋನಾ ಕಾರಣ ಮುಂದೂಡಿಕೆ; ಹೊಸ ವೇಳಾಪಟ್ಟಿ ಬಿಡುಗಡೆ!

ಇನ್ನು ಟೀಂ ಇಂಡಿಯಾ ನಾಯಕ ಶಿಖರ್ ಧವನ್‌ ತಾವು ಸಂಪೂರ್ಣ ಫಿಟ್ ಇದ್ದು, ಇಂದು ಸಂಜೆ 8 ಗಂಟೆಯಿಂದ ಆರಂಭವಾಗಲಿರುವ ಪಂದ್ಯಕ್ಕೆ ತಾವು ಲಭ್ಯವಿರುವುದಾಗಿ ಗಬ್ಬರ್ ಸಿಂಗ್ ಖ್ಯಾತಿಯ ಧವನ್ ತಿಳಿಸಿದ್ದಾರೆಂದು ಸ್ಪೋರ್ಟ್ಸ್‌ಕೀಡಾ ವರದಿ ಮಾಡಿದೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಲಂಕಾ ಎದುರು ಟೀಂ ಇಂಡಿಯಾ 38 ರನ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ 1-0 ಮುನ್ನಡೆ ಸಾಧಿಸಿದೆ. ಇದೀಗ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ನೆಟ್‌ ಬೌಲರ್‌ಗಳಾದ ಇಶಾನ್ ಪೊರೆಲ್‌, ಸಂದೀಪ್ ವಾರಿಯರ್, ಆರ್ಶದೀಪ್ ಸಿಂಗ್, ಸಾಯಿ ಕಿಶೋರ್, ಸಿಮ್ರಜೀತ್ ಸಿಂಗ್ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ.
 

Follow Us:
Download App:
  • android
  • ios