India vs West Indies T20: ಮುಂಬರುವ ಭಾರತ-ವೆಸ್ಟ್ ಇಂಡೀಸ್ T20I ಸರಣಿಯ 'ಜೀತೋ ಧನ್ ಧನಾ ಧನ್' ಸ್ಪರ್ಧೆಗೆ ಸ್ಕೈಸ್ಕ್ಯಾನರ್ ಟೈಟಲ್ ಸ್ಪಾನ್ಸರ್ ಆಗಿದೆ. JioHotstarನಲ್ಲಿ ಲೈವ್ ಪಂದ್ಯ ವೀಕ್ಷಿಸುತ್ತಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಭಿಮಾನಿಗಳು ಟ್ರಾವೆಲ್ ವೋಚರ್‌ಗಳನ್ನು ಗೆಲ್ಲಬಹುದು.

ಮುಂಬರುವ ಭಾರತ ಮತ್ತು ವೆಸ್ಟ್ ಇಂಡೀಸ್(India vs West Indies) ನಡುವಿನ T20I ಸರಣಿಗಾಗಿ ಜನಪ್ರಿಯ ‘ಪ್ರಿಡಿಕ್ಟ್ ಆ್ಯಂಡ್ ವಿನ್’ ಅಭಿಮಾನಿ ಸ್ಪರ್ಧೆ ಜೀತೋ ಧನ್ ಧನಾ ಧನ್(Jeeto Dhan Dhana Dhan)ಗೆ ಟೈಟಲ್ ಸ್ಪಾನ್ಸರ್ ಆಗಿ ಜಾಗತಿಕ ಟ್ರಾವೆಲ್ ಆ್ಯಪ್ ಸ್ಕೈಸ್ಕ್ಯಾನರ್ ಆಯ್ಕೆಯಾಗಿದೆ ಎಂದು ಜಿಯೋಸ್ಟಾರ್ ಇಂದು ಘೋಷಿಸಿದೆ.

ಈ ಸಹಭಾಗಿತ್ವದಿಂದ JioHotstarನಲ್ಲಿ ನಡೆಯುವ ಉಚಿತ ಸ್ಪರ್ಧೆಗೆ ಮತ್ತಷ್ಟು ರೋಚಕತೆ ಸಿಗಲಿದೆ. ಸರಣಿಯ ಪ್ರತಿ ಪಂದ್ಯದ ದಿನವೂ ವೀಕ್ಷಕರು ಸ್ಕೈಸ್ಕ್ಯಾನರ್‌ ಟ್ರಾವೆಲ್ ವೋಚರ್‌ಗಳನ್ನು ಗೆಲ್ಲುವ ಅವಕಾಶ ಪಡೆಯಲಿದ್ದಾರೆ.

ಏನಿದು ಜೀತೋ ಧನ್ ಧನಾ ಧನ್?

‘ಜೀತೋ ಧನ್ ಧನಾ ಧನ್’ ಮೂಲಕ ವೀಕ್ಷಕರು ನೇರ ಕ್ರಿಕೆಟ್ ಪಂದ್ಯ ನೋಡುತ್ತಿರುವಾಗಲೇ ರಿಯಲ್‌ಟೈಮ್‌ನಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದು, ಪಂದ್ಯಕ್ಕೆ ಸಂಬಂಧಿಸಿದ ಅಂದಾಜುಗಳನ್ನು ನೀಡುವ ಮೂಲಕ ರೋಚಕ ಬಹುಮಾನಗಳನ್ನು ಗೆಲ್ಲುವುದು ಸಾಧ್ಯ. ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ಐದು ಪಂದ್ಯಗಳ T20I ಸರಣಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಅಭಿಮಾನಿಗಳಿಗೆ ಪ್ರತಿ ಪಂದ್ಯ ದಿನವೂ ಗರಿಷ್ಠ ₹1,000 ಮೌಲ್ಯದ ಸ್ಕೈಸ್ಕ್ಯಾನರ್ ಟ್ರಾವೆಲ್ ವೋಚರ್ ಗೆಲ್ಲುವ ಅವಕಾಶ ಸಿಗಲಿದೆ. ಸರಳವಾದ ಪ್ರಶ್ನೆಗೆ ಒಂದು ಅಂದಾಜು ಉತ್ತರವೇ ಮುಂದಿನ ಪ್ರವಾಸದ ಯೋಜನೆಯನ್ನು ನನಸಾಗಿಸುವ ಅವಕಾಶ ನೀಡಬಹುದು!

ಜೀತೋ ಧನ್ ಧನಾ ಧನ್ ಹೇಗೆ ಭಾಗವಹಿಸುವುದು?

ಇಂಡಿಯಾ-ವೆಸ್ಟ್ ಇಂಡೀಸ್ ಪಂದ್ಯ ವೀಕ್ಷಿಸುವಾಗ ವೀಕ್ಷಕರು JioHotstarನಲ್ಲಿ ಇರುವ ‘Jeeto’ ಟ್ಯಾಬ್ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಲೈವ್ ಪಂದ್ಯ ನಡೆಯುತ್ತಿರುವಾಗಲೇ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಅಂದಾಜು ಉತ್ತರಗಳನ್ನು ನೀಡಬೇಕು. ಸ್ಕೈಸ್ಕ್ಯಾನರ್ ಶೀರ್ಷಿಕೆ ಪ್ರಾಯೋಜಕರಾಗಿ ಸೇರಿಕೊಂಡಿರುವುದರಿಂದ ಸರಣಿಯುದ್ದಕ್ಕೂ ಪಂದ್ಯ ವೀಕ್ಷಿಸುತ್ತಾ ಆಟದಲ್ಲಿ ಭಾಗವಹಿಸುವ ಅಭಿಮಾನಿಗಳಿಗೆ ಟ್ರಾವೆಲ್ ಬಹುಮಾನಗಳನ್ನು ಗೆಲ್ಲಲು ಹೆಚ್ಚಿನ ಅವಕಾಶ ದೊರೆಯಲಿದೆ.

‘ಜೀತೋ ಧನ್ ಧನಾ ಧನ್’ ಜಿಯೋಸ್ಟಾರ್‌ನ ಒಂದು ಜನಪ್ರಿಯ ಕಾರ್ಯಕ್ರಮ. ಇದರಲ್ಲಿ ಪಂದ್ಯ ನೋಡುತ್ತಲೇ ತಾವೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಸಹಭಾಗಿತ್ವದ ಮೂಲಕ ಸ್ಕೈಸ್ಕ್ಯಾನರ್ ಮತ್ತು ಜಿಯೋಸ್ಟಾರ್ ಲೈವ್ ಕ್ರಿಕೆಟ್‌ನ ರೋಚಕತೆ, ಸಂವಾದಾತ್ಮಕ ಮನರಂಜನೆ ಮತ್ತು ಪ್ರವಾಸದ ಖುಷಿಯನ್ನು ಒಂದೆಡೆ ತರಲಿವೆ. ಇದರಿಂದ ಮೈದಾನದಲ್ಲಿನ ಆಟದ ಹೊರತಾಗಿಯೂ ಪ್ರತಿ ಪಂದ್ಯಕ್ಕಾಗಿ ಅಭಿಮಾನಿಗಳು ಎದುರುನೋಡಲು ಮತ್ತೊಂದು ಕಾರಣ ಸಿಗಲಿದೆ.

ಜಿಯೋಸ್ಟಾರ್ ಕ್ರೀಡೆಯನ್ನ ವೀಕ್ಷಿಸುವ ರೀತಿಯನ್ನ ಬದಲಿಸಿದೆ!

ರೋಚಕ ಕಂಟೆಂಟ್, ಹೊಸ ತಂತ್ರಜ್ಞಾನದ ಮೂಲಕ ಮನರಂಜನೆ ಹಾಗೂ ಕ್ರೀಡೆಯನ್ನು ವೀಕ್ಷಿಸುವ ರೀತಿಯನ್ನೇ ಬದಲಾಯಿಸುತ್ತಿರುವ ಜಿಯೋಸ್ಟಾರ್ ಇಂದು ಪ್ರಮುಖ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಕಂಪನಿಯಾಗಿ ಬೆಳೆದು ನಿಂತಿದೆ. ಇದರ ಟೆಲಿವಿಷನ್ ನೆಟ್‌ವರ್ಕ್ ಮತ್ತು ಸ್ಟ್ರೀಮಿಂಗ್ ಸೇವೆಗಳು ಒಟ್ಟಾಗಿ ಪ್ರತಿ ವಾರ 80 ಕೋಟಿಗೂ ಹೆಚ್ಚು ವೀಕ್ಷಕರನ್ನು ತಲುಪುತ್ತವೆ. ವಿವಿಧ ಪ್ರದೇಶಗಳ ಕೋಟ್ಯಂತರ ಜನರ ಕನಸು ಮತ್ತು ಆಶಯಗಳಿಗೆ ಇದು ಪ್ರೇರಣೆಯಾಗುತ್ತಿದೆ.

ಸ್ಕೈಸ್ಕ್ಯಾನರ್ ಜಾಗತಿಕ ಟ್ರಾವೆಲ್ ಆಪ್

ಸ್ಕೈಸ್ಕ್ಯಾನರ್ ಪ್ರಮುಖ ಜಾಗತಿಕ ಟ್ರಾವೆಲ್ ಪ್ಲಾಟ್‌ಫಾರ್ಮ್ ಆಗಿದ್ದು, ಪ್ರವಾಸಿಗರು ತಮ್ಮ ಪ್ರಯಾಣವನ್ನು ಸುಲಭವಾಗಿ ಮತ್ತು ವಿಶ್ವಾಸದಿಂದ ಯೋಜಿಸಿ ಬುಕ್ ಮಾಡಲು ಸಹಾಯ ಮಾಡುತ್ತದೆ. ಪ್ರತಿ ತಿಂಗಳು 52 ದೇಶಗಳು ಮತ್ತು 37 ಭಾಷೆಗಳಲ್ಲಿರುವ ಕೋಟ್ಯಂತರ ಪ್ರವಾಸಿಗರನ್ನು ಸ್ಕೈಸ್ಕ್ಯಾನರ್ 1400ಕ್ಕೂ ಹೆಚ್ಚು ವಿಶ್ವಾಸಾರ್ಹ ಟ್ರಾವೆಲ್ ಪಾಲುದಾರರೊಂದಿಗೆ ಸಂಪರ್ಕಿಸುತ್ತದೆ. ಇದರಿಂದ ಪ್ರವಾಸಿಗರು ವಿಮಾನ, ವಾಸ್ತವ್ಯ ಮತ್ತು ಕಾರು ಬಾಡಿಗೆಗೆ ಉತ್ತಮ ಆಯ್ಕೆಗಳನ್ನು ಹುಡುಕಬಹುದು.

2003ರಲ್ಲಿ ಸ್ಥಾಪನೆಯಾದ ಸ್ಕೈಸ್ಕ್ಯಾನರ್ ಯುರೋಪ್, ಏಷ್ಯಾ-ಪೆಸಿಫಿಕ್ ಮತ್ತು ಅಮೆರಿಕ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಕಚೇರಿಗಳನ್ನು ಹೊಂದಿದೆ. ಇಲ್ಲಿನ ತಂಡಗಳು ಪ್ರವಾಸಿಗರಿಗೆ ಮೊದಲ ಆದ್ಯತೆ ನೀಡುವ ರೀತಿಯಲ್ಲಿ ಡೇಟಾ ಮತ್ತು ಮಾಹಿತಿಯ ಆಧಾರದ ಮೇಲೆ ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸುತ್ತವೆ.

AI ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಕೈಸ್ಕ್ಯಾನರ್ ಪ್ರವಾಸವನ್ನ ಸರಳಗೊಳಿಸುತ್ತಿದೆ. ಪ್ರತಿ ದಿನ 100 ಬಿಲಿಯನ್‌ಗೂ ಹೆಚ್ಚು ಬೆಲೆಗಳನ್ನು ಪರಿಶೀಲಿಸುವ ಮೂಲಕ ಪ್ರಾಮಾಣಿಕ ಮತ್ತು ಪಾರದರ್ಶಕ ಪರಿಹಾರಗಳನ್ನು ಒದಗಿಸುತ್ತದೆ. ಇದರಿಂದ ಪ್ರವಾಸಿಗರು ಒಂದೇ ಸ್ಥಳದಲ್ಲಿ ಎಲ್ಲ ಮಾಹಿತಿಯೂ ಸಿಗುತ್ತಿದೆ.

ಸ್ಕೈಸ್ಕ್ಯಾನರ್ ಆಪ್ ಎಲ್ಲಿ ಡೌನ್‌ಲೋಡ್?

ಸ್ಕೈಸ್ಕ್ಯಾನರ್ ಆ್ಯಪ್‌ನ್ನು Apple ಅಥವಾ Google Play ಮೂಲಕ ಡೌನ್‌ಲೋಡ್ ಮಾಡಬಹುದು. LinkedInನಲ್ಲಿಯೂ ಸ್ಕೈಸ್ಕ್ಯಾನರ್ ಅನ್ನು ಫಾಲೋ ಮಾಡಬಹುದು.