ವೆಸ್ಟ್ ಇಂಡೀಸ್ ವಿರುದ್ದದ 406 ರನ್ ಚೇಸಿಂಗ್‌ನಲ್ಲಿ ಶುಬಮನ್ ಗಿಲ್ ಡಬಲ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಶುಬಮನ್ ಗಿಲ್ 2ನೇ ಡಬಲ್ ಸೆಂಚುರಿ ಮಾತ್ರವಲ್ಲ, ಹಲವು ದಾಖಲೆ ಬರೆದಿದ್ದಾರೆ.
ಗುವ್ಹಾಟಿ (ಸೆ.30) ಟೀಂ ಇಂಡಿಯಾ ನಾಯಕ ಶುಬಮನ್ ಗಿಲ್ ಐತಿಹಾಸಿಕ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಗಿಲ್ ಸ್ಫೋಟಕ ಡಬಲ್ ಸೆಂಚುರಿ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ನೀಡಿದ 406 ರನ್ ಟಾರ್ಗೆಟ್ ಚೇಸಿಂಗ್ ವೇಳೆ ಗಿಲ್ ಎಸೆತದಲ್ಲಿ ದ್ವಿಶತಕ ಸಿಡಿಸಿ ಅಬ್ಬರಿಸಿದ್ದಾರೆ. ಶುಬಮನ್ ಗಿಲ್ 2ನೇ ಬಾರಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇಷ್ಟೇ ಅಲ್ಲ ಶುಬಮನ್ ಗಿಲ್ ಏಕದಿನದಲ್ಲಿ ಅತೀ ವೇಗದಲ್ಲಿ ದ್ವಿಶತಕ ಸಿಡಿಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಏಕದಿನದಲ್ಲಿ ಶುಬಮನ್ ಗಿಲ್ ಕೇವಲ 117 ಎಸೆತದಲ್ಲಿ ಡಬಲ್ ಸೆಂಚುರಿ ಸಿಡಿಸಿದ್ದಾರೆ. ಇದಕ್ಕೂ ಮೊದಲು ಟೀಂ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ ಇಶಾನ್ ಕಿಶನ್ 117 ಎಸೆತದಲ್ಲಿ ಡಬಲ್ ಸೆಂಚುರಿ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಇಶಾನ್ ಕಿಶನ್ ದಾಖಲೆಯನ್ನು ಗಿಲ್ ಮುರಿದಿದ್ದಾರೆ.
ಏಕದಿನದಲ್ಲಿ ಅತೀವೇಗದ ದ್ವಿಶತಕ ಸಾಧನೆ
- ಶುಬಮನ್ ಗಿಲ್, 117 ಎಸೆತದಲ್ಲಿ ಡಬಲ್ ಸೆಂಚುರಿ
- ಇಶಾನ್ ಕಿಶನ್, 126 ಎಸೆತದಲ್ಲಿ ಡಬಲ್ ಸೆಂಚುರಿ
- ಗ್ಲೆನ್ ಮ್ಯಾಕ್ಸ್‌ವೆಲ್ 128,ಎಸೆತದಲ್ಲಿ ಡಬಲ್ ಸೆಂಚುರಿ
- ಪಿ ನಿಸಂಕಾ 136 , ಎಸೆತದಲ್ಲಿ ಡಬಲ್ ಸೆಂಚುರಿ
- ಕ್ರಿಸ್ ಗೇಲ್ 138 , ಎಸೆತದಲ್ಲಿ ಡಬಲ್ ಸೆಂಚುರಿ
ಏಕದಿನದಲ್ಲಿ ರನ್ ಚೇಸಿಂಗ್ ವೇಳೆ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಶುಬಮನ್ ಗಿಲ್ ಪಾತ್ರರಾಗಿದ್ದಾರೆ. ಗಿಲ್ ಅಜೇಯ 215 ರನ್ ಸಿಡಿಸಿ ಮುನ್ನುಗ್ಗುತ್ತಿದ್ದಾರೆ. ಇದಕ್ಕೂ ಮೊದಲು ಚೇಸಿಂಗ್ ವೇಳೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅಜೇಯ 201 ರನ್ ಸಿಡಿಸಿದ್ದರು.
ಏಕದಿನ ರನ್ ಚೇಸಿಂಗ್ ವೇಳೆ ಗರಿಷ್ಠ ಸ್ಕೋರ್ ದಾಖಲೆ
- ಶುಬಮನ್ ಗಿಲ್, ಅಜೇಯ 215 ರನ್ *
- ಗ್ಲೇನ್ ಮ್ಯಾಕ್ಸ್‌ವೆಲ್, ಅಜೇಯ 201 ರನ್
- ಫಖರ್ ಜಮಾನ್, 193 ರನ್
- ಶೇನ್ ವ್ಯಾಟ್ಸನ್, ಅಜೇಯ 185 ರನ್
- ಎಂಎಸ್ ಧೋನಿ, ಅಜೇಯ 183 ರನ್
- ವಿರಾಟ್ ಕೊಹ್ಲಿ, 183 ರನ್
ಗರಿಷ್ಠ ಆರಂಭಿಕ ಪಾರ್ಟ್ನರ್‌ಶಿಪ್ ದಾಖಲೆ
ಶುಬಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಜೊತೆ ಮೊದಲ ವಿಕೆಟ್‌ಗೆ ದಾಖಲೆ ಜೊತೆಯಾಟ ನೀಡಿದ್ದಾರೆ. ಭಾರತದ ಪರ ಗರಿಷ್ಠ ಜೊತೆಯಾಟ ನೀಡಿದ 2ನೇ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಸಚಿನ್ ತೆಂಡೂಲ್ಕರ್ -ಸೌರವ್ ಗಂಗೂಲಿ 258 ರನ್ ಜೊತೆಯಾಟ
- ರೋಹಿತ್ ಶರ್ಮಾ-ಶುಬಮನ್ ಗಿಲ್, 255 ರನ್ ಜೊತೆಯಾಟ
- ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ, 252 ರನ್ ಜೊತೆಯಾಟ
- ಶಿಖರ್ ಧವನ್-ಅಜಿಂಕ್ಯ ರಹಾನೆ, 231 ರನ್ ಜೊತೆಯಾಟ


