ಹೈದರಾಬಾದ್(ಡಿ.06): ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಗರಿಷ್ಟ 50 ಪ್ಲಸ್ ರನ್ ಸಿಡಿಸಿ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಸ್ಯಾಮ್ಸನ್ ಬದಲು ಪಂತ್‌ಗೆ ಸ್ಥಾನ; ಟೀಂ ಆಯ್ಕೆಗೆ ಫ್ಯಾನ್ಸ್ ಗರಂ!

ವಿರಾಟ್ ಕೊಹ್ಲಿ ಟಿ20 ಮಾದರಿ ಕ್ರಿಕೆಟ್‌ನಲ್ಲಿ 23 ಬಾರಿ 50ಕ್ಕೂ ಹೆಚ್ಚು ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದಕ್ಕೊ ಮೊದಲು ರೋಹಿತ್ ಶರ್ಮಾ 22 ಬಾರಿ 50 ಪ್ಲಸ್ ಸ್ಕೋರ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರು. ಆದರೆ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಮುರಿದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ 50+ ಸಾಧಕರು
ವಿರಾಟ್ ಕೊಹ್ಲಿ (23)
ರೋಹಿತ್ ಶರ್ಮಾ(22)
ಮಾರ್ಟಿನ್ ಗಪ್ಟಿಲ್(17)
ಪೌಲ್ ಸ್ಟಿರ್ಲಿಂಗ್/ ಡೇವಿಡ್ ವಾರ್ನರ್(16)