ತಿರುವನಂತಪುರಂ(ಡಿ.08): ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ಅಭಿಮಾನಿಗಳ ಸಂಖ್ಯೆ ಹೇಳುವುದೇ ಬೇಡ. ಪ್ರತಿ ಬಾರಿ ಪಂದ್ಯಕ್ಕೆ ತೆರಳಿದಾಗ ಕ್ರಿಕೆಟಿಗರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಸಿಗುತ್ತೆ. ಇದೀಗ ಕೇರಳ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ತವರಿನ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಗಿದೆ. 

ಇದನ್ನೂ ಓದಿ: 2ನೇ ಟಿ20: ಇಲ್ಲಿದೆ ಟೀಂ ಇಂಡಿಯಾ ಸಂಭವನೀಯ ತಂಡ, ಸಂಜುಗೆ ಇದೆಯಾ ಅವಕಾಶ?.

2ನೇ ಟಿ20 ಪಂದ್ಯಕ್ಕಾಗಿ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಟೀಂ ಇಂಡಿಯಾ ಬಂದಿಳಿದಿದೆ.  ವಿಮಾನ ನಿಲ್ದಾಣದಿಂದ ಹೊರಬರುವ ದಾರಿಯಲ್ಲಿ ಕಾದು ನಿಂತಿದ್ದ ಅಭಿಮಾನಿಗಳು ಸಂಜು ಸಂಜು ಎಂದು ಕೂಗಿದ್ದಾರೆ. ಪ್ರತಿಯೊಬ್ಬ ಅಭಿಮಾನಿ ಸಂಜು ಸ್ಯಾಮ್ಸನ್ ಹೆಸರು ಮಾತ್ರ ಕೂಗಿದ್ದಾರೆ. ಇತರ ಎಲ್ಲಾ ವಿಮಾ ನಿಲ್ದಾಣಗಳಲ್ಲಿ ತವರಿನ ಕ್ರಿಕೆಟಿಗರ  ಜೊತೆ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಹೆಸರು ಕೇಳಿ ಬರುತ್ತೆ. ಆದರೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೇವಲ ಸಂಜು ಸ್ಯಾಮ್ಸನ್ ಹೆಸರು ಮಾತ್ರ ಕೇಳಿ ಬಂದಿತ್ತು.

 

ಇದನ್ನೂ ಓದಿ: ಕೊಹ್ಲಿ ನೋಟ್‌ಬುಕ್ ಸಂಭ್ರಮ; ಇಲ್ಲಿದೆ ಟಾಪ್ 10 ಮೆಮೆ !.

ನಿರಂತರವಾಗಿ ಸಂಜು ಸಂಜು ಎಂದು ಕೂಗಿದ ಅಭಿಮಾನಿಗಳು, ಅಭೂತಪೂರ್ವ ಸ್ವಾಗತ ನೀಡಿದ್ದಾರೆ. ಸಂಜು ಸ್ಯಾಮ್ಸನ್‌ ಕುರಿತು ತವರಿನ ಫ್ಯಾನ್ಸ್ ಅಭಿಮಾನ ಕಂಡ ಟೀಂ ಇಂಡಿಯಾ ಕ್ರಿಕೆಟಿಗರು ದಂಗಾದಿದ್ದಾರೆ. ಈ ಪಾಟಿ ಕೂಗುತ್ತಿದ್ದಾರಲ್ಲ ಬಸ್ ಹತ್ತುದಿದ್ದ ಸಂಜುವನ್ನು ಸಹ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ. ಸಂಜು ನಕ್ಕು ಸುಮ್ಮನಾಗಿದ್ದಾರೆ.

ಕೇರಳ ಕ್ರಿಕೆಟ್ ಅಭಿಮಾನಿಗಳು ಸಂಜು ಸಂಜು ಕೂಗಿನ ಮೂಲಕ ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಂ ಮ್ಯಾನೇಜ್ಮೆಂಟ್‌ಗೆ ಪರೋಕ್ಷ ಮನವಿಯನ್ನು ಮಾಡಿದ್ದಾರೆ. ಬೆಂಚ್ ಕಾದಿರುವ ಸಂಜುಗೆ ಅವಕಾಶ ನೀಡುವಂತೆಯೂ ಕೆಲ ಅಭಿಮಾನಿಗಳು ಮನವಿ ಮಾಡಿದ್ದಾರೆ.