Asianet Suvarna News Asianet Suvarna News

ಟೀಂ ಇಂಡಿ​ಯಾಗಿಂದು ಟಿ20 ಸರಣಿ ಜಯದ ಗುರಿ

ಭಾರತ-ವೆಸ್ಟ್ ಇಂಡೀಸ್ ತಂಡಗಳು ತಿರುವನಂತಪುರಂನಲ್ಲಿ ಭಾನುವಾರವಾದ ಇಂದು ಎರಡನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು, ವಿರಾಟ್ ಪಡೆ ಸರಣಿ ಗೆಲುವಿನ ಲೆಕ್ಕಾಚಾರದಲ್ಲಿದ್ದರೆ, ವಿಂಡೀಸ್ ಕಮ್‌ಬ್ಯಾಕ್ ಮಾಡುವ ಕನವರಿಕೆಯಲ್ಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

India vs West Indies India look to seal series against West Indies in Thiruvananthapuram
Author
Thiruvananthapuram, First Published Dec 8, 2019, 11:17 AM IST

ತಿರು​ವ​ನಂತಪುರಂ[ಡಿ.08]: ವೆಸ್ಟ್‌ಇಂಡೀಸ್‌ ವಿರು​ದ್ಧ ಭಾನು​ವಾರ ಇಲ್ಲಿನ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯ ನಡೆ​ಯ​ಲಿದೆ. ಸುಧಾ​ರಿತ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಪ್ರದ​ರ್ಶನದೊಂದಿಗೆ ಮತ್ತೊಂದು ಸರಣಿ ಗೆಲು​ವಿನ ಮೇಲೆ ಭಾರತ ತಂಡ ಕಣ್ಣಿ​ಟ್ಟಿದೆ.

ಕಳೆದ 13 ತಿಂಗ​ಳಲ್ಲಿ ವಿಂಡೀಸ್‌ ವಿರುದ್ಧ ಆಡಿ​ರುವ ಎಲ್ಲಾ 7 ಟಿ20 ಪಂದ್ಯ​ಗ​ಳಲ್ಲಿ ಭಾರತ ಜಯ​ಭೇರಿ ಬಾರಿಸಿದೆ. ಶುಕ್ರವಾರ ಹೈದ​ರಾ​ಬಾದ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯ​ದಲ್ಲಿ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿ​ಸಿ, 3 ಪಂದ್ಯ​ಗಳ ಸರ​ಣಿ​ಯಲ್ಲಿ 1-0 ಮುನ್ನಡೆ ಗಳಿ​ಸಿದ ವಿರಾಟ್‌ ಕೊಹ್ಲಿ ಪಡೆ, ಇನ್ನೊಂದು ಪಂದ್ಯ ಬಾಕಿ ಇರು​ವಂತೆಯೇ ಸರಣಿ ವಶ​ಪ​ಡಿ​ಸಿ​ಕೊ​ಳ್ಳುವ ಉತ್ಸಾ​ಹ​ದ​ಲ್ಲಿದೆ. ಕಳೆದ ತಿಂಗಳು ಬಾಂಗ್ಲಾ​ದೇಶ ವಿರುದ್ಧ ಭಾರತ 2-1ರಲ್ಲಿ ಸರಣಿ ಗೆದ್ದಿತ್ತು.

ರಾಹುಲ್, ಕೊಹ್ಲಿ ಅರ್ಧಶತಕ; ವಿಂಡೀಸ್ ವಿರುದ್ಧ ಗೆದ್ದು ಬೀಗಿದ ಭಾರತ!

ಭಾನು​ವಾರ ಗೆಲುವು ಸಾಧಿ​ಸಿ​ದರೆ ಸರಣಿ ಗೆಲುವು ಒಲಿ​ಯು​ವುದು ಮಾತ್ರವಲ್ಲದೆ, 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಕೆಲ ಪ್ರಯೋಗಗಳನ್ನು ಮಾಡಲು ಅನು​ಕೂ​ಲ​ವಾ​ಗ​ಲಿದೆ. 2020ರ ಟಿ20 ವಿಶ್ವ​ಕಪ್‌ಗೆ ಬಲಿಷ್ಠ ತಂಡ ಕಟ್ಟಲು ಹೊರ​ಟಿ​ರುವ ಭಾರತ ತಂಡದ ಆಡ​ಳಿತ, ಕೆಲ ಪ್ರಮುಖ ಸಮಸ್ಯೆಗಳಿಗೆ ಪರಿ​ಹಾರ ಹುಡು​ಕುವ ಕಾರ್ಯ ನಡೆ​ಸು​ತ್ತಿದೆ. ಶುಕ್ರ​ವಾರ, ಟಿ20ಯಲ್ಲಿ ಗರಿಷ್ಠ ರನ್‌ ಬೆನ್ನತ್ತಿ ಗೆದ್ದ ದಾಖಲೆ ಬರೆದ ಭಾರತ ತಂಡ, ಮೊದಲು ಬ್ಯಾಟ್‌ ಮಾಡಿ​ದಾ​ಗಲೂ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ. ತಂಡ ಮತ್ತೊಮ್ಮೆ ತನ್ನ ಬ್ಯಾಟ್ಸ್‌ಮನ್‌ಗಳ ಮೇಲೆಯೇ ಹೆಚ್ಚು ಅವ​ಲಂಬಿತಗೊಂಡಿದೆ. ಕೊಹ್ಲಿ ಇಲ್ಲವೇ ರೋಹಿತ್‌ ಶರ್ಮಾ ಇಬ್ಬ​ರಲ್ಲಿ ಒಬ್ಬರು ಕಡ್ಡಾ​ಯ​ವಾಗಿ ದೊಡ್ಡ ಇನ್ನಿಂಗ್ಸ್‌ ಆಡ​ಬೇಕಾದ ಅನಿ​ವಾ​ರ್ಯತೆ ಇದೆ. ಕೆ.ಎಲ್‌.ರಾ​ಹುಲ್‌ ತಮ್ಮ ಆಕ​ರ್ಷಕ ಲಯ ಮುಂದು​ವ​ರಿ​ಸಿ​ರು​ವುದು ತಂಡಕ್ಕೆ ಲಾಭ​ವಾ​ಗು​ತ್ತಿದೆ. ಆದರೆ ರಿಷಭ್‌ ಪಂತ್‌ ಜವಾ​ಬ್ದಾ​ರಿ​ಯುತ ಆಟವಾಡದೆ ಇರು​ವುದು ತಂಡದ ಆತಂಕ ಹೆಚ್ಚಿಸಿದೆ.

ಆಲ್ರೌಂಡರ್‌ಗಳ ಕೊರತೆ: ಹಾರ್ದಿಕ್‌ ಪಾಂಡ್ಯ ಅನು​ಪ​ಸ್ಥಿ​ತಿ ತಂಡ​ವನ್ನು ಬಲ​ವಾಗಿ ಕಾಡು​ತ್ತಿದೆ. ತಜ್ಞ ಆಲ್ರೌಂಡರ್‌ಗಳು ಇಲ್ಲದೆ ಇರುವ ಕಾರಣ, ಭಾರ​ತ ಒಬ್ಬ ಹೆಚ್ಚುವರಿ ಬೌಲರ್‌ ಅನ್ನುಆಡಿ​ಸ​ಬೇ​ಕಾದ ಅನಿ​ವಾ​ರ್ಯತೆಗೆ ಸಿಲು​ಕಿದೆ. ಇದ​ರಿಂದಾಗಿ ಮಧ್ಯಮ ಕ್ರಮಾಂಕ ದುರ್ಬ​ಲ​ಗೊಂಡಿದೆ. ವಾಷಿಂಗ್ಟನ್‌ ಸುಂದರ್‌, ಶಿವಂ ದುಬೆ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ನಿರೀ​ಕ್ಷಿತ ಪ್ರದ​ರ್ಶನ ತೋರು​ತ್ತಿಲ್ಲ. ವಾಷಿಂಗ್ಟನ್‌ ಕ್ಷೇತ್ರರಕ್ಷಣೆಯಲ್ಲೂ ಎಡವಟ್ಟು ಮಾಡು​ತ್ತಿದ್ದಾರೆ. ಆದರೆ ಭಾರ​ತದ ಬಳಿ ಬೇರೆ ಆಯ್ಕೆಗಳಿಲ್ಲ. ಹೀಗಾಗಿ, ಈ ಪಂದ್ಯ​ಕ್ಕೆ ತಂಡ​ದಲ್ಲಿ ಬದ​ಲಾ​ವಣೆ ಆಗುವ ಸಾಧ್ಯತೆ ಕಡಿಮೆ.

ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!

ಭುವ​ನೇ​ಶ್ವರ್‌ ಕುಮಾರ್‌ ಹಾಗೂ ದೀಪಕ್‌ ಚಹರ್‌ ಮೇಲೆ ಒತ್ತಡ ಹೆಚ್ಚಾ​ಗಿದ್ದು, ಯಜು​ವೇಂದ್ರ ಚಹಲ್‌ ಸಹ ಒತ್ತ​ಡಕ್ಕೆ ಸಿಲು​ಕಿ​ದ್ದಾರೆ. ವಿಂಡೀಸ್‌ನ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ನಿಯಂತ್ರಿಸು​ವುದು ಭಾರ​ತೀಯ ಬೌಲರ್‌ಗಳಿಗೆ ಮತ್ತೊಮ್ಮೆ ಸವಾ​ಲಾಗಿ ಪರಿ​ಣ​ಮಿ​ಸ​ಬ​ಹುದು.

ವಿಂಡೀಸ್‌ಗೆ ಪುಟಿ​ದೇ​ಳುವ ಗುರಿ: ಮೊದಲ ಪಂದ್ಯ​ದಲ್ಲಿ ಆಕ​ರ್ಷಕ ಬ್ಯಾಟಿಂಗ್‌ ಪ್ರದ​ರ್ಶ​ನ​ದೊಂದಿಗೆ 207 ರನ್‌ ಗಳಿ​ಸಿ​ದರೂ, ಕಳಪೆ ಬೌಲಿಂಗ್‌ನಿಂದಾಗಿ ವಿಂಡೀಸ್‌ ಪಂದ್ಯ ಕೈಚೆ​ಲ್ಲಿತ್ತು. ನಾಯಕ ಪೊಲ್ಲಾರ್ಡ್‌, ಅನು​ಭವಿ ಜೇಸನ್‌ ಹೋಲ್ಡರ್‌ ಹಾಗೂ ಶೆಲ್ಡನ್‌ ಕಾಟ್ರೆಲ್‌ ಮೇಲೆ ಹೆಚ್ಚು ವಿಶ್ವಾಸವಿರಿ​ಸಿ​ದ್ದಾರೆ. ವಿಂಡೀಸ್‌ 23 ಇತರೆ ರನ್‌ಗಳು ನೀಡಿತು. ಆ ಬಗ್ಗೆ ತುರ್ತಾಗಿ ಗಮನ ಹರಿ​ಸ​ಬೇ​ಕಿದೆ. ಇದೇ ವರ್ಷ ಆಗಸ್ಟ್‌ನಲ್ಲಿ ತವ​ರಿ​ನಲ್ಲಿ 0-3ರಲ್ಲಿ ವೈಟ್‌ವಾಶ್‌ ಆಗಿದ್ದ ಕೆರಿ​ಬಿ​ಯನ್‌ ಪಡೆ, ಈ ಪ್ರವಾಸದಲ್ಲಿ ವೈಟ್‌ವಾಶ್‌ ತಪ್ಪಿ​ಸಿ​ಕೊ​ಳ್ಳಲು ಹೋರಾಡಲಿದೆ.

ಪಿಚ್‌ ರಿಪೋ​ರ್ಟ್‌

ಗ್ರೀನ್‌ಫೀಲ್ಡ್‌ ಕ್ರೀಡಾಂಗಣ ಈ ವರೆಗೂ 2 ಅಂತಾ​ರಾ​ಷ್ಟ್ರೀಯ ಪಂದ್ಯ​ಗ​ಳಿಗೆ ಮಾತ್ರ ಆತಿಥ್ಯ ವಹಿಸಿದೆ. ಎರ​ಡೂ ಪಂದ್ಯ​ಗ​ಳಲ್ಲಿ ಸ್ಪಿನ್ನರ್‌ಗಳಿಗೆ ನೆರವು ದೊರೆ​ತಿತ್ತು. ಈ ವರ್ಷ ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯ 14 ಪಂದ್ಯ​ಗ​ಳಿಗೆ ಕ್ರೀಡಾಂಗಣ ಆತಿಥ್ಯ ವಹಿ​ಸಿತ್ತು. ಮತ್ತೊಮ್ಮೆ ಸ್ಪಿನ್ನರ್‌ಗಳೇ ಮೇಲುಗೈ ಸಾಧಿ​ಸಿ​ದ್ದರು. ಹೀಗಾಗಿ ಎರಡೂ ತಂಡ​ಗಳು ಪ್ರಮು​ಖವಾಗಿ ಸ್ಪಿನ್ನರ್‌ಗಳನ್ನೇ ವಿಕೆಟ್‌ ಕಬ​ಳಿ​ಸಲು ಅಸ್ತ್ರಗಳ​ನ್ನಾಗಿ ಬಳ​ಸಿ​ಕೊ​ಳ್ಳ​ಬ​ಹುದು. ಭಾರ​ತೀಯ ಸ್ಪಿನ್ನರ್‌ಗಳು ಹೆಚ್ಚಿನ ಲಾಭ ಪಡೆ​ದರೆ ಅಚ್ಚ​ರಿ​ಯಿಲ್ಲ.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

Follow Us:
Download App:
  • android
  • ios