ವಿಶಾಖಪಟ್ಟಣಂ[ಡಿ.18]: ಆರಂಭಿಕ ಬ್ಯಾಟ್ಸ್ ಮನ್’ಗಳಾದ ರೋಹಿತ್ ಶರ್ಮಾ[159] ಹಾಗೂ ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 387 ರನ್ ಬಾರಿಸಿದ್ದು, ವಿಂಡೀಸ್’ಗೆ ಕಠಿಣ ಗುರಿ ನೀಡಿದೆ.

2ನೇ ಏಕದಿನ: ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೆಂಚುರಿ!

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಅದ್ಭುತ ಪ್ರದರ್ಶನ ತೋರಿತು. ಆರಂಭಿಕ ಬ್ಯಾಟ್ಸ್’ಮನ್’ಗಳಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಕೆರಿಬಿಯನ್ ಬೌಲರ್’ಗಳನ್ನು ಮನಬಂದಂತೆ ದಂಡಿಸಿದರು. ಮೊದಲ ವಿಕೆಟ್’ಗೆ ದಾಖಲೆಯ 227 ರನ್’ಗಳ ಜತೆಯಾಟವಾಡಿದರು. ರಾಹುಲ್ 104 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 102 ರನ್ ಬಾರಿಸಿ ಜೋಸೆಫ್’ಗೆ ವಿಕೆಟ್ ಒಪ್ಪಿಸಿದರು. ಇನ್ನು ರೋಹಿತ್ 138 ಎಸೆತಗಳಲ್ಲಿ 17 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 159 ರನ್ ಚಚ್ಚಿದರು. ಆ ಬಳಿಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಮಿಂಚಿನ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು.

ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ; ವಿರಾಟ್‌ಗೂ ಇದೆ ಚಾನ್ಸ್!

ಪಂತ್ ಕೇವಲ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 39 ರನ್ ಬಾರಿಸಿದರೆ, ಅಯ್ಯರ್ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 53 ರನ್ ಸಿಡಿಸಿದರು. ಕೊನೆಯಲ್ಲಿ ಜಾಧವ್ 16 ರನ್ ಚಚ್ಚಿದರು. ವಿಂಡೀಸ್ ಪರ ಕಾಟ್ರೆಲ್ 2 ವಿಕೆಟ್ ಪಡೆದರೆ, ಕೀಮೋ ಪೌಲ್, ಜೋಸೆಫ್ ಹಾಗೂ ಪೊಲ್ಲಾರ್ಡ್ ತಲಾ ಒಂದು ವಿಕೆಟ್ ಪಡೆದರು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವು 1-0 ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯವನ್ನು ಟೀಂ ಇಂಡಿಯಾ ಜಯಿಸಿದರೆ ಸರಣಿ ಸಮಬಲವಾಗಲಿದೆ. ಮೂರನೇ ಪಂದ್ಯ ಡಿಸೆಂಬರ್ 22ರಂದು ಕಟಕ್’ನಲ್ಲಿ ನಡೆಯಲಿದೆ. 

ಸಂಕ್ಷಿಪ್ತ ಸ್ಕೋರ್:

ಭಾರತ: 387/5

ರೋಹಿತ್ ಶರ್ಮಾ: 159

ಕೆ.ಎಲ್. ರಾಹುಲ್: 102

ಶೆಲ್ಡನ್ ಕಾಟ್ರೆಲ್: 83/2

[* ಭಾರತದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]