Asianet Suvarna News Asianet Suvarna News

ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ; ವಿರಾಟ್‌ಗೂ ಇದೆ ಚಾನ್ಸ್!

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ದಾಖಲೆ ಪುಡಿ ಮಾಡಿದ್ದಾರೆ. ರೋಹಿತ್ ಬರೆದ ಹೊಸ ದಾಖಲೆ ಯಾವುದು? ಇಲ್ಲಿದೆ ವಿವರ.

Rohit Sharma breaks virat kohli Most ODI runs in 2019 record
Author
Bengaluru, First Published Dec 18, 2019, 2:53 PM IST

ವಿಶಾಖಪಟ್ಟಣಂ(ಡಿ.18):  ವೆಸ್ಟ್ ಇಂಡೀಸ್ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಜೊತೆಯಾಟದಿಂದ ಭಾರತ ದಿಟ್ಟ ಹೋರಾಟ ನೀಡುತ್ತಿದೆ. ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. 

ಇದನ್ನೂ ಓದಿ: 2ನೇ ಏಕದಿನ: ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ವೆಸ್ಟ್ ಇಂಡೀಸ್, ಇಲ್ಲಿದೆ ಕಾರಣ!

ಪ್ರಸಕ್ತ  ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಸಿಡಿಸಿದ  ಏಕದಿನ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನ ಅಲಂಕರಿಸಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 1292 ರನ್ ಸಿಡಿಸಿದ್ದರು. ಇದೀಗ ರೋಹಿತ್ ಶರ್ಮಾ ಈ ಗಡಿ ದಾಟಿದ್ದಾರೆ. ಈ ಮೂಲಕ ಕೊಹ್ಲಿ ದಾಖಲೆ ಪುಟಿ ಮಾಡಿದ್ದಾರೆ. ಆದರೆ ರೋಹಿತ್ ಶರ್ಮಾ ಹಿಂದಿಕ್ಕಿಲು ಕೊಹ್ಲಿಗೂ ಅವಕಾಶವಿದೆ. 

ಇದನ್ನೂ ಓದಿ: ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ

2019ರ ಗರಿಷ್ಠ ಏಕದಿನ ರನ್ ಸರದಾರರು
1302* ರೋಹಿತ್ ಶರ್ಮಾ
1292 ವಿರಾಟ್ ಕೊಹ್ಲಿ
1225 ಶೈ ಹೋಪ್

ಮೊದಲ 3 ಸ್ಥಾನದಲ್ಲಿರುವ ರೋಹಿತ್, ವಿರಾಟ್ ಕೊಹ್ಲಿ ಹಾಗೂ ವಿಂಡೀಸ್ ಕ್ರಿಕೆಟಿಗ ಶೈ ಹೋಪ್‌ಗೆ ಅಗ್ರಸ್ಥಾನ ಬರಲು ಅವಕಾಶವಿದೆ. ಕಾರಣ ಭಾರತ ಹಾಗೂ ವೆಸ್ಟ್ ಇಂಡೀಸ್ ಇನ್ನೊಂದು ಏಕದಿನ ಪಂದ್ಯ ಆಡಲಿದೆ.  ಸದ್ಯ ರೋಹಿತ್ ಅಗ್ರಸ್ಥಾನದಲ್ಲಿದ್ದರೆ, ರೋಹಿತ್‌ ಶರ್ಮಾ ಪ್ರದರ್ಶನವನ್ನು ಮೀರಿಸಿದರೆ, ರೋಹಿತ್ ದಾಖಲೆ ಕೂಡ ಅಳಿಸಿ ಹೋಗಲಿದೆ. 

ಕ್ಯಾಲೆಂಡರ್ ವರ್ಷದಲ್ಲಿ ರೋಹಿತ್ ರನ್ ಸಾಧನೆ
1300* ರನ್(2019)
1293 ರನ್(2017)
1196 ರನ್(2013)
1030 ರನ್ (2018)

Follow Us:
Download App:
  • android
  • ios