Asianet Suvarna News Asianet Suvarna News

ಇಂದಿನಿಂದ ಮಹಿಳಾ ಏಷ್ಯಾಕಪ್ ಟಿ20; ಭಾರತಕ್ಕಿಂದು ಪಾಕಿಸ್ತಾನ ಚಾಲೆಂಜ್‌

ಈ ವರೆಗೂ ನಡೆದಿರುವ ಏಕದಿನ ಮಾದರಿಯಲ್ಲಿ ನಾಲ್ಕಕ್ಕೆ ನಾಲ್ಕು, ಟಿ20 ಮಾದರಿಯಲ್ಲಿ ನಾಲ್ಕರಲ್ಲಿ ಮೂರು ಆವೃತ್ತಿಗಳನ್ನು ಭಾರತ ಗೆದ್ದುಕೊಂಡಿದೆ. 2024ರ ಏಷ್ಯಾಕಪ್ ಅನ್ನು ತಂಡಗಳು ಇದೇ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸಿದ್ಧತೆಗೆ ಬಳಸಿಕೊಳ್ಳಲಿವೆ.

India vs Pakistan Smriti Mandhana Harmanpreet Kaur Start Womens Asia Cup Title Defence kvn
Author
First Published Jul 19, 2024, 10:28 AM IST | Last Updated Jul 19, 2024, 10:56 AM IST

ದಾಂಬುಲಾ: 9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್‌ಗೆ ಶುಕ್ರವಾರ ಚಾಲನೆ ಸಿಗಲಿದ್ದು, ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿ ಯಲ್ಲಿ 8 ತಂಡಗಳು ಕಣಕ್ಕಿಳಿಯಲಿವೆ. ಹಾಲಿ ಹಾಗೂ 7 ಬಾರಿ ಚಾಂಪಿಯನ್ ಭಾರತವೇ ಈ ಸಲವೂ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದು, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಸಹ ರೇಸ್‌ನಲ್ಲಿವೆ.

ಈ ವರೆಗೂ ನಡೆದಿರುವ ಏಕದಿನ ಮಾದರಿಯಲ್ಲಿ ನಾಲ್ಕಕ್ಕೆ ನಾಲ್ಕು, ಟಿ20 ಮಾದರಿಯಲ್ಲಿ ನಾಲ್ಕರಲ್ಲಿ ಮೂರು ಆವೃತ್ತಿಗಳನ್ನು ಭಾರತ ಗೆದ್ದುಕೊಂಡಿದೆ. 2024ರ ಏಷ್ಯಾಕಪ್ ಅನ್ನು ತಂಡಗಳು ಇದೇ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸಿದ್ಧತೆಗೆ ಬಳಸಿಕೊಳ್ಳಲಿವೆ. ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನದ ಜೊತೆ ಯುಎಇ, ಥಾಯ್ಲೆಂಡ್, ಮಲೇಷ್ಯಾ ಹಾಗೂ ನೇಪಾಳ ತಂಡಗಳು ಸಹ ಸೆಣಸಲಿವೆ.

ಶ್ರೀಲಂಕಾ ಟಿ20 ಸರಣಿಗೆ ಸೂರ್ಯಕುಮಾರ್ ನಾಯಕ, ಏಕದಿನಕ್ಕೆ ಮರಳಿದ ಕೊಹ್ಲಿ-ರೋಹಿತ್

ಭರ್ಜರಿ ಲಯದಲ್ಲಿ ಭಾರತ: ಭಾರತ ತಂಡ ಈ ಟೂರ್ನಿಗೆ ಉತ್ತಮ ಸಿದ್ಧತೆ ನಡೆಸಿದೆ. ಇತ್ತೀಚೆಗೆ ತವರಿನಲ್ಲಿ ನಡೆದ ದ. ಆಫ್ರಿಕಾ ವಿರುದ್ಧ 3 ಪಂದ್ಯಗಳ ಸರಣಿಯನ್ನು 1-1ರಲ್ಲಿ ಡ್ರಾ ಮಾಡಿಕೊಂಡ ಭಾರತ ಅದಕ್ಕೂಮೊದಲು ಬಾಂಗ್ಲಾ ಪ್ರವಾಸ ಕೈಗೊಂಡು, ಆ ತಂಡವನ್ನು 5-0ಯಲ್ಲಿ ಸೋಲಿಸಿತ್ತು. ಸ್ಮೃತಿ ಮಂಧನಾ ಉತ್ಕೃಷ್ಟ ಲಯದಲ್ಲಿದ್ದು, ನಾಯಕಿ ಹರ್ಮನ್‌ ಪ್ರೀತ್ ಕೌರ್ ಕೂಡ ಉತ್ತಮ ಲಯ ಕಾಯ್ದುಕೊಂಡಿದ್ದಾರೆ. ಸ್ಪಿನ್ ವಿಭಾಗ ಬಲಿಷ್ಠವಾಗಿದೆ. ಪೂಜಾ ವೇಗದ ಬೌಲಿಂಗ್ ಟ್ರಂಪ್‌ಕಾರ್ಡ್ ಆಗಿ ರೂಪುಗೊಂಡಿದ್ದಾರೆ.

ಮತ್ತೊಂದೆಡೆ ಭಾರತದ ಮೊದಲ ಎದುರಾಳಿ ಪಾಕಿಸ್ತಾನ 2023ರ ಏಪ್ರಿಲ್‌ನಿಂದೀಚೆಗೆ 19 ಟಿ20 ಆಡಿದ್ದು, 7ರಲ್ಲಿ ಗೆದ್ದಿದೆ. ತಂಡ ಸ್ಥಿರ ಪ್ರದರ್ಶನ ತೋರಲು ತಿಣುಕಾಡುತ್ತಿದೆ.

ಏಷ್ಯಾಕಪ್ ಟೂರ್ನಿ ಮಾದರಿ ಹೇಗೆ?

8 ತಂಡಗಳನ್ನು ತಲಾ 4 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಹಾಗೂ ನೇಪಾಳ ತಂಡಗಳಿದ್ದು, 'ಬಿ' ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ, ಥಾಯ್ಲೆಂಡ್ ತಂಡಗಳಿವೆ. ಗುಂಪಿನಲ್ಲಿ ಪ್ರತಿ ತಂಡ 3 ಪಂದ್ಯ ಆಡಲಿದ್ದು, ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮೀಸ್‌ಗೇರಲಿವೆ. ಜು.26ರಂದು ಸೆಮಿಫೈನಲ್ ನಡೆಯಲಿದ್ದು, ಜು.28ಕ್ಕೆ ಫೈನಲ್ ನಿಗದಿಯಾಗಿದೆ.

ಇಂದಿನ ಪಂದ್ಯಗಳು:

ನೇಪಾಳ Vs ಯುಎಇ, ಮಧ್ಯಾಹ್ನ 2ಕ್ಕೆ, 
ಭಾರತ vs ಪಾಕಿಸ್ತಾನ, ಸಂಜೆ 7ಕ್ಕೆ. 
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್
 

Latest Videos
Follow Us:
Download App:
  • android
  • ios