Asianet Suvarna News Asianet Suvarna News

ಶ್ರೀಲಂಕಾ ಟಿ20 ಸರಣಿಗೆ ಸೂರ್ಯಕುಮಾರ್ ನಾಯಕ, ಏಕದಿನಕ್ಕೆ ಮರಳಿದ ಕೊಹ್ಲಿ-ರೋಹಿತ್

ರೋಹಿತ್ ಶರ್ಮಾ ನಿವೃತ್ತಿಯಿಂದ ತೆರವಾಗಿದ್ದ ಭಾರತ ಟಿ20 ನಾಯಕ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಗಂಭೀರ್ ಮಾರ್ಗದರ್ಶನ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್‌ಗೆ ಟಿ20 ನಾಯಕ ಪಟ್ಟ ನೀಡಿದೆ. ಇನ್ನು ಲಂಕಾ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮರಳಿದ್ದಾರೆ. ಶ್ರೀಲಂಕಾ ಸರಣಿಗೆ ಬಿಸಿಸಿಐ ಪ್ರಕಟಿಸಿದ ತಂಡ ಇಲ್ಲಿದೆ.
 

BCCI Announces team India squad for Sri lanka series suryakumar yadav named as t20 captain ckm
Author
First Published Jul 18, 2024, 8:02 PM IST | Last Updated Jul 18, 2024, 8:08 PM IST

ಮುಂಬೈ(ಜು.18) ಟಿ20 ವಿಶ್ವಕಪ್ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದರೆ, ಯುವಕರನ್ನೊಳಗೊಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ ನಡೆದ ಆಯ್ಕೆ ಪ್ರಕ್ರಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್‌ಗೆ ನಾಯಕ ಸ್ಥಾನ ನೀಡಲಾಗಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನಾಯಕನಾಗುತ್ತಾರೆ ಅನ್ನೋ ಮಾತಗಳಿಗೆ ತೆರೆಬಿದ್ದಿದೆ. ಇತ್ತ ಏಕದಿನ ಸರಣಿಗೆ ನಾಯಕ ರೊಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮರಳಿದ್ದಾರೆ.

ರೋಹಿತ್ ಶರ್ಮಾ ಟಿ20 ಮಾದರಿಗೆ ವಿದಾಯ ಹೇಳಿದ ಬಳಿಕ ನಾಯಕ ಜವಾಬ್ದಾರಿ ಯಾರು ನಿರ್ವಹಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಪೈಕಿ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ನೂತನ ಕೋಚ್ ಗೌತಮ್ ಗಂಭೀರ್ ಈ ವಿಚಾರಗಳಲ್ಲಿ ಭಿನ್ನವಾಗಿ ಯೋಚಿಸುತ್ತಾರೆ. ಹೀಗಾಗಿ ಪಾಂಡ್ಯ ನಾಯಕನಾಗುವುದು ಅನುಮಾನ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಹಾರ್ದಿಕ್ ಬದಲು ಸೂರ್ಯಕುಮಾರ್ ಯಾದವ್‌ಗೆ ನಾಯಕ ಸ್ಥಾನ ನೀಡಲಾಗಿದೆ. ಇನ್ನು ಶುಭಮನ್ ಗಿಲ್‌ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಶ್ರೀಲಂಕಾ ಸರಣಿಗೆ ಇಶಾನ್ ಕಿಶನ್ ಆಯ್ಕೆಯಾಗಿಲ್ಲ.

ಗೌತಮ್ ಗಂಭೀರ್ ಕೇಳಿದ್ದು ಈ 5 ಸಹಾಯಕ ಸಿಬ್ಬಂದಿ; ಕೇವಲ ಒಬ್ಬರಿಗಷ್ಟೇ ಗ್ರೀನ್ ಸಿಗ್ನಲ್ ಕೊಟ್ಟ ಬಿಸಿಸಿಐ..!

ಶ್ರೀಲಂಕಾ ವಿರುದ್ದದ ಟಿ20 ಸರಣಿಗೆ ಭಾರತ ತಂಡ ಪ್ರಕಟ
ಸೂರ್ಯಕುಮಾರ್ ಯಾದವ್(ನಾಯಕ), ಶುಭಮನ್ ಗಿಲ್(ಉಪನಾಯಕ), ಯಶಸ್ವಿ ಜೈಸ್ವಾಲ್,  ರಿಂಕು ಸಿಂಗ್, ರಿಯಾನ್ ಪರಾಗ್, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್, ಖಲೀಲ್ ಅಹಮ್ಮದ್, ಮೊಹಮ್ಮದ್ ಸಿರಾಜ್
 
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ನಾಯಕ ರೊಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಇಷ್ಟೇ ಅಲ್ಲ ಕೆಎಲ್ ರಾಹುಲ್ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. 

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್(ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಶಿಂಗ್ಟನ್ ಸುಂದರ್, ಅರ್ಶದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಸರ್ ಪಟೇಲ್, ಖಲೀಲ್ ಅಹಮ್ಮದ್, ಹರ್ಷಿತ್ ರಾಣ

ಐಸಿಸಿ ಹೊಸ ಮುಖ್ಯಸ್ಥ ಆಗ್ತಾರಾ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ?

ಜುಲೈ 27 ರಿಂದ 3 ಟಿ20 ಹಾಗೂ 3 ಏಕದಿನ ಪಂದ್ಯದ ಸರಣಿ ಆರಂಭಗೊಳ್ಳುತ್ತಿದೆ. ಒಟ್ಟು 6 ಪಂದ್ಯಕ್ಕಾಗಿ ಟೀ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಜುಲೈ 27 ರಿಂದ ಆಗಸ್ಟ್ 7ರ ವರೆಗೆ ಟಿ20 ಹಾಗೂ ಏಕದಿನ ಸರಣಿ ನಡೆಯಲಿದೆ. ಟಿ20 ಪಂದ್ಯಗಳು ಸಂಜೆ 7.30ಕ್ಕೆ ಆರಂಭಗೊಂಡರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಟಿ20 ಪಂದ್ಯ ಪಲ್ಲಕೆಲೆಯಲ್ಲಿ ಆಯೋಜಿಸಲಾಗಿದೆ. ಇನ್ನು ಏಕದಿನ ಪಂದ್ಯ ಕೊಲೊಂಬೊದಲ್ಲಿ ನಡೆಯಲಿದೆ.ಜುಲೈ 27 ರಿಂದ 3 ಟಿ20 ಹಾಗೂ 3 ಏಕದಿನ ಪಂದ್ಯದ ಸರಣಿ ಆರಂಭಗೊಳ್ಳುತ್ತಿದೆ. ಒಟ್ಟು 6 ಪಂದ್ಯಕ್ಕಾಗಿ ಟೀ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಜುಲೈ 27 ರಿಂದ ಆಗಸ್ಟ್ 7ರ ವರೆಗೆ ಟಿ20 ಹಾಗೂ ಏಕದಿನ ಸರಣಿ ನಡೆಯಲಿದೆ. ಟಿ20 ಪಂದ್ಯಗಳು ಸಂಜೆ 7.30ಕ್ಕೆ ಆರಂಭಗೊಂಡರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಟಿ20 ಪಂದ್ಯ ಪಲ್ಲಕೆಲೆಯಲ್ಲಿ ಆಯೋಜಿಸಲಾಗಿದೆ. ಇನ್ನು ಏಕದಿನ ಪಂದ್ಯ ಕೊಲೊಂಬೊದಲ್ಲಿ ನಡೆಯಲಿದೆ.

Latest Videos
Follow Us:
Download App:
  • android
  • ios