ನ್ಯೂಜಿಲೆಂಡ್ ವಿರುದ್ಧದ  ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ದಿಗ್ಗಜರ ಸಾಲಿಗೆ ಸೇರಿದ್ದಾರೆ. ರೋಹಿತ್ ಬರೆದ ದಾಖಲೆ ಏನು? ಇದರ ನಡುವೆ ಆತಂಕವೇನು?

ದುಬೈ(ಮಾ.09) ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಈ ಪಂದ್ಯ ಪ್ರತಿ ಕ್ಷಣಕ್ಕೂ ಕುತೂಹಲ ಹೆಚ್ಚುತ್ತಿದೆ. ನ್ಯೂಜಿಲೆಂಡ್ ನೀಡಿದ 252 ರನ್ ಟಾರ್ಗೆಟ್ ಚೇಸಿಂಗ್ ವೇಳೆ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿತ್ತು.ಆದರೆ ವಿಕೆಟ್ ಕಳೆದುಕೊಂಡಿದೆ. ಇದರ ನಡುವೆ ನಾಯಕ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ದಿಗ್ಗಜರ ಸಾಲಿಗೆ ಸೇರಿದ್ದಾರೆ.

ರೋಹಿತ್ ಶರ್ಮಾ ದಾಖಲೆ
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ 76 ರನ್ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧ ಏಕದಿನ ಮಾದರಿಯಲ್ಲಿ 1,000 ರನ್ ಪೂರೈಸಿದ್ದಾರೆ. ಈ ಮೂಲಕ ಕಿವಿಸ್ ವಿರುದ್ದ 1000 ರನ್ ಪೂರೈಸಿದ ಭಾರತದ 7ನೇ ಬ್ಯಾಟರ್ ಅನ್ನೋ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್ ವಿರುದ್ದ 1,000 ರನ್ ದಾಖಲೆ(ಏಕದಿನ)
ಸಚಿನ್ ತೆಂಡೂಲ್ಕರ್: 1750 ರನ್
ವಿರಾಟ್ ಕೊಹ್ಲಿ : 1656 ರನ್
ವೀರೇಂದ್ರ ಸೆಹ್ವಾಗ್: 1157 ರನ್
ಮೊಹಮ್ಮದ್ ಅಜರುದ್ದೀನ್: 1118 ರನ್
ಸೌರವ್ ಗಂಗೂಲಿ: 1079 ರನ್
ರಾಹುಲ್ ದ್ರಾವಿಡ್: 1032 ರನ್
ರೋಹಿತ್ ಶರ್ಮಾ: 1,000 ರನ್

ಇಷ್ಟೇ ಅಲ್ಲ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ 50 ಪ್ಲಸ್ ರನ್ ಸಿಡಿಸಿದ ನಾಲ್ಕನೇ ನಾಯಕ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಸೌರವ್ ಗಂಗೂಲಿ ಮೊದಲ ಸ್ಥಾನದಲ್ಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ 50 ಪ್ಲಸ್ ರನ್ ಸಿಡಿಸಿದ ನಾಯಕರು
ಸೌರವ್ ಗಂಗೂಲಿ: 117ರನ್
ರೋಹಿತ್ ಶರ್ಮಾ: 76 ರನ್
ಸನತ್ ಜಯಸೂರ್ಯ: 74 ರನ್
ಹ್ಯಾನ್ಸಿ ಕ್ರೊನಿಯೆ: 61* ರನ್

ರೋಹಿತ್ ಶರ್ಮಾ ಕೆಲ ದಾಖಲೆ ಬರೆದರೂ ಸಂಭ್ರಮಿಸುವಂತಿಲ್ಲ. ಕಾರಣ ಟೀಂ ಇಂಡಿಯಾ ಈಗಾಗಲೇ 3 ವಿಕೆಟ್ ಕಳೆದುಕೊಂಡಿದೆ. ಫೈನಲ್ ಸೇರಿದಂತೆ ಪ್ರಮುಖ ಪಂದ್ಯದಲ್ಲಿ ತಂಡವನ್ನು ದಡಸೇರಿಸುವ ವಿರಾಟ್ ಕೊಹ್ಲಿ ವಿಕೆಟ್ ಕೂಡ ಪತನಗೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೇಲೆ ಆತಂಕ ಹಚ್ಚಿದೆ. ಇಷ್ಟೇ ಅಲ್ಲ ನ್ಯೂಜಿಲೆಂಡ್ ಕೂಡ ಸ್ಪಿನ್ ದಾಳಿಯನ್ನು ಪರಿಣಾಮಕಾರಿಯಾಗಿ ಮಾಡುತ್ತಿದೆ. ಹೀಗಾಗಿ ಟೀಂ ಇಂಡಿಯಾ ಹೋರಾಟ ಮತ್ತಷ್ಟು ಕಠಿಣಗೊಂಡಿದೆ.

ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ರೆ, ಪೂನಂ ಪಾಂಡೆ ರೀತಿ ಆಫರ್ ಕೊಟ್ಟ ನಟಿ ತಾನ್ಯ