ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದರೆ ನಟಿ, ಮಾಡೆಲ್ ತಾನ್ಯ ತಮ್ಮ ನ್ಯೂ* ಫೋಟೋ ಪೋಸ್ಟ್ ಮಾಡುವುದಾಗಿ ಘೋಷಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಶತಾಯಗತಾಯ ಭಾರತ ಗೆಲ್ಲಲು ಹಲವರ ಹೋರಾಟ ಶುರುವಾಗಿದೆ.

ಮುಂಬೈ(ಮಾ.09) ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದರೆ, ಕಣ್ಣಿಗೆ ಹಬ್ಬ ಕೊಡಲು ನಟಿ, ಮಾಡೆಲ್ ತಾನ್ಯ ಚೌಧರಿ ಸಜ್ಜಾಗಿದ್ದಾರೆ. ಹಲವು ವರ್ಷಗಳ ಹಿಂದೆ ಮಾಡೆಲ್ ಪೂನಂ ಪಾಂಡೆ ಇದೇ ರೀತಿ ಆಫರ್ ಕೊಟ್ಟು ಸುದ್ದಿಯಾಗಿದ್ದರು. ಇದೀಗ ಪಾಂಡೆಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ನಟಿ ತಾನ್ಯ ಚೌಧರಿ ಟೀಂ ಇಂಡಿಯಾ ಗೆಲುವಿಗೆ ಚಿಯರ್ ಅಪ್ ಮಾಡಿದ್ದಾಳೆ. ಜೊತೆಗೆ ಆಟಗಾರರು ಹಾಗೂ ಅಭಿಮಾನಿಗಳ ಉತ್ಸಾಹ ಹೆಚ್ಚಿಸಲು, ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡರೆ ತಮ್ಮ ಬೆ*ಲೆ ಫೋಟೋ ಪೋಸ್ಟ್ ಮಾಡುವುದಾಗಿ ಘೋಷಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಹೋರಾಟ ನಡೆಸುತ್ತಿದೆ. ಭಾರತಕ್ಕೆ 252 ರನ್ ಟಾರ್ಗೆಟ್ ನೀಡಲಾಗಿದೆ. ಈ ಗುರಿ ಬೆನ್ನಟ್ಟಿ ಭಾರತ ಟ್ರೋಫಿ ಗೆದ್ದುಕೊಂಡರೆ ನಟಿ ತಾನ್ಯ ಕಡೆಯಿಂದ ಬಂಪರ್ ಆಫರ್ ನೀಡಿದ್ದಾರೆ. ವಿಶೇಷ ಅಂದರೆ ಟೀಂ ಇಂಡಿಯಾದ ಅದ್ಭುತ ಪ್ರದರ್ಶನದ ಕಾರಣ ತಾನ್ಯ ಈಗಾಗಲೇ ಟೂ ಪೀಸ್ ಡ್ರೆಸ್‌ನಲ್ಲಿ ಬಂದು ಈ ಘೋಷಣೆ ಮಾಡಿದ್ದಾರೆ. 

ನ್ಯೂಜಿಲೆಂಡ್ ಕ್ರಿಕೆಟಿಗರ ಮುದ್ದಾದ ಮಡದಿಯರಿವರು! ಸ್ಯಾಂಟ್ನರ್ ಪತ್ನಿಯಂತೂ ಗೊಂಬೆ

ತಾನ್ಯ ಈ ಘೋಷಣೆ ಮಾಡುತ್ತಿದ್ದಂತೆ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇವತ್ತು 10 ಗಂಟೆಗೆ ಕಾಯುತ್ತಿರುತ್ತೇವೆ ಎಂದು ಸಂದೇಶ ಕಳುಹಿಸಿದ್ದಾರೆ. ಬಂದಿರುವ ಕಮೆಂಟ್ ಪೈಕಿ ಬಹುತೇಕ ಕಮೆಂಟ್ ರಾತ್ರಿ 10 ಗಂಟೆ ಅಥವಾ 11 ಗಂಟೆ ಎಂದು ನೆನಪಿಸಿದ್ದಾರೆ. ಇಷ್ಟೇ ಅಲ್ಲ ಮತ್ತಷ್ಟು ಮಂದಿ ಸಮಯ ಎಣಿಸುತ್ತಿರುವುದಾಗಿ ಹೇಳಿದ್ದಾರೆ.

Scroll to load tweet…

ಹಲವು ಬಾರಿ ಟೀಂ ಇಂಡಿಯಾ ಐಸಿಸಿ ಟೂರ್ನಿಗಳ ಫೈನಲ್ ಪ್ರವೇಶಿಸದ ಬೆನ್ನಲ್ಲೇ ಮಾಡೆಲ್, ನಟಿಯರು ಈ ರೀತಿಯ ಆಫರ್ ಕೊಡುತ್ತಲೇ ಬಂದಿದ್ದಾರೆ. ಕಣ್ಣಿಗೆ ಹಬ್ಬ ಕೊಡುವ ಈ ರೀತಿಯ ಆಫರ್‌ಗಳ ಹೆಡ್ ಮಾಸ್ಟರ್ ನಟಿ ಪೂನಂ ಪಾಂಡೆ. 2011ರ ವಿಶ್ವಕಪ್ ವೇಳೆ ಪೂನಂ ಪಾಂಡೆ ಇದೀ ರೀತಿಯ ಟೀಂ ಇಂಡಯಾಗೆ ಆಫರ್ ಕೊಟ್ಟಿದ್ದರು. ಬಳಿಕ ಇದು ಭಾರಿ ವಿವಾದವಾಗಿತ್ತು. ಪೂನಂ ಪಾಂಡೆ ತಮ್ಮ ಭರವಸೆಯನ್ನು ಹಲವು ಬಾರಿ ಶೇಕಡಾ 90ರಷ್ಟು ಪೂರೈಸಿದ್ದಾರೆ. 

ಇದೀಗ ತಾನ್ಯ ಚೌಧರಿ ಸರದಿ. ತಾನ್ಯ ಹಾಟ್ ಮಾಡೆಲ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಲ ಸಿನಿಮಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಗಮನಸೆಳೆದಿದ್ದಾರೆ. ಇನ್ನು ಜಾಹೀರಾತು, ಬ್ರ್ಯಾಂಡ್ ಪ್ರಮೋಶನ್ ಸೇರಿದಂತೆ ಹಲವು ವೇದಿಕೆಗಳಲ್ಲಿ ತಾನ್ಯ ಚೌಧರಿ ಕಾಣಿಸಿಕೊಂಡಿದ್ದಾರೆ. ಇದೀಗ ಹೊಸ ಆಫರ್ ಮೂಲಕ ಕೋಲಾಹಲ ಸೃಷ್ಟಿಸಿದ್ದಾರೆ. ಒಂದೆಡೆ ತಾನ್ಯ ಚೌಧರಿ ಅಭಿಮಾನಿಗಳು ತುದಿ ಗಾಲಲ್ಲಿ ನಿಂತಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥನೆಗಳು ನಡೆಯುತ್ತಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನದೊಂದಿಗೆ ಫೈನಲ್ ಪ್ರವೇಶಿಸಿದೆ. ಇತ್ತ ಎದುರಾಳಿ ನ್ಯೂಜಿಲೆಂಡ್ ಕೂಡ ಅಷ್ಟೇ ಬಲಿಷ್ಠವಾಗಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ನ್ಯೂಜಿಲೆಂಜ್ ಬಲಿಷ್ಠವಾಗಿದೆ. 252 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ ಬ್ಯಾಟಿಂಗ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. 

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಿದೆ. ಆದರೆ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ನಿರಾಕರಿಸಿದ ಕಾರಣ ಭಾರತದ ಪಂದ್ಯಗಳು ದುಬೈನಲ್ಲಿ ಆಯೋಜಿಸಲಾಗಿದೆ. ಭಾರತ ಲೀಗ್ ಹಂತದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ದ ಗೆಲುವು ಸಾಧಿಸಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮಣಸಿ ಫೈನಲ್ ಪ್ರವೇಶಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯುತ್ತಿದೆ. 

ಬೆಂಗಳೂರು ಮೂಲದ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಗರ್ಲ್ ಫ್ರೆಂಡ್ ಯಾರು? ಪ್ರೇಮಿಲಾ ಹಿನ್ನೆಲೆ ಏನು?